Site icon Kannada News-suddikshana

ಅಪಘಾತದಲ್ಲಿ ಹೆಲ್ಮೆಟ್ ಧರಿಸಿದ್ದರೂ ದಾವಣಗೆರೆ ಆರ್ ಟಿಓ ಕಚೇರಿ ಅಧೀಕ್ಷಕ ಸಾವು: ಸಿಸಿಟಿವಿಯಲ್ಲಿ “ಭಯಾನಕ ದೃಶ್ಯ” ಸೆರೆ!

Davanagere

SUDDIKSHANA KANNADA NEWS/ DAVANAGERE/DATE:08_08_2025

ದಾವಣಗೆರೆ: ದಾವಣಗೆರೆ ನಗರದ ರಿಂಗ್ ರಸ್ತೆಯ ಎಜು ಏಷ್ಯಾ ಸ್ಕೂಲ್ ಸಮೀಪ ಕೆಎಸ್ಆರ್ ಟಿ ಸಿ ಬಸ್ ಚಕ್ರಕ್ಕೆ ಸಿಲುಕಿ ಆರ್ ಟಿ ಒ ಕಚೇರಿ ಅಧೀಕ್ಷಕರು ಸಾವನ್ನಪ್ಪಿದ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭಯಾನಕ ಅಪಘಾತದ ವಿಡಿಯೋ ಇಲ್ಲಿದೆ ನೋಡಿ

 

READ ALSO THIS STORY: BIG NEWS: ಹೊಂಡಾ ಆಕ್ಟೀವಾಗೆ ಬಸ್ ಡಿಕ್ಕಿ: ದಾವಣಗೆರೆ ಆರ್ ಟಿ ಒ ಕಚೇರಿ ಅಧೀಕ್ಷಕ ಸಾವು

ಬೆಳಿಗ್ಗೆ 9.30ರ ಸುಮಾರಿನಲ್ಲಿ ಜೆ. ಹೆಚ್. ಪಟೇಲ್ ಬಡಾವಣೆಯಿಂದ ಆರ್ ಟಿ ಒ ಕಚೇರಿಗೆ ಅಧೀಕ್ಷಕ ತಿಪ್ಪೇಶಪ್ಪ(41) ಹೊಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದರು. ಮುಂದೆ ಸಾಗುತ್ತಿದ್ದ ತಿಪ್ಪೇಶಪ್ಪ ಅವರ ಬೈಕ್ ಗೆ ಬಸ್ ತಾಗಿದೆ. ಆನಂತರ ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ತಲೆ ಸಿಲುಕಿಕೊಂಡಿದ್ದರಿಂದ ಹೆಲ್ಮೆಟ್ ಹಾಕಿದ್ದರೂ ದಾರುಣವಾಗಿ ಸಾವು ಕಂಡಿದ್ದಾರೆ.

 

ಅಪಘಾತಕ್ಕೂ ಮುನ್ನ ಬೈಕ್ ಗಳು ಮುಂದೆ ಸಾಗುವುದು ಕಂಡು ಬರುತ್ತದೆ. ಇನ್ನು ಕಚೇರಿಗೆ ತೆರಳುತ್ತಿದ್ದ ತಿಪ್ಪೇಶಪ್ಪ ಅವರು ಬೈಕ್ ನಲ್ಲಿ ಹೋಗುತ್ತಿದ್ದರು. ಆಗ ಹಿಂದೆಗಡೆಯಿಂದ ಬಂದ ಕೆಎಸ್ ಆರ್ ಟಿ ಸಿ ಬಸ್ ಬೈಕ್ ಗೆ ತಾಗಿದ್ದು, ಈ ವೇಳೆ ಗಲಿಬಿಲಿಯಾದ ತಿಪ್ಪೇಶಪ್ಪ ಅವರು ತಪ್ಪಿಸಿಕೊಳ್ಳುವ ಭರದಲ್ಲಿ ಕೆಳಗಡೆ ಬಿದ್ದಿದ್ದಾರೆ. ಈ ವೇಳೆ ಬಸ್ ವೇಗವಾಗಿದ್ದ ಕಾರಣ ಬಸ್ ಚಕ್ರಕ್ಕೆ ಸಿಲುಕಿ ತಲೆ ಅಪ್ಪಚ್ಚಿಯಾಗಿದೆ.

ಪಿ. ತಿಪ್ಪೇಶಪ್ಪ ಮೃತಪಟ್ಟ ಆರ್ ಟಿ ಒ ಕಚೇರಿ ಅಧೀಕ್ಷಕರು. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ
ಮುಗಿಲು ಮುಟ್ಟಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಯಲ್ಲಿ ಸೂತಕ ಮೂಡಿಸಿದೆ.

ಡಿಸಿ ಭೇಟಿ:

ಸ್ಥಳಕ್ಕೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಭೇಟಿ ನೀಡಿದರು. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version