Site icon Kannada News-suddikshana

ಕಳಪೆ ಗುಣಮಟ್ಟದ ಔಷಧಿಗಳು ವಾಪಸ್, 75 ಸಂಸ್ಥೆಗಳ ವಿರುದ್ಧ ಕೇಸ್: ದಿನೇಶ್ ಗುಂಡೂರಾವ್

SUDDIKSHANA KANNADA NEWS/ DAVANAGERE/ DATE:01-03-2025

ದಾವಣಗೆರೆ: ಮಾದಕ ಔಷಧಿಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ 17 ಲಕ್ಷ ರೂಪಾಯಿ ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ.

ನಿಯಮ ಉಲ್ಲಂಘನೆ ಕಂಡು ಬಂದ 75 ಸಂಸ್ಥೆಗಳ ವಿರುದ್ಧ ಮೊಕದ್ದಮೆಗೆ ಸೂಚಿಸಲಾಗಿದೆ.

400 ಔಷಧ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. 213 ಸಂಸ್ಥೆಗಳ ಪರವಾನಗಿ ಅಮಾನತು ಪಡಿಸಿ, 3 ಔಷಧ ಮಳಿಗೆಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Exit mobile version