Site icon Kannada News-suddikshana

Channagiri: ಜನರ ಕೆಲಸ ಮಾಡದ ಪಿಡಿಒನನ್ನು ನನ್ನ ಕ್ಷೇತ್ರದಿಂದ ಹೊರ ಹಾಕಿ: ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಕೆಂಡಾಮಂಡಲ

SUDDIKSHANA KANNADA NEWS/ DAVANAGERE/ DATE:19-08-2023

ದಾವಣಗೆರೆ: ಮೊದ್ಲು ಪಿಡಿಒ ರಂಗನಾಥ್ ನನ್ನು ನನ್ನ ಕ್ಷೇತ್ರದಿಂದ ಹೊರ ಹಾಕಿ. ಜನರ ಕೆಲಸ ಮಾಡೋದಿಲ್ಲ, ಸ್ಪಂದನೆ ಮಾಡೋದಿಲ್ಲ ಎಂದಾದರೆ ನನ್ನ ಕ್ಷೇತ್ರದಲ್ಲಿ ಇರೋದು ಬೇಡ. ಮೊದಲು ಆತನನ್ನು ವರ್ಗಾವಣೆ ಮಾಡಿ ನನಗೆ ರಿಪೋರ್ಟ್ ಕೊಡಬೇಕು ಎಂದು ಚನ್ನಗಿರಿ (Channagiri) ಶಾಸಕ ಶಿವಗಂಗಾ ವಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ:

Bhadra Dam:ಭದ್ರಾ ಜಲಾಶಯದ ಒಳಹರಿವು ಕಡಿಮೆ, ಅರೆನೀರಾವರಿ ಬೆಳೆಗೆ ಮಾತ್ರ ನೀರು: ನೀರಾವರಿ ಇಲಾಖೆ ಅಧಿಕಾರಿಗಳು ಕೊಟ್ಟ ಎಚ್ಚರಿಕೆ ಏನು…?

ಚನ್ನಗಿರಿ (Channagiri) ತಾಲೂಕಿನ ದೊಡ್ಡಅಬ್ಬಿಗೆರೆ ಗ್ರಾಮದ ಪಿಡಿಓ ತರಾಟೆಗೆ ತೆಗೆದುಕೊಂಡ ಶಿವಗಂಗಾ ವಿ. ಬಸವರಾಜ್, ಇಂದು ಕಾರ್ಯಕ್ರಮ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಿಡಿಒ ವಿರುದ್ಧ ಸ್ಥಳೀಯರು ದೂರುಗಳ ಮೇಲೆ ದೂರುಗಳನ್ನು ಹೇಳಿದರು. ಕೂಡಲೇ ಫೋನ್ ನಲ್ಲಿ ಮಾತನಾಡಿದ ಶಿವಗಂಗಾ ವಿ. ಬಸವರಾಜ್, ಕ್ಷೇತ್ರದ ಶಾಸಕರು ಬಂದರೂ ಬರುವಷ್ಟು ಸೌಜನ್ಯ ಇಲ್ಲವಾ? ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಫೋನ್ ನಲ್ಲಿ ಮಾತನಾಡಬೇಕಾ? ನೀನು ನನ್ನ ಹತ್ತಿರ ಮಾತನಾಡುವುದು ಏನಿಲ್ಲ ಎಂದು ಫೋನ್ ನಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಬೇರೆ ಕಡೆ ಕೂಡಲೇ ಪಿಡಿಒ ವರ್ಗಾವಣೆ ಮಾಡುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು. ಕಸ ವಿಲೇವಾರಿ ಮಾಡುವ ಸಿಬ್ಬಂದಿಗೆ ವೇತನ ನೀಡಲು ಪಿಡಿಒ ವಿಳಂಬ ಮಾಡಿದ್ದರು. ಮಾತ್ರವಲ್ಲ, ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ.
ಸಾರ್ವಜನಿಕರು ಸಹ ಹೇಳಿದ ಕೆಲಸ ಮಾಡಿಕೊಡುತ್ತಿರಲಿಲ್ಲ. ಸತಾಯಿಸುವ ಜೊತೆಗೆ ಸ್ಪಂದನೆಯೂ ಇರಲಿಲ್ಲ. ಸರಿಯಾಗಿ ಕೆಲಸವನ್ನೂ ಮಾಡುತ್ತಿರಲಿಲ್ಲ. ಸ್ಥಳೀಯರು ಆರೋಪ ಮಾಡುತ್ತಿದ್ದಂತೆ ಸಿಟ್ಟಿಗೆದ್ದ ಶಾಸಕರು ಫೋನ್ ನಲ್ಲಿಯೇ ಪಿಡಿಒಗೆ ತರಾಟೆಗೆ ತೆಗೆದುಕೊಂಡರಲ್ಲದೇ, ಜನರ ಕಷ್ಟ ಆಲಿಸದೇ, ಕೆಲಸ ಮಾಡದಿದ್ದರೆ ಯಾಕೆ ಬೇಕು ಎಂದು ಪ್ರಶ್ನಿಸಿದರು.

 

Exit mobile version