Site icon Kannada News-suddikshana

‘ನಾನು ಹೆದರಲ್ಲ, ರಾಜೀನಾಮೆ ನೀಡಲ್ಲ’: BJP-JDS ಗೆ ಸವಾಲೆಸೆದ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು: ನಾನು ಹೆದರಲ್ಲ: ರಾಜೀನಾಮೆ ನೀಡಲ್ಲ. ನಾನು ಹೋರಾಟದಿಂದ ಬಂದವನು. ನಿಮ್ಮ ಷಡ್ಯಂತ್ರವನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು BJP-JDS ಗೆ ನೇರ ಎಚ್ಚರಿಕೆ ನೀಡಿದರು.

ಯಲಹಂಕದ ರಾಜ್ಯದ ಪ್ರಪಥಮ ನೈಸರ್ಗಿಕ ಅನಿಲ ಆಧಾರಿತ 370 ಮೆ.ವ್ಯಾ ಸಾಮರ್ಥ್ಯದ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ನಾನು ರಾಜೀನಾಮೆ ಕೊಡ್ತೀನಿ ಅಂತ ಕಾಯ್ಕೊಂಡು ಕೂತಿದ್ದೀರಾ? ಯಾವ ತಪ್ಪನ್ನೂ ಮಾಡದ ನನ್ನನ್ನು ಷಡ್ಯಂತ್ರದಿಂದ ಇಳಿಸಲು ನೋಡುತ್ತಿದ್ದೀರ. ಇದು ಅಸಾಧ್ಯ. ನಾನು ಹೋರಾಟ ರಾಜಕಾರಣದಿಂದ ಬಂದವನು. ನಿಮ್ಮನ್ನು ರಾಜಕೀಯವಾಗಿ ಎದುರಿಗೆ ಗೆಲ್ತೀನಿ. ನಿಮ್ಮ ಷಡ್ಯಂತ್ರ ಸೋಲಿಸ್ತೀನಿ ಎಂದು ಬಹಿರಂಗವಾಗಿ ತೊಡೆತಟ್ಟಿದರು.

 

Exit mobile version