Site icon Kannada News-suddikshana

ಕೇಕ್ ಪ್ರಿಯರಿಗೆ ಬಿಗ್ ಶಾಕ್: ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!

(Cake Cancer) ಕೇಕ್ ಪ್ರಿಯರಿಗೆ ಬಿಗ್ ಶಾಕ್ ಒಂದು ಎದುರಾಗಿದೆ. ಹೌದು. ಬೆಂಗಳೂರಿನ ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶವಿರುವುದು ಕೇಕ್ ಟೆಸ್ಟಿಂಗ್ ರಿಪೋರ್ಟ್ ನಲ್ಲಿ ಪತ್ತೆಯಾಗಿದೆ.

ರೆಡ್ ವೆಲ್ ವೆಟ್, ಬ್ಲಾಕ್ ಫಾರೆಸ್ಟ್ ಕೇಕ್ ಗಳಲ್ಲಿ ಅತಿಹೆಚ್ಚು ಬಣ್ಣ ಬಳಕೆ ಮಾಡಲಾಗುತ್ತದೆ. ಈ ಬಣ್ಣಗಳಲ್ಲಿ ಅಪಾಯಕಾರಿ ಅಂಶಗಳು ಇವೆ ಎಂಬುದು ಬಹಿರಂಗವಾಗಿದೆ. 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೊ, ಪೊನುಸೆಯಾ 4R, ಕಾರ್ಮಿಯೊಸೆನ್ ಎಂಬ ಅಂಶಗಳು ಪತ್ತೆಯಾಗಿವೆ.

ಕೃತಕ ಬಣ್ಣಗಳಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರೆಡ್ ವೆಲ್ವೆಟ್ , ಬ್ಲಾಕ್ ಫಾರೆಸ್ಟ್ ಕೇಕ್ ಗಳಿಗೆ ಬಣ್ಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಕೇಕ್ ತಯಾರಿಸುವ ವೇಳೆ ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಕರಿಗೆ ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

Exit mobile version