Home ಉದ್ಯೋಗ ವಾರ್ತೆ ಪರೀಕ್ಷೆಯಿಲ್ಲದೆ ಕೆನರಾ ಬ್ಯಾಂಕ್‌ನಲ್ಲಿ ಕೆಲಸ: 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಪರೀಕ್ಷೆಯಿಲ್ಲದೆ ಕೆನರಾ ಬ್ಯಾಂಕ್‌ನಲ್ಲಿ ಕೆಲಸ: 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ!

Share
ಕೆನರಾ ಬ್ಯಾಂಕ್‌
Share

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಕೆನರಾ ಬ್ಯಾಂಕ್ ಬಂಪರ್ ಕೊಡುಗೆ ನೀಡಿದೆ. 2026-27ನೇ ಸಾಲಿಗೆ ಒಟ್ಟು 3,500 ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) ತರಬೇತಿ ಹುದ್ದೆಗಳ ಭರ್ತಿಗೆ ಅಧಿಕೃತ ಚಾಲನೆ ನೀಡಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 01, 2026 ರಿಂದ ಆರಂಭಗೊಂಡಿದ್ದು, ಅಕ್ಟೋಬರ್ 17, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ವಿವರಗಳುಮಾಹಿತಿ
ಸಂಸ್ಥೆಕೆನರಾ ಬ್ಯಾಂಕ್ (ಹೆಡ್ ಆಫೀಸ್: ಬೆಂಗಳೂರು)
ಹುದ್ದೆಯ ಹೆಸರುಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice)
ಒಟ್ಟು ಹುದ್ದೆಗಳು3,500 (ಕರ್ನಾಟಕದಲ್ಲಿ 581 ಹುದ್ದೆಗಳು)
ತರಬೇತಿ ಅವಧಿ12 ತಿಂಗಳು (1 ವರ್ಷ)
ಮಾಸಿಕ ವೇತನ (Stipend)₹16,650 (ಬ್ಯಾಂಕ್ ಪಾಲು: ₹10,500 + ಸರ್ಕಾರಿ ಸಬ್ಸಿಡಿ/DBT: ₹6,150)
ಅರ್ಜಿ ಸಲ್ಲಿಕೆ ಆರಂಭ01-10-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ17-10-2026
ಅರ್ಜಿ ವಿಧಾನಆನ್‌ಲೈನ್

ಶೈಕ್ಷಣಿಕ ಅರ್ಹತೆ 

ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation Degree) ಪಡೆದಿರಬೇಕು.

ಅಭ್ಯರ್ಥಿಗಳು 01.01.2023 ರಿಂದ 01.09.2026 ರ ನಡುವೆ ಪದವಿ ತೇರ್ಗಡೆಯಾಗಿರಬೇಕು.

12ನೇ ತರಗತಿ/ಡಿಪ್ಲೊಮಾದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು (SC / ST / PwBD ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಕಡ್ಡಾಯ).

👤 ವಯೋಮಿತಿ

ಕನಿಷ್ಠ ವಯಸ್ಸು: 20 ವರ್ಷ

ಗರಿಷ್ಠ ವಯಸ್ಸು: 28 ವರ್ಷ

(ಅಭ್ಯರ್ಥಿಗಳು 02.09.1998 ಮತ್ತು 01.09.2006 ರ ನಡುವೆ ಜನಿಸಿರಬೇಕು)

ವಯೋಮಿತಿ ಸಡಿಲಿಕೆ:

SC / ST ಅಭ್ಯರ್ಥಿಗಳಿಗೆ: 5 ವರ್ಷಗಳು

OBC (NCL) ಅಭ್ಯರ್ಥಿಗಳಿಗೆ: 3 ವರ್ಷಗಳು

PwBD ಅಭ್ಯರ್ಥಿಗಳಿಗೆ: 10 ವರ್ಷಗಳು

ಆಯ್ಕೆ ಪ್ರಕ್ರಿಯೆ

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ಮೆರಿಟ್ ಪಟ್ಟಿ (Merit List): 12ನೇ ತರಗತಿ (10+2) ಅಥವಾ ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ರಾಜ್ಯವಾರು ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.

ದಾಖಲೆಗಳ ಪರಿಶೀಲನೆ & ಸ್ಥಳೀಯ ಭಾಷಾ ಪರೀಕ್ಷೆ: ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಸ್ಥಳೀಯ ಭಾಷಾ ಪರೀಕ್ಷೆ (ಕನ್ನಡ) ನಡೆಸಲಾಗುವುದು.

ವೈದ್ಯಕೀಯ ತಪಾಸಣೆ (Medical Examination).

ಅರ್ಜಿ ಶುಲ್ಕ (Application Fee)

SC / ST / PwBD ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ (NIL)

ಇತರ ಎಲ್ಲಾ ಅಭ್ಯರ್ಥಿಗಳಿಗೆ (General / OBC / EWS): ₹500/-

ಅರ್ಜಿ ಸಲ್ಲಿಸುವ ವಿಧಾನ (How to Apply)

ಮೊದಲು ಕೇಂದ್ರ ಸರ್ಕಾರದ nats.education.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು 100% ಪ್ರೊಫೈಲ್ ಪೂರ್ಣಗೊಳಿಸಿ.

ನಂತರ ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ canarabank.bank.in ಗೆ ಭೇಟಿ ನೀಡಿ, ‘Careers’ ವಿಭಾಗದಲ್ಲಿ ‘Engagement of Graduate Apprentices’

ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು?

ಒಟ್ಟು 3,500 ಹುದ್ದೆಗಳ ಪೈಕಿ ಕರ್ನಾಟಕ ರಾಜ್ಯ ಒಂದರಲ್ಲೇ 581 ತರಬೇತಿ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಪ್ರಮುಖ ವಿವರಗಳು:

ಸಂಸ್ಥೆಯ ಹೆಸರು: ಕೆನರಾ ಬ್ಯಾಂಕ್ (ಪ್ರಧಾನ ಕಚೇರಿ: ಬೆಂಗಳೂರು)

ಹುದ್ದೆಯ ಹೆಸರು: ಗ್ರಾಜುವೇಟ್ ಅಪ್ರೆಂಟಿಸ್ (Graduate Apprentice)

ಒಟ್ಟು ಹುದ್ದೆಗಳು: 3,500 (ಕರ್ನಾಟಕ: 581)

ತರಬೇತಿ ಅವಧಿ: 12 ತಿಂಗಳು (1 ವರ್ಷ)

ಮಾಸಿಕ ಸ್ಟೈಫಂಡ್: ₹16,650 (ಬ್ಯಾಂಕ್ ಪಾಲು ₹10,500 + ಸರ್ಕಾರದ ಸಬ್ಸಿಡಿ direct bank transfer ಮೂಲಕ ₹6,150)

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01.10.2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17.10.2026

ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles