Site icon Kannada News-suddikshana

ಚೈತ್ರಕ್ಕ ಇದೇನಕ್ಕ… ಕೋಟ್ಯಂತರ ರೂಪಾಯಿ ವಂಚಿಸಿ ಮೋಸ ಮಾಡಿದ್ದ ಉಗ್ರ ಭಾಷಣಕಾರಿ ಚೈತ್ರಾ ಕುಂದಾಪುರ (Kundapur)ಅಂದರ್ ಆಗಿದ್ದೇಗೆ…?

CHAITHRA KUNDAPURA ARREST

CHAITHRA KUNDAPURA ARREST

SUDDIKSHANA KANNADA NEWS/ DAVANAGERE/ DATE:13-09-2023

ಉಡುಪಿ: ಹಿಂದೂಪರ ಉಗ್ರ ಭಾಷಣಕಾರಿ ಚೈತ್ರಾ ಕುಂದಾಪುರ (Kundapur) ಬಂಧನಕ್ಕೊಳಗಾಗಿದ್ದಾರೆ. ಕುಂದಾಪುರ ಮೂಲದ ಚೈತ್ರಾ ಕುಂದಾಪುರ ವಿವಾದಗಳಿಂದಲೇ ಫೇಮಸ್. ಈ ಹಿಂದೆಯೂ ಉಗ್ರ ಭಾಷಣ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದವರು. ವಿವಾದಗಳನ್ನು ಮೈಮೇಲೆ ಎಳೆದುಕೊಂಡವರು. ಈಗ ಉದ್ಯಮಿಯೊಬ್ಬರಿಗೆ ವಂಚಿಸಿದ ಪ್ರಕರಣ ಸಂಬಂಧ ಅರೆಸ್ಟ್ ಆಗಿದ್ದು, ಜೊತೆಗೆ ಇನ್ನೂ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 

ಕೇಂದ್ರೀಯ ಬ್ಯಾಂಕ್ ಗೆ ತಲೆನೋವು ತಂದ ಚಿಲ್ಲರೆ ಹಣದುಬ್ಬರ ಇಳಿಕೆ: ರಿಯಲ್ ಎಸ್ಟೇಟ್ (Real estate) ಮೇಲೆ ಪರಿಣಾಮ ಬೀರುವುದು ಹೇಗೆ…?

ಉಡುಪಿಯಲ್ಲಿ ಸ್ನೇಹಿತರ ಮನೆಯಲ್ಲಿ ಅಡಗಿ ಕುಳಿತಿದ್ದ ಚೈತ್ರಾ ಕುಂದಾಪುರ (Kundapur) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್ ಮತ್ತು ಪ್ರಸಾದ್ ಇದೀಗ ಪೋಲಿಸರ ಅತಿಥಿ.

ಬಹುಕೋಟಿ ವಂಚನೆ ಪ್ರಕರಣ ಏನು…?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಟಿಕೆಟ್ ದೊರಕಿಸಿಕೊಡುವುದಾಗಿ ನಂಬಿಸಿ ಬಹುಕೋಟಿ ವಂಚನೆ ಮಾಡಿದ ಪ್ರಕರಣ ಚೈತ್ರಾ ಕುಂದಾಪುರ (Kundapur) ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗ ಎಸ್ಕೇಪ್ ಆಗಿದ್ದರು.

ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಬಂದಾಗ ನಾಟಕವಾಡಿದ್ದ ಚೈತ್ರಾ ಕುಂದಾಪುರ (Kundapur) ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಬಂಧನದಿಂದ ತಪ್ಪಿಸಿಕೊಳ್ಳುವ ನಾಟಕವಾಡಿದ್ದು ಬೆಳಕಿಗೆ ಬಂದಿದೆ.

ಯಾರು ಆ ಉದ್ಯಮಿ:

ಬೈಂದೂರಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ವದಂತಿ ಹಬ್ಬಿತ್ತು. ಕೊನೆಗೆ ಅದು ನಿಜವಾಯ್ತು. ಕುಂದಾಪುರ – ಬೈಂದೂರು ಹೊಂದಿಕೊಂಡಂತಿರುವ ಪ್ರದೇಶಗಳು. ಯಾಕೆಂದರೆ ಕುಂದಾಪುರದಿಂದ
ಹರಿದು ಹಂಚಿ ಹೋಗಿದ್ದರಿಂದ ಸಹಜವಾಗಿಯೇ ಕುಂದಾಪುರ ಹಾಗೂ ಬೈಂದೂರಿನ ಜನರು ಪರಿಚಯ ಇದ್ದೇ ಇರುತ್ತಾರೆ.

ಉಗ್ರ ಪ್ರತಾಪಿಯಂತೆ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ (Kundapur) ಅವರಿಗೆ ಕೇವಲ ಉಡುಪಿ ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಕೊಪ್ಪಳದಲ್ಲಿ ಹಿಂದೂ ಸಮಾರಂಭವೊಂದರಲ್ಲಿ ಉಗ್ರ ಭಾಷಣ ಮಾಡಿ ವಿವಾದಕ್ಕೆ ಕಾರಣವಾಗಿದ್ದರು. ಯಾವಾಗಲೂ ಉದ್ರೇಕಕಾರಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಮಾತು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದರು.

ಉದ್ಯಮಿ ಗೋವಿಂದ ಪೂಜಾರಿ ಎಂಬುವವರು ಬೈಂದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದವರು. ಆರ್ ಎಸ್ ಎಸ್, ಬಿಜೆಪಿಯ ಮುಖಂಡರು ನನಗೆ ಗೊತ್ತು. ಹಿಂದೂ ಸಂಘಟನೆಗಳ ಮುಖಂಡರು ಗೊತ್ತು. ನಿಮಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿಕೊಂಡು ಸುಮಾರು 7 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಿದ ಆರೋಪ ಚೈತ್ರಾ ಕುಂದಾಪುರ (Kundapur) ಹಾಗೂ ಸಹಚರರ ಮೇಲಿದೆ.

ಚುನಾವಣೆಗೆ ಸ್ಪರ್ಧಿಸುವ ಮಹಾದಾಸೆ ಹೊಂದಿದ್ದ ಗೋವಿಂದ ಪೂಜಾರಿ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದಕ್ಕಾಗಿ ಸಾಕಷ್ಟು ಹಣ ಕೂಡ ವ್ಯಯಿಸಿದ್ದರು. ಜನರ ಪ್ರೀತಿ ಸಂಪಾದನೆ ಮಾಡಲು ಮುಂದಾಗಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಚೈತ್ರಾ ಕುಂದಾಪುರ (Kundapur) ಟಿಕೆಟ್ ಕೊಡುವ ಭರವಸೆ ಕೊಟ್ಟು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಬಿಲ್ಲವ ಸಮುದಾಯದ ಪ್ರಮುಖರಾಗಿದ್ದ ಉದ್ಯಮಿ ಗೋವಿಂದ ಪೂಜಾರಿ ಅವರು, ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ನಾಲ್ಕೈದು ಜನರ ತಂಡದ ಜೊತೆ ಸೇರಿಕೊಂಡು ಬೃಹನ್ಮಾಟಕ ಆಡಿದ್ದು ಈಗ ಬಟಾಬಯಲಾಗಿದೆ. ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದನ್ನೇ ಬಂಡವಾಳವನ್ನಾಗಿಸಿಕೊಂಡು ಮೂರು ಹಂತಗಳಲ್ಲಿ ಹಣ ಪಡೆದು ವಂಚನೆ ಮಾಡಿದ್ದು ಈಗ ಗೊತ್ತಾಗಿದೆ.

 

Exit mobile version