Home ಕ್ರೈಂ ನ್ಯೂಸ್ ಚನ್ನಗಿರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಇಬ್ಬರು ಕುಖ್ಯಾತ ಕಳ್ಳರ ತಂಡ ಸೇರಿ ನಾಲ್ವರ ಬಂಧನ, ₹18 ಲಕ್ಷ ಮೌಲ್ಯದ ಸ್ವತ್ತು ವಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಚನ್ನಗಿರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಇಬ್ಬರು ಕುಖ್ಯಾತ ಕಳ್ಳರ ತಂಡ ಸೇರಿ ನಾಲ್ವರ ಬಂಧನ, ₹18 ಲಕ್ಷ ಮೌಲ್ಯದ ಸ್ವತ್ತು ವಶ!

Share
ಚನ್ನಗಿರಿ
Share

ದಾವಣಗೆರೆ: ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ನಿರ್ದೇಶನದಂತೆ, ಚನ್ನಗಿರಿ ಪೊಲೀಸರು ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ 1:

ಮನೆಯ ಬೀಗ ತೆರೆದು ಕಳ್ಳತನ ಮಾಡಿದ್ದ ಮೂವರ ಬಂಧನ

ನಲ್ಲೂರು ಗ್ರಾಮದ ನಿವಾಸಿ ಸೈಯದ್ ನಫೀಜ್ ಅಹಮದ್ ಎಂಬುವವರ ಮನೆಯ ಬೀಗವನ್ನು ಕೀ ಬಳಸಿ ತೆರೆದಿದ್ದ ಕಳ್ಳರು, ಗೋದ್ರೇಜ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ. 98/2026) ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಗಳು:

ಸೈಯದ್ ಮುದಾಸೀರ್ (19 ವರ್ಷ), ನಲ್ಲೂರು ಗ್ರಾಮ.

ಸೈಯದ್ ಮುಜಾಮಿಲ್ (19 ವರ್ಷ), ನಲ್ಲೂರು ಗ್ರಾಮ.

ಮಹಮ್ಮದ್ ಸಾಹಿಲ್ @ ಕಾಲು (24 ವರ್ಷ), ದಾವಣಗೆರೆ ನಗರ.

ವಶಪಡಿಸಿಕೊಂಡ ಸ್ವತ್ತು: ₹10 ಲಕ್ಷ ಮೌಲ್ಯದ 72 ಗ್ರಾಂ ಬಂಗಾರದ ಒಡವೆಗಳು.

ಪ್ರಕರಣ 2:

ಮನೆಗಳವು ಹಾಗೂ ಜಾನುವಾರುಗಳವು – ‘ಮಚ್ಚಾ’ ಅಲಿಯಾಸ್ ರಾಜು ಬಂಧನ

ಚನ್ನಗಿರಿ ಟೌನ್‌ನ ಪಿಡ್ಬ್ಲೂಡು ಕ್ವಾಟ್ರಸ್‌ನಲ್ಲಿ ವಾಸವಿದ್ದ ಗೋಪಾಲ್ ಪವಾರ್ ಎಂಬುವವರ ಮನೆಯ ಹಿಂಬಾಗಿಲು ಮುರಿದು ಕಳ್ಳತನ ಮಾಡಲಾಗಿತ್ತು. ಇದರೊಂದಿಗೆ ಮಾಡಾಳ್, ಶೆಟ್ಟಿಹಳ್ಳಿ ಮತ್ತು ಅಜ್ಜಿಹಳ್ಳಿ ಗ್ರಾಮಗಳಲ್ಲಿ ಜಾನುವಾರುಗಳ ಕಳ್ಳತನವೂ ವರದಿಯಾಗಿತ್ತು.

ಬಂಧಿತ ಆರೋಪಿ:

ರಾಜು @ ಮಚ್ಚಾ @ ಪರಶುರಾಮ (28 ವರ್ಷ), ಮೂಲತಃ ಭದ್ರಾವತಿ ತಾಲ್ಲೂಕಿನವನು.

ವಶಪಡಿಸಿಕೊಂಡ ಸ್ವತ್ತು:

₹8 ಲಕ್ಷ ಮೌಲ್ಯದ 38 ಗ್ರಾಂ ಬಂಗಾರ, 200 ಗ್ರಾಂ ಬೆಳ್ಳಿ, ಒಂದು ಜಾನುವಾರು ಹಾಗೂ ಜಾನುವಾರು ಮಾರಾಟ ಮಾಡಿದ ನಗದು ಹಣ.

ತನಿಖಾ ತಂಡದ ಸಾಧನೆ

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ಹಾಗೂ ಚನ್ನಗಿರಿ ಡಿ.ವೈ.ಎಸ್.ಪಿ. ಶ್ರೀ ರುದ್ರಪ್ಪ ಎಸ್ ಉಜ್ಜನಕೊಪ್ಪ ರವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಶ್ರೀ ರವೀಶ್ ಕೆ.ಎನ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

ತಂಡದಲ್ಲಿದ್ದ ಪ್ರಮುಖರು:

ಸಿಬ್ಬಂದಿ:

ರುದ್ರೇಶ್ ಸಿ, ಧರ್ಮಪ್ಪ, ರೇವಣಸಿದ್ದಪ್ಪ, ರಮೇಶ್ ಜೆ, ಚನ್ನಕೇಶವ, ಜಗದೀಶ, ಉಮೇಶ ಹಾಗೂ ಚಾಲಕರು.

ಜಿಲ್ಲಾ ಪೊಲೀಸ್ ಕಚೇರಿ ತಂಡ:

ಇನ್ಸ್‌ಪೆಕ್ಟರ್ ಇಸ್ಮಾಯಿಲ್, ಪಿಎಸ್ಐ ಮಂಜುನಾಥ ಕಲ್ಲೇದೇವರ ಮತ್ತು ಸಿಬ್ಬಂದಿ.

ಪೊಲೀಸ್ ಅಧೀಕ್ಷಕರ ಶ್ಲಾಘನೆ:

ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕಾರ್ಯಕ್ಷಮತೆಯನ್ನು ಎಸ್ಪಿ ಶೇಖರ್ ಹೆಚ್. ಟಿ. ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *