Home ದಾವಣಗೆರೆ ಬಿಜೆಪಿಯವರು ರೈತರ ಹಿತಾಸಕ್ತಿ ಕಾಯಲು ಹೇಗೆ ಸಾಧ್ಯ? ಕೊಲ್ಲುವವರೆ ಕಾಯುವವರು ಆಗಲು ಸಾಧ್ಯವೆ?: ಸಿದ್ದರಾಮಯ್ಯ ಆಕ್ರೋಶ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಬಿಜೆಪಿಯವರು ರೈತರ ಹಿತಾಸಕ್ತಿ ಕಾಯಲು ಹೇಗೆ ಸಾಧ್ಯ? ಕೊಲ್ಲುವವರೆ ಕಾಯುವವರು ಆಗಲು ಸಾಧ್ಯವೆ?: ಸಿದ್ದರಾಮಯ್ಯ ಆಕ್ರೋಶ

Share
ಸಿದ್ದರಾಮಯ್ಯ
Share

SUDDIKSHANA KANNADA NEWS/DAVANAGERE/DATE:19_12_2025

ಬೆಳಗಾವಿ: 2025-26 ರಲ್ಲಿ ಕರ್ನಾಟಕದಲ್ಲಿ ಸುಮಾರು 7.4 ಲಕ್ಷ ಹೆಕ್ಟೇರುಗಳಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಇದರಿಂದ ಸುಮಾರು 670 ಲಕ್ಷ ಟನ್ ಕಬ್ಬಿನ ಉತ್ಪಾದನೆಯಾಗಬಹುದು. 53.72 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗಬಹುದೆಂದು ಅಂದಾಜಿಸಲಾಗಿದೆ. ಕಬ್ಬಿಗೆ ಎಫ್ ಆರ್ ಪಿ ನಿಗಧಿಪಡಿಸುವವರು ಯಾರು? ಕೇಂದ್ರ ಸರ್ಕಾರ ತಾನೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಸುದೀರ್ಘ ಉತ್ತರ ನೀಡಿದ ಸಿಎಂ ಕೇಂದ್ರ ಸರ್ಕಾರವು ಕಬ್ಬಿನ ರಿಕವರಿಯನ್ನು ಆಧರಿಸಿ ಎಫ್.ಆರ್.ಪಿ.ಯನ್ನು ನಿಗಧಿ ಪಡಿಸಲಾಗುತ್ತದೆ. ಎಫ್ ಆರ್ ಪಿ ಎಂದರೆ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ ಎಂದರ್ಥ. ಒಂದು ಕ್ವಿಂಟಾಲ್ ಕಬ್ಬನ್ನು ಅರೆದಾಗ 9.5 ಕೆಜಿ ಸಕ್ಕರೆ ಉತ್ಪಾದನೆಯಾದರೆ ಸಾಕಾಗಿತ್ತು ಎಂದರು.

ಈ ಮಾನದಂಡವನ್ನು 2018 ರಲ್ಲಿ ಶೇ.10 ಕ್ಕೆ ಏರಿಕೆ ಮಾಡಿದರು. 2022 ರಲ್ಲಿ 10.25ಕ್ಕೆ ಏರಿಕೆ ಮಾಡಿದರು. ಕರ್ನಾಟಕದಲ್ಲಿ 3-4 ಕಬ್ಬಿನ ವಲಯಗಳಿವೆ. ಬೆಳಗಾವಿ, ಬಾಗಲಕೋಟೆಯಲ್ಲಿ ಇಳುವರಿ ಹೆಚ್ಚು ಬಂದರೆ ವಿಜಯಪುರ ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕ, ಹಾವೇರಿ, ದಾವಣಗೆರೆಗಳಲ್ಲಿ ಇಳುವರಿಯ ಪ್ರಮಾಣ ತುಸು ಕಡಿಮೆಯಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಇಳುವರಿ ಪ್ರಮಾಣ ಶೇ. 9.5 ಕ್ಕಿಂತ ಕಡಿಮೆಯಾಗುತ್ತದೆ ಎಂದರು.

