Site icon Kannada News-suddikshana

ಪ್ಯಾಲೆಸ್ಟೀ ನ್ ಬಾವುಟ ಹಿಡಿದು ಬೈಕ್‌ನಲ್ಲಿ ಸಂಚರಿಸುತ್ತಿದ್ದ 6 ಮಂದಿ ವಶಕ್ಕೆ

ಚಿಕ್ಕಮಗಳೂರು: ಪ್ಯಾಲೆಸ್ಟೀ ನ್ ಬಾವುಟ ಹಿಡಿದು ಎರಡು ಬೈಕ್‌ನಲ್ಲಿ ನಗರದಲ್ಲಿ ಸಂಚರಿಸಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಲ್ಲರೂ ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ದಂಟರಮಕ್ಕಿ ಕೆರೆ ಬಳಿ ರಸ್ತೆಯಲ್ಲಿ ಬಾವುಟ ಹಿಡಿದು ಫ್ರೀ ಪ್ಯಾಲೆಸ್ಟೀನ್ ಎಂದು ಘೋಷಣೆ ಕೂಗಿಕೊಂಡು ಬೈಕ್ ಮತ್ತು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರು. ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಬಾವುಟ ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version