Site icon Kannada News-suddikshana

ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ವರದಿ ಜಾರಿ ನಾಟಕ: ತೋಳ ಬಂತು ತೋಳ ಕಥೆ ಹೆಣೆದಿದ್ಯಾರು…?

SUDDIKSHANA KANNADA NEWS/ DAVANAGERE/ DATE:11-04-2025

ಬೆಂಗಳೂರು: ಜಾತಿಗಣತಿಗೆ ನಿಮ್ಮ ಮನೆಗೆ ಯಾರಾದರೂ ಬಂದಿದ್ದರಾ ಎಂಬ ಪ್ರಶ್ನೆಗ ಬಹುತೇಕ ಕನ್ನಡಿಗರು ಹೇಳಿದ ಉತ್ತರ “ಇಲ್ಲ – ಯಾರೂ ಬಂದಿಲ್ಲ”!!ಅಂತಹದರಲ್ಲಿ ತಮ್ಮ ಕುರ್ಚಿ ಬಚಾವೋ ಆಂದೋಲನದ ಅಂಗವಾಗಿ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಬಿಡುಗಡೆ ಎಂಬ ತೋಳ ಬಂತು ತೋಳ ಕತೆ ಆರಂಭಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಜಾತಿಗಣತಿ ವರದಿ ಎಷ್ಟರ ಮಟ್ಟಿಗೆ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಎಂಬುದನ್ನು ತಿಳಿಸಿ, ಆ ನಂತರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದೆ.

ಕುರ್ಚಿ ಅಲ್ಲಾಡುವಾಗಲೆಲ್ಲಾ ಸಿದ್ದರಾಮಯ್ಯ ಅವರಿಗೆ ಜಾತಿ ಜನಗಣತಿ ನೆನಪಾಗುತ್ತದೆ. ಜಾತಿ ಜನಗಣತಿ ಎನ್ನುವುದು ಸಿದ್ದರಾಮಯ್ಯ ಪಾಲಿನ ಬೆದರು ಬೊಂಬೆಯಾಗಿದೆ. ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಜಾತಿ ಜನಗಣತಿ ವರದಿಯನ್ನು ಮುಂದಿಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.

Exit mobile version