ಭೂ ಪರಿವರ್ತನೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮೂಲಕ ಯಾವೆಲ್ಲಾ ವಿಚಾರಗಳನ್ನು ಸರಳೀಕರಣ ಮಾಡಲಾಗಿದೆ..?
* ಮಾಸ್ಟರ್ ಪ್ಲಾನ್ ಪ್ರಕಾರ ಭೂ ಬಳಕೆಗೆ ಪರಿವರ್ತನೆ ಅವಶ್ಯಕತೆ ತೆಗೆದುಹಾಕಲಾಗಿದೆ. ಇಂತಹ ಪ್ರಕರಣಗಳಲ್ಲಿ ನೇರವಾಗಿ Plan approval ಗೆ ಹೋಗಬಹುದು.
* ಮಾಸ್ಟರ್ ಪ್ಲಾನ್ ಹೊರಗಿನ ಹಾಗೂ ಪರಿಭಾವಿತ ಭೂ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಸಹ ಈ ಹಿಂದೆ ಮೂರು ನಾಲ್ಕು ತಿಂಗಳುಸಮಯ ಆಗುತ್ತಿತ್ತು. ಆದರೆ, ಪ್ರಸ್ತುತ 30 ದಿನಗಳಲ್ಲಿ ಭೂಪರಿವರ್ತನೆ ಕಡ್ಡಾಯಗೊಳಿಸಲಾಗಿದೆ.
* ಭೂ ಪರಿವರ್ತನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
* ಜಿಲ್ಲಾಧಿಕಾರಿಗಳು 30ದಿನಗಳ ಒಳಗಾಗಿ ಸಂಬಂಧಿತಯಾವುದೇ ಇಲಾಖೆಯ ಜೊತೆಗೆ ಚರ್ಚಿಸಿ ಪರಿವರ್ತನೆಗೆಅವಕಾಶ ನೀಡಬಹುದು ಅಥವಾ ತಿರಸ್ಕರಿಸಬಹುದು.
* 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಯಾವನಿರ್ಧಾರವೂ ತೆಗೆದುಕೊಳ್ಳದಿದ್ದಲ್ಲಿ, ಸ್ವಯಂ ಚಾಲಿತವಾಗಿ ಭೂ ಪರಿವರ್ತನೆಗೆ ಅವಕಾಶ ಲಭ್ಯವಾಗುತ್ತದೆ.
* ಸಣ್ಣ ಕೈಗಾರಿಕೆಗಳು ಎರಡು ಎಕರೆ ವರೆಗೆ ಕೈಗಾರಿಕಾಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯ ಇಲ್ಲ.
* ಭಾರತ ದೇಶದಲ್ಲಿ ಪ್ರಸ್ತುತ ನವೀಕರಿಸಬಹುದಾದಇಂಧನದ ಕಡೆ ಹೆಜ್ಜೆ ಇಡುತ್ತಿದೆ. ಹೀಗಾಗಿ ಇದಕ್ಕೂ ಭೂಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.
* ಇಂಧನ ಇಲಾಖೆಯ ಅನುಮತಿ ಪಡೆದಿದ್ದರೆ, ನವೀಕರಿಸಬಹುದಾದ ಇಂಧನದ ಯೋಜನಾ ಘಟಕವನ್ನು ನಿರ್ಮಿಸಲುಭೂ ಪರಿವರ್ತನೆ ಅಗತ್ಯ ಇಲ್ಲ.
* ಭೂ ಪರಿವರ್ತನೆಗೆ ಸಂಬಂಧಿಸಿದ ವಿಚಾರಗಳನ್ನು ಸರಳೀಕರಣಗೊಳಿಸಲಾಗಿದೆ.
* ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಕಂದಾಯನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈಹಿಂದೆ ಯಾವುದೇ ಸ್ಪಷ್ಟ ನಿಯಮ ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನುಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ.
* RCCMS ಸೇರಿದಂತೆ ಡಿಜಿಟೈಶೇಷನ್ ಮುಖಾಂತರ ಆದೇಶಗಳನ್ನು ನೀಡಲಾಗುವುದು. ಇವು ಸುಧಾರಣಾ ಕಾನೂನುಗಳಿಗೆ ನ್ಯಾಯಿಕ ಬಲವನ್ನು ಒದಗಿಸಲಾಗಿದೆ.
* ಹೀಗಾಗಿ ಅದಕ್ಕೂ ನಿಯಮಗಳನ್ನು ರೂಪಿಸಿ ಸರಿಪಡಿಸಲಾಗಿದೆ. ಕಾನೂನು ಮೀರಿ ಯಾರೂ ನ್ಯಾಯಧಾನ ನೀಡಲು ಸಾಧ್ಯವಿಲ್ಲ. ಹೀಗೆ ವಿವಿಧ ಕಲಂಗಳು ಹಾಗೂ ನಿಯಮಗಳಿಗೆ ತಿದ್ದುಪಡಿ ಮೂಲಕಜಾರಿಗೊಳಿಸಲಾಗಿದೆ.
* ಕಂದಾಯ ನ್ಯಾಯಾಲಯಗಳನ್ನು online ಮುಖಾಂತರ ನಡೆಸಲು ಕಾನೂನು ತರಲಾಗಿದೆ. ವಾದಿ ಹಾಗೂ ಪ್ರತಿವಾದಿಗಳು ಕಚೇರಿಗಳಿಗೆ ಸುತ್ತುವುದರ ಬದಲಿಗೆ ಅವರು online ಮುಖಾಂತರವೇ ನ್ಯಾಯಾಲಯ ಕಲಾಪಗಳಿಗೆ ಭಾಗವಹಿಸುವ ಸುಲಭ ಮಾರ್ಗ ನೀಡಲಾಗಿದೆ.
* ಅದೇ ರೀತಿ ಭೂ ಸುರಕ್ಷಾ ಮೋಜನಿಗೆ ಈಗ ಕಾನೂನಿನ ಬಲ ಒದಗಿಸಲಾಗಿದ್ದು, ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.
ಒಟ್ಟಾರೆ ಉದ್ದೇಶ: ಆಡಳಿತದಲ್ಲಿ ಸರಳೀಕರಣ ಪಾರದರ್ಶಕತೆ ಜಾರಿಗೊಳಿಸುವ ಮುಖಾಂತರ ಆಡಳಿತದಲ್ಲಿ ಗಣನೀಯ ಸುಧಾರಣೆ ತರುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.





Leave a comment