Site icon Kannada News-suddikshana

Channagiri: ಚನ್ನಗಿರಿಯಲ್ಲಿ ಹೆಚ್ಚಾಗಿತ್ತು ಶ್ರೀಗಂಧ ಮರಗಳ್ಳತನ: ಮೂವರು ಕಳ್ಳರ ಬಂಧನ, ಮಚ್ಚು, ಕೊಡಲಿ ಸೇರಿ ಯಾವೆಲ್ಲಾ ವಸ್ತುಗಳು ಸಿಕ್ಕವು ಗೊತ್ತಾ…?

CHANNAGIRI POLICE ARREST

CHANNAGIRI POLICE ARREST

SUDDIKSHANA KANNADA NEWS/ DAVANAGERE/ DATE:03-09-2023

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ಉಪವಿಭಾಗ ಠಾಣಾ ಸರಹದ್ದುಗಳಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇದು ಚನ್ನಗಿರಿ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವು ತಂದಿತ್ತು. ಈಗ ಮೂವರನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದು, 6.50 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ಮರಗಳನ್ನು ವಶಕ್ಕೆ ಪಡೆದಿದ್ದಾರೆ.

ಚನ್ನಗಿರಿ (Channagiri) ತಾಲೂಕಿನ ಗಾಳಿಹಳ್ಳಿ ಗ್ರಾಮದ ಮರ ಕೊಯ್ಯುವ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ (40), ಭದ್ರಾವತಿ ತಾಲೂಕಿನ ದಡಂಗಟ್ಟೆಯ ಮರಕೆಲಸಗಾರ ಜಬೀವುಲ್ಲಾ (45) ಹಾಗೂ ಶಿವಮೊಗ್ಗ ನಗರದ ಸೂಳೆಬೈಲಿನ ಬೈಕ್ ಮೆಕ್ಯಾನಿಕ್ ಹೈದರ್ ಖಾನ್ (30) ಬಂಧಿತ ಆರೋಪಿಗಳು.

ಈ ಸುದ್ದಿಯನ್ನೂ ಓದಿ: 

Explosive Detection Expertise: ಬೆರಗಾಗುವಂಥ ಟ್ರ್ಯಾಕ್ ರೆಕಾರ್ಡ್: ಸ್ಫೋಟಕ ಪತ್ತೆ, ವಿಧ್ವಂಸಕ ಕೃತ್ಯ ತಡೆ, ಪ್ರಧಾನಿ ಭೇಟಿ ಸ್ಥಳ ತಪಾಸಣೆ ನಿಪುಣೆ ಸೌಮ್ಯ ಈಗ ನೆನಪಷ್ಟೇ……!

ಶ್ರೀಗಂಧ ಮರ ಕಳ್ಳತನ ಪ್ರಕರಣಗಳ ಆರೋಪಿಗಳ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ ಬಸರಗಿ ಹಾಗೂ ಚನ್ನಗಿರಿ (Channagiri)  ಉಪವಿಭಾಗದ ಡಿವೈಎಸ್ಪಿ ಡಾ. ಸಂತೋಷ ಕೆ.ಎಂ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕ ಬಸವರಾಜ ಬಿ.ಎಸ್ ರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರುರವರ ನೇತೃತ್ವದಲ್ಲಿ ಸಂತೇಬೆನ್ನೂರುಪಿ.ಎಸ್.ಐ ರೂಪಾ ತೆಂಬದ್ ಹಾಗೂ ಸಿಬ್ಬಂದಿ ಸತೀಶ, ರುದ್ರೇಶ, ಎಂ. ಉಮೇಶ ರೆಡ್ಡಿ, ಆಂಜನೇಯ, ರಾಘವೇಂದ್ರ, ಪ್ರವೀಣಗೌಡ, ನಾಗಭೂಷಣ, ಬಸವಾಪಟ್ಟಣ ಠಾಣೆಯ ಇಬ್ರಾಹಿಂ ಮನ್ನಾ ಖಾನ್, ಪ್ರಕಾಶ ಚನ್ನಗಿರಿ ಪೊಲೀಸ್ ಠಾಣೆಯ ಬೀರೆಶ ಪುಟ್ಟಕ್ಕನವರ, ರಘು, ಲೋಕೇಶ್ ಅವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಚನ್ನಗಿರಿ (Channagiri) ಪೊಲೀಸ್ ಠಾಣೆಯ 3 ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣೆಯ 2 ಪ್ರಕರಣಗಳು, ಬಸವಾಪಟ್ಟಣ ಠಾಣೆಯ 1 ಪ್ರಕರಣ ಮತ್ತು ಸಂತೇಬೆನ್ನೂರು ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 7 ಶ್ರೀಗಂಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಬಂಧಿತರಿಂದ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 6 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ 61 ಕೆ.ಜಿ ಶ್ರೀಗಂಧದ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್, 2 ಕೈಗರಗಸ, 1 ಮಚ್ಚು, 1 ಕೊಡಲಿ ವಶ ಪಡಿಸಿಕೊಳ್ಳಲಾಗಿದೆ.

ಶ್ರೀಗಂಧ ಮರಗಳ್ಳತನ ಪ್ರಕರಣಗಳಲ್ಲಿನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Exit mobile version