SUDDIKSHANA KANNADA NEWS/ DAVANAGERE/ DATE:05-11-2023
ದಾವಣಗೆರೆ: ಅಡಿಕೆಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಮತ್ತೆ ಕಳ್ಳತನ ಶುರುವಾಗಿದೆ. ಅಡಿಕೆ ಕೊಯ್ಲು ಶುರುವಾಗಿದ್ದು, ಅಡಿಕೆ ಕಾಪಾಡಿಕೊಳ್ಳುವುದು ಬೆಳೆಗಾರರಿಗೆ ಸಮಸ್ಯೆಯಾಗಿದೆ.
ನಸುಕಿನಲ್ಲಿ ಕಳ್ಳರು ಅಡಿಕೆ ಕದ್ದೊಯ್ದ ಘಟನೆ ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಹಾಗೂ ಕಂಚಿಗನಾಳ್ ಗ್ರಾಮದಲ್ಲಿ ನಡೆದಿದೆ. ಕಂಚಿಗನಾಳ್ ಗ್ರಾಮದ ಶಶಿಧರ್ ಎಂಬುವವರ ಖೇಣಿ ಮನೆಯಲ್ಲಿ ಅಡಿಕೆಯನ್ನು ಒಣಗಿಸಲು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದಿದ್ದ ಕಳ್ಳರು 1. 68 ಲಕ್ಷ ರೂಪಾಯಿ ಮೌಲ್ಯದ ಮೂರು ಕ್ವಿಂಟಲ್ ಅಡಿಕೆಯನ್ನು ಕದ್ದೊಯ್ದಿದ್ದಾರೆ.
ಗೊಪ್ಪೇನಹಳ್ಳಿ ಗ್ರಾಮದ ಗುರುಪಾದಪಪ್ಪ ಅವರ ಖೇಣಿ ಮನೆಗೆ ಬಿಳಿ ಕಾರಿನಲ್ಲಿ ಬಂದ ಕಳ್ಳರು 2 ಲಕ್ಷ ರೂಪಾಯಿ ಮೌಲ್ಯದ 4 ಕ್ವಿಂಟಲ್ ಅಡಿಕೆ ಕದ್ದೊಯ್ದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎರಡೂ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.