ರಿಕವರಿಯು ಶೇ.10.25 ಇದ್ದರೆ ಒಂದು ಟನ್ನಿಗೆ 3550 ರೂ ದೊರೆಯುತ್ತದೆ. ಇದರಲ್ಲಿ ಕಟಾವು ಮತ್ತು ಸಾಗಣೆಗೆ 800-900 ರೂಗಳಷ್ಟು ಖರ್ಚು ಬರುತ್ತದೆ. ಇದರಿಂದಾಗಿ ಪ್ರತಿಟನ್ನಿಗೆ ಸುಮಾರು 2700 ರೂಗಳಷ್ಟು ಮಾತ್ರ ಬೆಲೆ ದೊರೆಯುತ್ತದೆ. ಕೇಂದ್ರ ಸರ್ಕಾರ 3550 ರೂ.ಗಳನ್ನು ನಿಗಧಿ ಪಡಿಸಿದರೂ ಸಹ ವಾಸ್ತವವಾಗಿ ರೈತರಿಗೆ ಸಿಗುವ ಬೆಲೆ 2700 ರೂಗಳ ಆಸು ಪಾಸಿನಷ್ಟಿರುತ್ತಿತ್ತು. ಸಹಜವಾಗಿ ರೈತರು ಆಕ್ರೋಶವನ್ನು ವ್ಯಕ್ತಪಡಿಸುವುದು ಸಹಜವೆ. ರೈತರು ಆಕ್ರೋಶಿತರಾದಾಗ ಅದಕ್ಕೆ ಬೆಂಕಿ ಸುರಿದವರು ಯಾರು? ರೈತರೊಂದಿಗೆ ಮಲಗುತ್ತೇನೆ ಎಂದು ಹೋದವರು ಯಾರು? ಯಾರು ಸಮಸ್ಯೆಗೆ ಕಾರಣರಾಗಿದ್ದಾರೊ ಅವರೆ ರೈತರ ಪರವಾಗಿರುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

2009 ಕ್ಕೆ ಮೊದಲು ಎಸ್ ಎಂ ಪಿ ಎಂಬ ಪದ್ಧತಿ ಇತ್ತು. ಆಗ ಕಬ್ಬಿಗೆ ಅತ್ಯಂತ ಕಡಿಮೆ ಬೆಲೆ ರೈತರಿಗೆ ಸಿಗುತ್ತಿತ್ತು. ಆಗ ಒಂದು ಟನ್ನಿಗೆ 812 ಇತ್ತು. ಈ ಪದ್ಧತಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಮನಗಂಡ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವು ಒಂದೇ ಬಾರಿ ಪ್ರತಿ ಟನ್ನಿಗೆ 487 ರೂಗಳನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಬೆಲೆಯನ್ನು 1298.4 ರೂಗಳಿಗೆ ಏರಿಕೆ ಮಾಡಿತು. ಇದು ಕಬ್ಬಿನ ಇತಿಹಾಸದಲ್ಲಿಯೆ ಅತಿ ಹೆಚ್ಚಿನ ಎಫ್.ಆರ್.ಪಿ.ಯಾಗಿದೆ. ರಿಕವರಿ ಶೇ.9.5 ರಷ್ಟಿದ್ದರೂ ಸಹ ಇಷ್ಟು ಬೆಲೆ ನೀಡಲಾಗಿತ್ತು. 2012-13 ರಲ್ಲಿ 250 ರೂ, 2013-14 ರಲ್ಲಿ 400 ರೂ ನೀಡಿದ್ದರು. ಮನಮೋಹನ್ ಸಿಂಗ್ ಅವರು 2009 ರಿಂದ 2013-14 ರ ಅವಧಿಯ 5 ವರ್ಷಗಳಲ್ಲಿ ಶೇ.62 ರಷ್ಟು ಹೆಚ್ಚು ಬೆಲೆ ನೀಡಿದರು. ಆಗ ರಿಕವರಿ ಪ್ರಮಾಣ ಶೇ.9.5 ರಷ್ಟಿತ್ತು. ಆಗ ದೇಶದಲ್ಲಿ ಎಥನಾಲ್ ಬ್ಲೆಂಡಿAಗ್ ಪ್ರಮಾಣ ಶೇ.5 ರಷ್ಟಿತ್ತು. ಆದರೂ ಸಹ ಹೆಚ್ಚಿನ ಕಬ್ಬಿಗೆ ಹೆಚ್ಚಿನ ಬೆಲೆ ಕೊಡಲಾಗ್ತಾ ಇತ್ತು ಮತ್ತು ರಿಕವರಿ ಪ್ರಮಾಣ ಕಡಿಮೆ ಇತ್ತು.

