Site icon Kannada News-suddikshana

ನಾನು ಜಾತಿಗಣತಿ ವರದಿ ಒಪ್ಪಲ್ಲ: ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅಸಮಾಧಾನ

SUDDIKSHANA KANNADA NEWS/ DAVANAGERE/ DATE:23-02-2025

ದಾವಣಗೆರೆ: ನಾನು ಜಾತಿ ಗಣತಿ ವರದಿ ಒಪ್ಪುವುದಿಲ್ಲ. ಸಿಎಂ ಸಿದ್ದರಾಮಯ್ಯರು ಶಾಸಕರ ಅಭಿಪ್ರಾಯ ಕೇಳಿದಾಗ ನಾನು ಮಾತನಾಡುತ್ತೇನೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲೇ ಬಹಳಷ್ಟು ಮಂದಿ ಇದ್ದಾರೆ. ಅವರನ್ನೇ ಕೇಳಿ. ಯಾರ ಮನೆಯಲ್ಲಾದರೂ ಜಾತಿ ಗಣತಿ ಆಗಿದೆಯಾ? ಎಲ್ಲೋ ಕುಳಿತು ಜಾತಿ ಗಣತಿ ಮಾಡಿದರೆ ಆಗಲ್ಲ. ನನ್ನ ಮನೆಗೆ ಬರಬೇಕು ಅಲ್ವಾ. ಅದಕ್ಕೆ ದಾಖಲೆ ಆದರೂ ಬೇಕಲ್ವ ಎಂದು ಪ್ರಶ್ನಿಸಿದರು.

ಮನೆ ಮನೆಗೆ ಹೋಗಿ ನಿಖರವಾಗಿ ಅಂಕಿಅಂಶಗಳನ್ನು ಪಡೆದು ಮಾಡಿದ್ದರೆ ಅಭ್ಯಂತರವೇನಿಲ್ಲ, ದಾವಣಗೆರೆಗೆ ಬಂದಾಗ ಸಿಎಂ ಸಿದ್ದರಾಮಯ್ಯರು ಜಾತಿ ಗಣತಿ ವರದಿ ಸ್ವೀಕರಿಸಿ ಜಾರಿಗೊಳಿಸುವುದಾಗಿ ಹೇಳಿರಬಹುದು. ಮಾಧ್ಯಮಗಳಲ್ಲಿಯೂ ಬಂದಿರಬಹುದು. ಆದ್ರೆ, ಶಾಸಕರ ಗಮನಕ್ಕೆ ತರಬೇಕಲ್ವಾ. ಆಗ ಮಾತನಾಡುತ್ತೇವೆ ಎಂದು ಹೇಳಿದರು.

Exit mobile version