ದಾವಣಗೆರೆ: ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯ ಅವರು ಡಿಸೆಂಬರ್-2025ರ ಮಾಹೆಯಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.26 ರಂದು ಮಧ್ಯಾಹ್ನ 12.15 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ದಾವಣಗೆರೆ ಎಂ.ಬಿ.ಎ. ಮೈದಾನಕ್ಕೆ ಅಗಮಿಸುವರು. ನಂತರ ಶ್ರೀಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ನಡೆಯುವ ಮಾಜಿ ಸಚಿವರು ಹಾಗೂ ಶಾಸಕರಾದ ಲಿಂ||ಶಾಮನೂರು ಶಿವಶಂಕರಪ್ಪ ನವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೆಲಿಕ್ಯಾಪ್ಟರ್ ಮೂಲಕ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ತೆರಳುವರು.
ವಿಧಾನಸಭಾ ಸಭಾಧ್ಯಕ್ಷರ ಜಿಲ್ಲಾ ಪ್ರವಾಸ:
ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ ಅವರು ಡಿ.26 ರಂದು ಬೆಳಿಗ್ಗೆ 2.00 ಗಂಟೆಗೆ ದಾವಣಗೆರೆಗೆ ಅಗಮಿಸುವರು. ನಂತರ ಶ್ರೀಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ನಡೆಯುವ ಮಾಜಿ ಸಚಿವರು ಹಾಗೂ ಶಾಸಕರಾದ ಲಿಂ||ಶಾಮನೂರು ಶಿವಶಂಕರಪ್ಪ ನವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 2.30 ಗಂಟೆಗೆ ಗದಗ ತೆರಳುವರು.





Leave a comment