ಆದರೆ ಈಗ ಶೇ.20 ರಷ್ಟು ಎಥನಾಲ್ ಬ್ಲೆಂಡಿಂಗ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆದರೂ ಸಹ ಮೋದಿಯವರು 2014-15 ರಿಂದ 2025-26 ರ 12 ವರ್ಷಗಳಲ್ಲಿ ಕೇವಲ ಶೇ.61.36 ರಷ್ಟು ಮಾತ್ರ ಹೆಚ್ಚು ಮಾಡಿದ್ದಾರೆ. ರಿಕವರಿ ಪ್ರಮಾಣ ಶೇ.9.5 ಪರಿಗಣಿಸಿದರೆ ಈ 12 ವರ್ಷಗಳಲ್ಲಿ ಅವರು ಹೆಚ್ಚು ಮಾಡಿರುವುದು ಶೇ.49.57 ರಷ್ಟು ಮಾತ್ರ ಎಂದರು.

2009 ರಿಂದ 2015 ರ ವರೆಗೆ ಶೇ.9.5 ರಷ್ಟು ರಿಕವರಿಯನ್ನು ನಿಗಧಿ ಪಡಿಸಲಾಗಿತ್ತು. ಸಕ್ಕರೆಯು ಅಗತ್ಯ ವಸ್ತುಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ನಾವು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದೇವೆ. ನಾನು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ಕೃಷಿ ಸಚಿವರಿಗೆ ಪತ್ರ ಬರೆದು, ಸ್ವತಃ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ರೈತರ ಹಿತ ಕಾಯುವಂತೆ ಒತ್ತಾಯಿಸಿದ್ದೇನೆ.
ಸಕ್ಕರೆಗೆ 2019 ರಲ್ಲಿ ಎಂ.ಎಸ್.ಪಿ. ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ ಪ್ರತಿ ಕೆಜಿ ಸಕ್ಕರೆಗೆ 31 ರೂಪಾಯಿ ನಿಗದಿ ಮಾಡಲಾಗಿತ್ತು. ಈಗಲೂ ಅಷ್ಟೆ ಇದೆ. ಆನಂತರ ಅದನ್ನು ಪರಿಷ್ಕರಿಸಲಿಲ್ಲ ಎಂದು ಆರೋಪಿಸಿದರು.

ನಾನು 08.11.2025 ರಂದು ಪ್ರಧಾನ ಮಂತ್ರಿಗಳಿಗೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿಯವರಿಗೆ ಬರೆದ ಪತ್ರದಲ್ಲಿ ಸಕ್ಕರೆಯನ್ನು ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಎಂದು ಎರಡು ವಿಭಾಗ ಮಾಡಿ ಬೆಲೆಯನ್ನು ನಿಗದಿಪಡಿಸಬೇಕೆಂದು ಒತ್ತಾಯ ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಆಗಿರುವುದಿಲ್ಲ.

ಇದರ ಜೊತೆಯಲ್ಲಿ ಸಕ್ಕರೆ ರಫ್ತಿಗೂ ಕೂಡ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸುತ್ತಿದೆ.

