SUDDIKSHANA KANNADA NEWS/DAVANAGERE/DATE:05_01_2026
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ತನ್ನ ಸಹೋದರನ ಪರ ಬ್ಯಾಟ್ ಬೀಸಿರುವ ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ಒಂದು ವೇಳೆ ಶಾಮನೂರು ಶಿವಶಂಕರಪ್ಪರ ಕುಟುಂಬದವರಿಗೆ ಟಿಕೆಟ್ ನೀಡದಿದ್ದರೆ ಸಹೋದರ ಶಿವಗಂಗಾ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
READ ALSO THIS STORY: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪುತ್ರ ಸಮರ್ಥ್ ಅಭ್ಯರ್ಥಿಯಾಗ್ತಾರಾ: ಏನೇಳಿದ್ರು ಎಸ್. ಎಸ್. ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್?
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಉಪಚುನಾವಣೆ ಎದುರಾದರೆ ಆ ಕುಟಂಬಕ್ಕೆ ಟಿಕೆಟ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದೆ. ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಟಿಕೆಟ್ ಸಿಗುವುದು ಸಹಜ. ಶಿವಶಂಕರಪ್ಪರ ಕುಟುಂಬಕ್ಕೆ ಆದ್ಯತೆ ನೀಡಲಿ. ಒಂದು ವೇಳೆ ಬದಲಾವಣೆ ಬಯಸಿದ್ದೇ ಆದಲ್ಲಿ ನನ್ನ ಅಣ್ಣನಿಗೆ ಟಿಕೆಟ್ ನೀಡಿದರೆ ಚುನಾವಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಶಾಸಕರು ನಿಧನ ಹೊಂದಿದಾಗ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿದೆ. ಈ ಕಾರಣಕ್ಕೆ ಅವರ ಕುಟುಂಬಕ್ಕೆ ಆದ್ಯತೆ ಸಿಗಲಿ ಎಂಬುದು ನನ್ನ ಮನವಿ. ಹೈಕಮಾಂಡ್ ಯಾರೇ ಅಭ್ಯರ್ಥಿ ಎಂದು ಘೋಷಿಸಿದರೂ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ನಿಂದ ನನ್ನ ಅಣ್ಣ ಶಿವಗಂಗಾ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದರೆ ತಪ್ಪಿಲ್ಲ. ನಾನೇ ಚುನಾವಣೆಯನ್ನು ಮುಂದೆ ನಿಂತು ಖುದ್ದಾಗಿ ನಡೆಸುತ್ತೇನೆ
ಎಂದು ಹೇಳಿದರು.
ಬಳ್ಳಾರಿಯಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಘರ್ಷಣೆ ಸಂಭವಿಸಿದೆ. ಈ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು, ಈ ಕುರಿತಂತೆ ಸಮಗ್ರ ತನಿಖೆಯಾಗಬೇಕು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ. ಯಾರೂ ಸಹ ಇಂಥ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.
- Basavaraju V. Shivaganga
- Basavaraju V. Shivaganga Congress Mla
- Basavaraju V. Shivaganga News
- Basavaraju V. Shivaganga Talk
- DAVANAGERE
- DAVANAGERE NEWS
- DAVANAGERE NEWS UPDATES
- DAVANAGERE VARTHE
- Mla
- ಚನ್ನಗಿರಿ ಕಾಂಗ್ರೆಸ್ ಶಾಸಕ
- ದಾವಣಗೆರೆ
- ದಾವಣಗೆರೆ ನಗರ
- ದಾವಣಗೆರೆ ನ್ಯೂಸ್
- ದಾವಣಗೆರೆ ವಾರ್ತೆ
- ದಾವಣಗೆರೆ ಸಿಟಿ
- ದಾವಣಗೆರೆ ಸುದ್ದಿ
- ಬಸವರಾಜ್ ವಿ. ಶಿವಗಂಗಾ
- ಬಸವರಾಜ್ ವಿ. ಶಿವಗಂಗಾ ಗರಂ
- ಬಸವರಾಜ್ ವಿ. ಶಿವಗಂಗಾ ನ್ಯೂಸ್
- ಬಸವರಾಜ್ ವಿ. ಶಿವಗಂಗಾ ಮಾತು
- ಬಸವರಾಜ್ ವಿ. ಶಿವಗಂಗಾ ಸಿಟ್ಟು
- ಬಸವರಾಜ್ ವಿ. ಶಿವಗಂಗಾ- ಚನ್ನಗಿರಿ ಕಾಂಗ್ರೆಸ್ ಶಾಸಕ





Leave a comment