Home ದಾವಣಗೆರೆ ಚಿನ್ಮಯಿ ರಾಷ್ಟ್ರ ಮಟ್ಟದ ದಕ್ಷಿಣ ವಲಯಕ್ಕೆ ಆಯ್ಕೆ
ದಾವಣಗೆರೆಬೆಂಗಳೂರು

ಚಿನ್ಮಯಿ ರಾಷ್ಟ್ರ ಮಟ್ಟದ ದಕ್ಷಿಣ ವಲಯಕ್ಕೆ ಆಯ್ಕೆ

Share
Share

ದಾವಣಗೆರೆ: ಧಾರವಾಡದಲ್ಲಿ ಜ.7 ರಂದು ನಡೆದ ಪ್ರೌಢಶಾಲಾ ಹಂತದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವೈಯಕ್ತಿಕ ವಿಭಾಗದಲ್ಲಿ ದಾವಣಗೆರೆ ದಕ್ಷಿಣ ವಲಯದ ಕೊಡಗನೂರು ಕ್ಲಸ್ಟರ್ ನ ದೊಡ್ಡರಂಗವ್ವನಗಳ್ಳಿ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಚಿನ್ಮಯಿ.ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಗುಂಪು ವಿಭಾಗದಲ್ಲಿ ಚನ್ನಗಿರಿ ತಾ; ಕಾಕನೂರು ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯದಿಂದ ಆಯ್ಕೆಯಾಗಿದ್ದು ಈ ಎರಡು ತಂಡ ಜನವರಿ 18 ರಂದು ತೆಲಂಗಾಣದಲ್ಲಿ ನಡೆಯುವ ದಕ್ಷಿಣ ವಲಯ ಸ್ಪರ್ಧೆಯಲ್ಲಿ ಭಾಗವಹಿಸುವರೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಜಿ.ಕೊಟ್ರೇಶ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *