Site icon Kannada News-suddikshana

Channagiri:ಪಟ್ಟುಬಿಡದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್: ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ವಿರುದ್ಧ ಯಾವ ರೀತಿ ಕ್ರಮ ಎಂದ್ರು ಎಸ್ಪಿ….?

SP DVG ARUN

SP DVG ARUN

SUDDIKSHANA KANNADA NEWS/ DAVANAGERE/ DATE:16-07-2023

 

ದಾವಣಗೆರೆ: ಚನ್ನಗಿರಿ(Channagiri)ಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಇನ್ ಸ್ಪೆಕ್ಟರ್ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಶಿವಗಂಗಾ ವಿ. ಬಸವರಾಜ್ ನೇತೃತ್ವದಲ್ಲಿ ನಡೆಸಿದ್ದ ಅಹೋರಾತ್ರಿ ಪ್ರತಿಭಟನೆ ಅಂತ್ಯ ಕಂಡಿದೆ. ಸ್ಥಳಕ್ಕೆ ಎಸ್ಪಿ ಡಾ. ಕೆ. ಅರುಣ್ ಅವರು ಭೇಟಿ ನೀಡಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.

ಭಾನುವಾರ ಮಧ್ಯಾಹ್ನ ಚನ್ನಗಿರಿ (Channagiri) ಪೊಲೀಸ್ ಠಾಣೆ ಮುಂದೆ ಹಾಜರಾದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಪೊಲೀಸರ ದೌರ್ಜನ್ಯ ವಿರುದ್ಧ ಪ್ರತಿಭಟನೆಗೆ ಇಳಿದರು. ಸ್ಥಳಕ್ಕೆ ಶಾಸಕರು ಬರುತ್ತಿದ್ದಂತೆ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿತು. ಎಸ್ಪಿ ಬರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆ ನಂತರ ತಡರಾತ್ರಿಯವರೆಗೆ ಪ್ರತಿಭಟನೆ ಮುಂದುವರಿದಿತ್ತು. ಪ್ರಕರಣದ ಗಂಭೀರತೆ ಅರಿತ ಎಸ್ಪಿ ಅರುಣ್ ಅವರು ಸ್ಥಳಕ್ಕೆ
ಆಗಮಿಸಿ ಭರವಸೆ ನೀಡಿದರು.

ಚನ್ನಗಿರಿ (Channagiri) ಶಾಸಕರು ಬಂದು ಸಬ್ ಇನ್ ಸ್ಪೆಕ್ಟರ್ ಮತ್ತು ಇನ್ ಸ್ಪೆಕ್ಟರ್ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಕೆಲವೊಂದು ವಿಷಯಗಳನ್ನು ತಿಳಿಸಿದ್ದಾರೆ. ಎಲ್ಲಾ ಪ್ರಕರಣಗಳನ್ನೂ ಸಂಪೂರ್ಣವಾಗಿ ತನಿಖೆ ನಡೆಸುತ್ತೇವೆ. ಪರಿಶೀಲನೆ ಮಾಡಿದ ಕೂಡಲೇ ಪೊಲೀಸ್ ಅಧಿಕಾರಿಗಳ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಶಾಸಕರು ಹೇಳಿರುವ ದೂರುಗಳನ್ನು ಕೇಳಿದ್ದೇವೆ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದಕ್ಕೆ ಶಾಸಕರು ಸಮ್ಮತಿ ಸೂಚಿಸಿದರು.

ಈ ಸುದ್ದಿಯನ್ನೂ ಓದಿ: 

G. M. Siddeshwara: ಎಸ್ ವೈ ಟ್ಯಾಕ್ಸ್ ಅಂದ್ರೆ ಏನು…? ಸಿದ್ದೇಶ್ವರ ಭ್ರಷ್ಟಾಚಾರ ಮಾಡದಿದ್ದರೆ ಆಣೆ ಮಾಡಲಿ, ದುಗ್ಗಮ್ಮ ದೇಗುಲದಲ್ಲಿ ನಾನು ದಾಖಲೆ ಬಿಡುಗಡೆ ಮಾಡುವೆ: ದಿನೇಶ್ ಕೆ. ಶೆಟ್ಟಿ ಪಂಥಾಹ್ವಾನ

