Site icon Kannada News-suddikshana

11 ಜನರ ಸಾವಿಗೆ ಕಾರಣ ತಿಳಿಸಿದ ಸಿಎಂ ಸಿದ್ದರಾಮಯ್ಯ..!

SUDDIKSHANA KANNADA NEWS/ DAVANAGERE/ DATE-04-06-2025

ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅನಿರೀಕ್ಷಿತ ಘಟನೆಗಳು ನಡೆದಿಲ್ಲ. ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಯಾರೂ ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಿಕಾಗೋಷ್ಛಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಅಸೋಸಿಯೇಷನ್ ಅವರಾಗಲೀ, ನಾವಾಗಲೀ ನಿರೀಕ್ಷೆ ಮಾಡಿರಲಿಲ್ಲ. ಕ್ರೀಡಾಂಗಣದಲ್ಲಿ 35 ಸಾವಿರ ಜನರು ಕೂರಬಹುದಿತ್ತು. 35 ಸಾವಿರ ಆಸನಗಳಿರುವ ಕ್ರೀಡಾಂಗಣ. ಆದ್ರೆ,
ಎರಡರಿಂದ ಮೂರು ಲಕ್ಷ ಜನರು ಬಂದಿದ್ದಾರೆ.ವಿಧಾನಸೌಧದ ಬಳಿ ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. ಇಷ್ಟೊಂದು ಜನರ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.

ಇದು ಆಘಾತಕಾರಿ, ಹೃದಯವಿದ್ರಾವಕ ಘಟನೆ. ನಾವ್ಯಾರು ಇಷ್ಟೊಂದು ಜನರು ಬರುತ್ತಾರೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಕ್ರೀಡಾಂಗಣದಲ್ಲಿನ ಸಾಮರ್ಥ್ಯ ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚಿನ ಜನರು ಬರಬಹುದು ಎಂದುಕೊಂಡಿದ್ದೆವು. ಆದ್ರೆ, ಇದು ಆಗಿದ್ದೇ ಬೇರೆ ಎಂದು ಹೇಳಿದರು.

Exit mobile version