Site icon Kannada News-suddikshana

ಶಾಸಕ ಬಿ. ಪಿ. ಹರೀಶ್ ಅನುಚಿತ ಹೇಳಿಕೆ, ಸ್ತ್ರೀ ದ್ವೇಷಿ ವರ್ತನೆಗೆ ಬೂದಾಳ್ ಬಾಬು ಖಂಡನೆ

ಬಿ. ಪಿ. ಹರೀಶ್

SUDDIKSHANA KANNADA NEWS/ DAVANAGERE/DATE:04_09_2025

ದಾವಣಗೆರೆ: ಹರಿಹರ ಶಾಸಕ ಬಿ. ಪಿ. ಹರೀಶ್ ಅವರ ಅನುಚಿತ ವರ್ತನೆ, ಸ್ತ್ರೀ ದ್ವೇಷಿ ಹೇಳಿಕೆಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ನಾಯಿಗೆ ಹೋಲಿಸಿದ ಅವಹೇಳನಕಾರಿ ಪ್ರಸ್ತಾಪವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ನೇತಾರ ಬೂದಾಳ್ ಬಾಬು ಹೇಳಿದ್ದಾರೆ.

READ ALSO THIS STORY: “ಸಮಾಜದ ಸ್ವಾಸ್ಥ್ಯ ಕೆಡಿಸುವವರ ಬಗ್ಗೆ ತಲೆಕೆಡಿಸಿಕೊಳ್ಳದೇ ಶಾಂತಿಯುತ ಗಣೇಶೋತ್ಸವ”: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹರ್ಷ

ಶಾಸಕರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, “ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಶಾಮನೂರು ಕುಟುಂಬದ ಪೊಮೆರಿಯನ್ ನಾಯಿಯಂತೆ ವರ್ತಿಸುತ್ತಾರೆ” ಎಂದು ಹೇಳಿದ್ದು, ಇದು ಸಹನೀಯವಲ್ಲ ಮತ್ತು ಮಹಿಳಾ ಅಧಿಕಾರಿಗಳ ಕಡೆಗೆ ಅವಹೇಳನಕಾರಿ ಮನೋಭಾವವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಶಾಸಕರ ವಿರುದ್ಧ ಆರೋಪಗಳೇನು?

ಬಿ. ಪಿ. ಹರೀಶ್ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲತೆ ಕಂಡಿದ್ದಾರೆ. ಎರಡು ವರ್ಷದ ಅವಧಿಯ ಕಾರ್ಯಕಾಲದಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಮೂಲಸೌಕರ್ಯ, ನೀರಾವರಿ, ರಸ್ತೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶೂನ್ಯ ಪ್ರಗತಿ. ಜನಪ್ರತಿನಿಧಿಯಾಗಿ ಮೂಲಭೂತ ಕರ್ತವ್ಯಗಳ ಉಲ್ಲಂಘನೆ ಮಾಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಮಾಡಿದ್ದು, ಇದರಿಂದಾಗಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 79 (ಮಹಿಳೆಯ ಮಾನಹಾನಿ) ಮತ್ತು ಸೆಕ್ಷನ್ 132 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಮಾದರಿ ಮಹಿಳಾ ಅಧಿಕಾರಿಯ ಖ್ಯಾತಿ ಮತ್ತು ಗೌರವಕ್ಕೆ ಧಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

ತಮ್ಮ ವಿಫಲತೆಯನ್ನು ಮರೆಮಾಚಲು ಇತರರ ಮೇಲೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಅಧಿಕೃತ ಸಭೆಗಳಲ್ಲಿ ಅನುಚಿತ ವರ್ತನೆ ತೋರಿದ್ದಾರೆ. ಲ್ಲೆಯ ರಾಜಕೀಯ ವಾತಾವರಣವನ್ನು ಹಾಳುಮಾಡುವ ಪ್ರವೃತ್ತಿ ಹೊಂದಿದ್ದಾರೆ. ಇದು ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯ ವಿರುದ್ಧದ ದಾಳಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿರುವ ಈ ಕಾಲದಲ್ಲಿ, ಇಂತಹ ಹಿಂಡುಮುಂಡುತನದ ವರ್ತನೆಯನ್ನು ಸಹಿಸಲಾಗುವುದಿಲ್ಲ. ಶಾಸಕರ ಈ ರೀತಿಯ ವರ್ತನೆಯು ಅವರ ಸರ್ವಾಧಿಕಾರಿ ಮನೋಭಾವವನ್ನು ತೋರಿಸುತ್ತದೆ ಮತ್ತು ಇದು ಜನಪ್ರತಿನಿಧಿಗೆ ಶೋಭಿಸುವುದಿಲ್ಲ ಎಂದು ಬೂದಾಳ್ ಬಾಬು ಹೇಳಿದ್ದಾರೆ.

ಮಾನಹಾನಿ ಮತ್ತು ಸ್ತ್ರೀ ದ್ವೇಷದ ಆರೋಪದ ಮೇಲೆ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಉಮಾ ಪ್ರಶಾಂತ್ ಅವರಿಗೆ ಮತ್ತು ಸಮಾಜಕ್ಕೆ ಬಹಿರಂಗವಾಗಿ ಬಿ. ಪಿ. ಹರೀಶ್ ಬಹಿರಂಗ ಕ್ಷಮೆಯಾಚಿಸಬೇಕು.ಬಿಜೆಪಿ ನಾಯಕತ್ವವು ಶಾಸಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Exit mobile version