ಬಳಿಕ ಮಾತನಾಡಿದ ಶಿವಗಂಗಾ ವಿ. ಬಸವರಾಜ್ ಅವರು, ಜನಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ನಿಮ್ಮ ಹೋರಾಟಕ್ಕೆ ನಾನು ಕೈಜೋಡಿಸಿದ್ದೇನೆ. ಎಸ್ಪಿಯವರ ಗಮನಕ್ಕೆ ತಂದಿದ್ದೇವೆ. ಪೊಲೀಸರ ಕಾರ್ಯಕ್ಷಮತೆ ಸರಿಯಿಲ್ಲದ ಕಾರಣ ತನಿಖೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದೇವೆ. ಜನರಿಗೆ ತೊಂದರೆಯಾಗಿದ್ದು, ಹೋರಾಟದಲ್ಲಿ ನಿಮ್ಮ ಜೊತೆ ಈಗಲೂ ಇದ್ದೇನೆ. ಮುಂದೆಯೂ ಇರುತ್ತೇನೆ. ಈ ಠಾಣೆಯಲ್ಲಿ ಈಗಿನ ಇನ್ ಸ್ಪೆಕ್ಟರ್ ಮತ್ತು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅವರನ್ನೇ ಮುಂದುವರಿಸಿದಷ್ಟು ಸಮಸ್ಯೆ ಮತ್ತಷ್ಟು ಜಾಸ್ತಿಯಾಗುತ್ತದೆ. ಈ ಕೂಡಲೇ ಇಂದಿನಿಂದಲೇ ರಜೆ ಮೇಲೆ ಇಬ್ಬರು ಅಧಿಕಾರಿಗಳು ಹೊರಗಡೆ ಹೋಗುತ್ತಿದ್ದಾರೆ. ಅವರ ಜಾಗದಲ್ಲಿ ಬೇರೆ ಅಧಿಕಾರಿಗಳು ಬರುತ್ತಾರೆ ಎಂದು ತಿಳಿಸಿದರು.

ಸಾರ್ವಜನಿಕರ ಮೇಲೆ ಸುಳ್ಳು ದೂರು ದಾಖಲಿಸಿಕೊಂಡಿರುವ ಕುರಿತಂತೆಯೂ ತನಿಖೆ ನಡೆಸಲಾಗುತ್ತದೆ. ನ್ಯಾಯ ಕೊಡಿಸುವ ಭರವಸೆಯನ್ನು ಎಸ್ಪಿ ಅವರೇ ನೀಡಿದ್ದಾರೆ. ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಯಾರೂ ಕೂಗಾಟ, ಧಿಕ್ಕಾರ, ಜೈಕಾರ ಕೂಗದೇ ಹೋಗೋಣ. ಶಾಂತಿ, ಸುವ್ಯವಸ್ಥೆ ಕಾಪಾಡೋಣ, ಕಾನೂನಿಗೆ ಗೌರವ ಕೊಡೋಣ, ಪ್ರತಿಭಟನೆ ಮಾಡದಿದ್ದರೆ ನ್ಯಾಯ ಸಿಗೋದು ಕಡಿಮೆ. ಹಾಗಾಗಿ, ಪ್ರತಿಭಟನೆ ಮಾಡಿದ್ದೇವೆ, ಜಯ ಸಿಕ್ಕಿದೆ ಎಂದು ಶಿವಗಂಗಾ ವಿ. ಬಸವರಾಜ್ ಹೇಳಿದರು.

ಈ ಪ್ರಕರಣದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ಡಾ. ಕೆ. ಅರುಣ್ ಅವರು, ಎಎಸ್ಪಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುವುದು. ಸಮರ್ಪಕವಾಗಿ ತನಿಖೆ ನಡೆಸಿ, ಎಲ್ಲೆಲ್ಲಿ ಲೋಪವಾಗಿದೆ, ಕೇಸ್ ದಾಖಲು, ತನಿಖೆ ವೇಳೆ
ಎಲ್ಲಿ ತಪ್ಪಾಗಿದೆ ಎಂಬ ಕುರಿತಂತೆ ವರದಿ ನೀಡಲಿದ್ದಾರೆ. ಈ ವರದಿ ಆಧರಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಮಾಹಿತಿ ನೀಡಿದರು.

Channagiri MLA Protest, Channagiri News, Channagiri News Updates,

Channagiri Congress Protest,  Channagiri Sp Visit

 

Exit mobile version