Site icon Kannada News-suddikshana

ಸಿ.ಟಿ.ರವಿ ವಿರುದ್ಧ ಪ್ರಧಾನಿ ಮೋದಿಗೆ ಹಾಗೂ ರಾಷ್ಟ್ರಪತಿ ಮುರ್ಮುಗೆ ದೂರು:ಲಕ್ಷ್ಮೀ ಹೆಬ್ಬಾಳ್ಕರ್ ಸುಮ್ಮನೇ ಕುರಲ್ಲ…!

ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಎಂದು ಆರೋಪಿಸಿದ್ದು ಈಗಾಗಲೇ ತಿಳಿದ ವಿಷಯ, ಆದರೆ ಸಿ.ಟಿ ರವಿಯವರು ಮಾತ್ರ ನಾನು ಅಶ್ಲೀಲ ಪದ ಬಳಕೆ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ.

 

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ.ರವಿಯವರ ಸಂಘರ್ಷ ಸದ್ಯಕ್ಕಂತು ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ, ಅತ್ತ ಗಂಭೀರ ಆರೋಪ ಮಾಡಿರುವ ಹೆಬ್ಬಾಳ್ಕರ್ ರವಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿದ್ದರೆ, ಇತ್ತ ರವಿ ನಾನು ಆ ರೀತಿಯ ಪದ ಬಳಕೆ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ.ಈ ಮಧ್ಯ ಪ್ರಕರಣವನ್ನು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಗೆ ದೂರು ಕೊಡಲು ಸಚಿವೆ ನಿರ್ಧರಿಸಿದ್ದಾರೆ.

 

ಸಿ.ಟಿ.ರವಿ ವಿರುದ್ಧ ಕಾನೂನು ಕ್ರಮ ಮುಂದುವರೆಸುತ್ತೇನೆ ಎಂದಿರುವ ಲಕ್ಷ್ಮೀ ಹೆಬ್ಬಾಳ್ಕರ್, ಮಾನ್ಯ ಪ್ರಧಾನ ಮಂತ್ರಿಗಳಿಗೂ ಕೇಳ್ತಿನಿ ಅವಕಾಶ ಸಿಕ್ಕರೆ ಅವರನ್ನು ಭೇಟಿ ಮಾಡಿ ನನಗಾದ ಅನ್ಯಾಯದ ವಿರುದ್ಧ ನ್ಯಾಯ ಕೇಳುತ್ತೇನೆ, ಅಲ್ಲದೇ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆಯುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

 

ನನಗೆ ಅನ್ಯಾಯವಾಗಿದೆ ಚೆನ್ನಮ್ಮ ನಾಡಿನ ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ, ರಾಜಕಾರಣದಲ್ಲಿ ಮಹಿಳೆಯರನ್ನು ಹಿಂದೆ ತಳ್ಳೋಕೆ ಅತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ, ಇದರಿಂದ ಹೆದರಿ ಹಿಂದೆ ಸರಿತೀವಿ, ಮನೆಯಲ್ಲಿ‌ ಕೂರ್ತೀವಿ ಅನ್ನೋ‌ ಭ್ರಮೆಯನ್ನು ಮೊದಲು ಬಿಡಿ ಎಂದು ಸಚಿವೆ ಹೇಳಿದ್ದಾರೆ

Exit mobile version