Site icon Kannada News-suddikshana

BPL – APL ಪಡಿತರದಾರರಿಗೆ ಬಿಗ್ ನ್ಯೂಸ್: ಆಹಾರ ಮತ್ತು ನಾಗರಿಕ ಇಲಾಖೆ ಕೊಟ್ಟಿರುವ ಖಡಕ್ ಸೂಚನೆ ಏನು?

SUDDIKSHANA KANNADA NEWS/ DAVANAGERE/ DATE:15-01-2025

ಬೆಂಗಳೂರು: ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳ ಮ್ಯಾಪಿಂಗ್ ಕಾರ್ಯ ಚಾಲ್ತಿಯಲ್ಲಿದ್ದು, ಜಾತಿವಾರು ಮ್ಯಾಪಿಂಗ್ ಮಾಡಿಸಬೇಕು.

ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರು ಈಗಾಗಲೇ ಕುಟುಂಬ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿಯೇ ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ತಮ್ಮ ಬೆರಳಚ್ಚು ನೀಡಿ (ಇ-ಕೆವೈಸಿ) ನವೀಕರಿಸಿಕೊಳ್ಳಬೇಕು.

ಇ-ಕೈವೈಸಿ ಆಗದ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮ್ಯಾಪಿಂಗ್ ಆಗದ ಫಲಾನುಭವಿಗಳ ಪಟ್ಟಿಯನ್ನು ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಲಾಗಿದೆ. ಇ-ಕೆವೈಸಿ ಮತ್ತು ಜಾತಿವಾರು ಮ್ಯಾಪಿಂಗ್ ಆಗದ ಫಲಾನುಭವಿಗಳು ಕೂಡಲೇ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು.

ಪೋರ್ಟಬಲಿಟಿಯಿಂದ ಸ್ವೀಕರಿಸುವ ಕಾರ್ಡುದಾರರು ಅಥವಾ ವಲಸೆ ಹೋಗಿರುವ ಕಾರ್ಡುದಾರರ ಸದಸ್ಯರು ತಾವು ