SUDDIKSHANA KANNADA NEWS/ DAVANAGERE/ DATE:12-05-2023
ದಾವಣಗೆರೆ (DAVANAGERE): ಕ್ಷಣ ಕ್ಷಣಕ್ಕೂ ಟೆನ್ಶನ್ (TENSION). ಏನಾಗುತ್ತೋ ಏನೋ ಎಂಬ ಕುತೂಹಲ. ಜನರಿಗಷ್ಟೇ ಅಲ್ಲ, ಅಭ್ಯರ್ಥಿಗಳ (CANDIDATES) ಎದೆಬಡಿತ ಜೋರಾಗಿದೆ. ಜಿಲ್ಲೆಯಲ್ಲಿ ಏಳು (SEVEN) ಕ್ಷೇತ್ರಗಳಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಅಭ್ಯರ್ಥಿಗಳು ಫಲಿತಾಂಶದ ಕುರಿತಂತೆ ಕಾತರರಾಗಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಒಂದೆರಡು ದಿನ ರಿಲ್ಯಾಕ್ಸ್ (RELAX) ಮೂಡ್ (MOOD) ನಲ್ಲಿರುತ್ತಾರೆ ಎಂದುಕೊಂಡರೂ ಚುನಾವಣಾ ಫಲಿತಾಂಶದ ಕುರಿತಂತೆಯೇ ಚಿಂತೆ. ರಾಜ್ಯದ 16 ನೇ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಮತದಾನ (VOTING) ಮುಕ್ತಾಯವಾಗಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮೇ 13ರಂದು ಇವಿಎಂ (EVM) ಯಂತ್ರಗಳು ಒಪನ್ ಆಗಲಿವೆ. ಹಾಗಾಗಿ, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.
ಮತ ಎಣಿಕೆಯಲ್ಲಿ ಜಯದ ಮಾಲೆ ಯಾರ ಪಾಲಾಗಲಿದೆ ಎಂಬ ನಿರೀಕ್ಷೆ ಮತದಾರ ಪ್ರಭುಗಳದ್ದು. ದಾವಣಗೆರೆ ದಕ್ಷಿಣದಲ್ಲಿ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿ ಹುರಿಯಾಳು ಅಜಯ್ ಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ನಡುವೆ ಪೈಪೋಟಿ ಕಂಡು ಬರುತ್ತಿದೆ.
ಜಗಳೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ನ ದೇವೇಂದ್ರಪ್ಪ, ಬಿಜೆಪಿಯ ಎಸ್. ವಿ. ರಾಮಚಂದ್ರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಹೆಚ್. ಪಿ. ರಾಜೇಶ್ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೊನ್ನಾಳಿಯಲ್ಲಿ ಬಿಜೆಪಿಯ
ಎಂ. ಪಿ. ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ಹುರಿಯಾಳು ಡಿ. ಜಿ. ಶಾಂತನಗೌಡರ ನಡುವೆ ನೇರ ಹಣಾಹಣಿ ಇದೆ. ಚನ್ನಗಿರಿಯಲ್ಲಿಯೂ ತ್ರಿಕೋನ ಸ್ಪರ್ಧೆ ಇದ್ದು, ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್, ಕಾಂಗ್ರೆಸ್ ನ ಶಿವಗಂಗಾ
ಬಸವರಾಜ್ ಹಾಗೂ ಬಿಜೆಪಿಯ ಶಿವಕುಮಾರ್ ನಡುವೆ ಹಣಾಹಣಿ ಇದೆ.
ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶ್ ಸ್ವಾಮಿ ನಡುವೆ ನೆೇರ ಹಣಾಹಣಿ ಇದ್ದು, ಪವಾಡ ಎಂಬಂತೆ ಜೆಡಿಎಸ್ ನ ಆನಂದಪ್ಪ ಗೆದ್ದರೂ ಗೆಲ್ಲಬಹುದು ಎಂಬ ಮಾತು
ಕೇಳಿ ಬರುತ್ತಿದೆ. ಹರಿಹರ ಕೂಡ ತ್ರಿಕೋನ ಕದನಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯ ಬಿ. ಪಿ. ಹರೀಶ್, ಕಾಂಗ್ರೆಸ್ ನ ನಂದಿಗಾವಿ ಶ್ರೀನಿವಾಸ್ ಹಾಗೂ ಜೆಡಿಎಸ್ ನ ಹೆಚ್. ಎಸ್. ಶಿವಶಂಕರ್ ನಡುವೆ ತ್ರಿಕೋನ ಕದನ ಇದ್ದು, ಫಲಿತಾಂಶಕ್ಕಾಗಿ ಜನರು
ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಮತದಾರರ ತೀರ್ಪು ಮೇ. 13ಕ್ಕೆ ಬಹಿರಂಗಗೊಳ್ಳಲಿದೆ. ಯಾರೇ ಗೆದ್ದರೂ ದೊಡ್ಡ ಅಂತರದಲ್ಲಿ ಜಯಶಾಲಿ ಆಗೋದಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ. ಆದ್ರೆ, ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೋ? ಬಿಜೆಪಿಯು
ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುತ್ತೋ ಇಲ್ಲವೋ ಪಕ್ಷೇತರರ ದರ್ಬಾರ್ ಶುರುವಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ದೊರಕಲಿದೆ.