Site icon Kannada News-suddikshana

ಹೆಣ್ಣುಮಕ್ಕಳ ಬಾಳು ಹಾಳು ಮಾಡಿದ ಕಾಮಾಂಧ ಅಮ್ಜದ್ ಪರ ವಾದಿಸದಿರಲು ಚನ್ನಗಿರಿ ವಕೀಲರ ಸಂಘ ನಿರ್ಧಾರ

SUDDIKSHANA KANNADA NEWS/ DAVANAGERE/ DATE:03-02-2025

ದಾವಣಗೆರೆ: ಹೆಣ್ಣು ಮಕ್ಕಳ ಜೊತೆ ರಾಸಲೀಲೆ ನಡೆಸಿ ವಿಡಿಯೋ ವೈರಲ್ ಮಾಡಿರುವ ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ಪರ ವಾದ ಮಂಡನೆ ಮಾಡದಿರಲು ಚನ್ನಗಿರಿ ವಕೀಲರ ಸಂಘ ನಿರ್ಧರಿಸಿದೆ.

ಯಾವುದೇ ಕಾರಣಕ್ಕೂ ಇಂಥ ಹೀನಕೃತ್ಯ ಎಸಗಿರುವ ಅಮ್ಜದ್ ಪರ ದಾವಣಗೆರೆ ಸೇರಿದಂತೆ ಯಾವ ಜಿಲ್ಲೆಗಳ ವಕೀಲರು ಮುಂದೆ ಬಾರದು. ಇಂಥವನಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ವಕೀಲರು ತಿಳಿಸಿದ್ದಾರೆ.

ಚನ್ನಗಿರಿಯಲ್ಲಿ ಅಮ್ಜದ್ ಗಲ್ಲುಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಕರೆ ನೀಡಿದ್ದ ಚನ್ನಗಿರಿ ಪಟ್ಟಣ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ವಕೀಲರ ಸಂಘವೂ ಪಾಲ್ಗೊಂಡಿತ್ತು. ವಿಹೆಚ್ ಪಿ ಸೇರಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬಾಲಕಿಯರು, ಶಾಲಾ ವಿದ್ಯಾರ್ಥಿನಿಯರು, ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಈತ ನಾಗರಿಕ ಸಮಾಜದಲ್ಲಿ ಬದುಕಲು ಅರ್ಹತೆ ಇಲ್ಲದಿರುವ ವ್ಯಕ್ತಿ. ಇಂಥ ಗೋಮುಖ ವ್ಯಾಘ್ರಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಮ್ಜದ್ ವಿರುದ್ಧ ನಡೆಯುವ ಎಲ್ಲಾ ಪ್ರತಿಭಟನೆಗಳಲ್ಲಿಯೂ ವಕೀಲರ ಸಂಘವು ಪಾಲ್ಗೊಳ್ಳಲಿದೆ. ಈತನಿಗೆ ಕಠಿಣ ಶಿಕ್ಷೆ ಆಗುವವರೆಗೆ ಹೋರಾಟ ನಡೆಸಲಾಗುವುದು ಎಂದು ವಕೀಲರ ಸಂಘದವರು ಹೇಳಿದ್ದಾರೆ.

Exit mobile version