Site icon Kannada News-suddikshana

ಚನ್ನಗಿರಿ(Channagiri)ಯಲ್ಲಿ ಚಿನ್ನದ ಆಸೆಗೆ ಬಿದ್ದರು.. 60 ಲಕ್ಷ ರೂ. ಕಳೆದುಕೊಂಡರು…! ಕೆಜಿಗಟ್ಟಲೇ ಬಂಗಾರದ ನಾಣ್ಯಗಳ ಆಸೆಗೆ ಬಿದ್ದು ಮೋಸ ಹೋದರು…!

CRIME NEWS

CRIME NEWS

SUDDIKSHANA KANNADA NEWS/ DAVANAGERE/ DATE:01-10-2023

ದಾವಣಗೆರೆ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಸುಮಾರು 60 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಚನ್ನಗಿರಿ (Channagiri) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read Also This Story: 

Davanagere: ನಮ್ಮವರಿಗೆ ಅನ್ಯಾಯವಾದ್ರೆ ಸುಮ್ಮನಿರಬೇಕಾ? ಸಿಡಿದೆದ್ದ ಶಾಮನೂರು ಶಿವಶಂಕರಪ್ಪ, ರಾಜ್ಯದಲ್ಲಿ ವೀರಶೈವ ಲಿಂಗಾಯತರೇ ಹೆಚ್ಚಿರುವುದು, ನಾನು ಯಾರಿಗೂ ಹೆದರಲ್ಲ: ಸಿಎಂಗೆ ಎಸ್ಎಸ್ ಟಾಂಗ್

ಚಿಕ್ಕಬಳ್ಳಾಪುರದ ಗುತ್ತಿಗೆದಾರ ಗೋವರ್ಧನ್ ಅವರಿಗೆ ಚನ್ನಗಿರಿ (Channagiri)ತಾಲೂಕಿನ ನಿವಾಸಿ ಕುಮಾರ್ ಹಾಗೂ ಮುದುಕಪ್ಪ ಎಂಬುವವರೇ ಮೋಸ ಮಾಡಿದವರು. 2.5 ಕೆಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 60 ಲಕ್ಷ ರೂಪಾಯಿ ವಂಚನೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ ಏನು…?

ಕುಮಾರ್ ಎಂಬಾತನು ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಗ್ರಾಮದ ಗೋವರ್ಧನ್ ಅವರು ಚನ್ನಗಿರಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಳೆದ ಕೆಲವು ತಿಂಗಳಿನಿಂದ ನಡೆಸುತ್ತಿದ್ದರಿಂದ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ನಾನು ನಿಮ್ಮ ಬಳಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಬಳಿಕ ಗೋವರ್ಧನ್ ಅವರಿಗೆ ಕರೆ ಮಾಡಿ ವಿಶ್ವಾಸ ಗಳಿಸಿಕೊಂಡಿದ್ದಾನೆ.

ಪಕ್ಕದ ಮನೆಯ ಮುದುಕಪ್ಪ ಎಂಬುವವರಿಗೆ ಹಳೆಯ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ ಚಿನ್ನದ ನಾಣ್ಯ ಕೊಡಿಸುತ್ತೇನೆ. ನಮ್ಮ ಪಕ್ಕದ ಮನೆಯಲ್ಲಿ ಪಾಯ ತೆಗೆಯುವಾಗ ಸಿಕ್ಕಿದೆ ಎಂದು ಹೇಳಿ ಒಂದು ಚಿನ್ನದ ನಾಣ್ಯ ಕೊಟ್ಟಿದ್ದಾನೆ. ಇದು ಅಸಲಿ ಆಗಿತ್ತು. ಇದನ್ನು ನಂಬಿದ ಗೋವರ್ಧನ್ ಅವರನ್ನು ಕೆಲ ದಿನಗಳ ನಂತರ ಭೇಟಿಯಾಗಿದ್ದ ಕುಮಾರ್ ಒಟ್ಟು 5 ಕೆಜಿ ಚಿನ್ನದ ನಾಣ್ಯಗಳಿವೆ. ನಿಮಗೆ ಒಂದು ಕೆಜಿಗೆ 25 ಲಕ್ಷ ರೂಪಾಯಿಗೆ ಕೊಡಿಸುತ್ತೇನೆ ಎಂದು ಹೇಳಿದ್ದ. ಈ ಮಾತು ನಂಬಿದ ಗೋವರ್ಧನ್ ಅವರು, 2. 5 ಕೆಜಿ ನಾಣ್ಯ ಪಡೆದಿದ್ದಾರೆ.

ಸಹೋದರ ಭರತ್ ಜೊತೆ ಕಳೆದ 23 ರಂದು ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ಇರುವ ಲಿಂಗದಹಳ್ಳಿ ಭದ್ರಾ ನಾಲೆಯ ಸಮೀಪ ಹೋಗಿ ಹಣ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಕುಮಾರ್ ಹಾಗೂ ಮುದುಕಪ್ಪ ಬಂದಿದ್ದಾರೆ. ಹಣವನ್ನು ಅವರಿಗೆ ನೀಡಿ ನಾಣ್ಯಗಳನ್ನು ಪಡೆಯುತ್ತಿರುವ ವೇಳೆ ಅಪರಿಚಿತರಿಬ್ಬರು ಬೈಕ್ ನಲ್ಲಿ ಸ್ಥಳಕ್ಕೆ ಬಂದಿದ್ದಾರೆ. ನಾಲೆಯ ಬಳಿ ಕೊಲೆಯಾಗಿದೆ. ಪೊಲೀಸರು ಬರುತ್ತಿದ್ದಾರೆ ಎಂದು ಹೆದರಿಸಿದ್ದಾರೆ. ಆಗ ನಾವು ಜಾಗ ಖಾಲಿ ಮಾಡಿದೆವು. ತುಮಕೂರಿನ ಶಿರಾ ಬಳಿ ನಾಣ್ಯ ಪರಿಶೀಲಿಸಿದಾಗ 2.5 ಕೆಜಿ ಬಂಗಾರದ ನಾಣ್ಯಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಯಿತು ಎಂದು ಗೋವರ್ಧನ್ ಅವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Exit mobile version