ಈ ಬಾರಿ 15 ಲಕ್ಷ ಟನ್ನುಗಳನ್ನು ರಫ್ತು ಮಾಡುವ ಅಂದಾಜಿದೆ. ದೇಶದಲ್ಲಿ 2024-25 ರಲ್ಲಿ 296.10 ಲಕ್ಷ ಮೆಟ್ರಿಕ್ ಟನ್ ಮತ್ತು 2025-26 ರಲ್ಲಿ 343.5 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗುತ್ತಿದ್ದರೂ ಸಹ, 2023-24 ರಲ್ಲಿ 11 ಲಕ್ಷ ಮೆಟ್ರಿಕ್ ಟನ್, 2024-25 ರಲ್ಲಿ 9 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾತ್ರ ರಫ್ತು ಮಾಡಲಾಗಿದೆ. 2025-26 ರಲ್ಲಿ 15 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ರಫ್ತು ಆಗಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಕರ್ನಾಟಕದಿಂದ ಈ ವರ್ಷ 2.47 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾತ್ರ ರಫ್ತು ಮಾಡಲು ಅವಕಾಶ ಕಲ್ಪಿಸಿದ್ದಾರೆ. 2019 ರಲ್ಲಿ ಸಕ್ಕರೆ ಬೆಲೆಯನ್ನು ನಿಗದಿಪಡಿಸಿದ ನಂತರ ಮತ್ತೆ 1 ರೂಪಾಯಿಯೂ ಹೆಚ್ಚು ಮಾಡಲಿಲ್ಲ. ಎರಡು ವರ್ಷಗಳ ಹಿಂದೆ ಎಥೆನಾಲ್ ಬೆಲೆ ಪರಿಷ್ಕರಣೆ ಆಗಿದ್ದು ಬಿಟ್ಟರೆ, ಅದನ್ನೂ ಹೆಚ್ಚು ಮಾಡಲಿಲ್ಲ. 2021-22 ರಲ್ಲಿ 110 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಅವಕಾಶ ನೀಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಸಕ್ಕರೆ ರಫ್ತನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಪರೋಕ್ಷವಾಗಿ ಕಬ್ಬು ಉತ್ಪಾದಿಸುವ ರೈತರಿಗೆ ಹೊಡೆತ ಬೀಳುತ್ತಿದೆ. ಆದ್ದರಿಂದ ನಮ್ಮ ಸರ್ಕಾರವು ಕೂಡಲೇ ದೇಶಕ್ಕೆ ಅಗತ್ಯವಿರುವಷ್ಟು ಸಕ್ಕರೆಯನ್ನು ಹೊರತುಪಡಿಸಿ ಉಳಿದ ಸಕ್ಕರೆಯನ್ನು ರಫ್ತು ಮಾಡಬೇಕೆಂದು ಒತ್ತಾಯಿಸುತ್ತದೆ.

ಹಾಗೆಯೇ, ಒಂದು ಲೀಟರ್ ಎಥನಾಲ್‌ಗೆ 65 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಆದರೆ ಪೆಟ್ರೋಲಿಯಂ ಬೆಲೆ ರೂ.100 ರ ಆಸುಪಾಸಿನಲ್ಲಿದೆ. ಹಾಗಾಗಿ, ಪೆಟ್ರೋಲಿಯಂ ಕಂಪನಿಗಳಿಗೆ 65 ರೂಪಾಯಿ ನಿಗದಿಪಡಿಸಿರುವುದರಿಂದ ಉಳಿಕೆ ಹಣ ಅಂಬಾನಿ ಮುಂತಾದವರ ಪಾಲಾಗುತ್ತಿದೆ. ಇದನ್ನೂ ಕೂಡ ರೀವಿಸಿಟ್ ಮಾಡಬೇಕಾದ ಅಗತ್ಯ ಇದೆ ಎಂದು ವಿವರಿಸಿದರು.

ಹೀಗಿದ್ದಾಗ ಬಿಜೆಪಿಯವರು ರೈತರ ಹಿತಾಸಕ್ತಿ ಕಾಯಲು ಹೇಗೆ ಸಾಧ್ಯ ? ಕೊಲ್ಲುವವರೆ ಕಾಯುವವರು ಆಗಲು ಸಾಧ್ಯವೆ? 2009 ರಿಂದ 2015 ರ ವರೆಗೆ ಶೇ.9.5 ರಷ್ಟು ರಿಕವರಿಯನ್ನು ನಿಗಧಿ ಪಡಿಸಲಾಗಿತ್ತು.

ಸಕ್ಕರೆಯು ಅಗತ್ಯ ವಸ್ತುಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ನಾವು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದೇವೆ.

ನಾನು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ಕೃಷಿ ಸಚಿವರಿಗೆ ಪತ್ರ ಬರೆದು, ಸ್ವತಃ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ರೈತರ ಹಿತ ಕಾಯುವಂತೆ ಒತ್ತಾಯಿಸಿದ್ದೇನೆ.
ಸಕ್ಕರೆಗೆ 2019 ರಲ್ಲಿ ಎಂ.ಎಸ್.ಪಿ. ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ ಪ್ರತಿ ಕೆಜಿ ಸಕ್ಕರೆಗೆ 31 ರೂಪಾಯಿ ನಿಗದಿ ಮಾಡಲಾಗಿತ್ತು. ಈಗಲೂ ಅಷ್ಟೆ ಇದೆ. ಆನಂತರ ಅದನ್ನು ಪರಿಷ್ಕರಿಸಲಿಲ್ಲ ಎಂದರು.

Share

Leave a comment

Leave a Reply

Your email address will not be published. Required fields are marked *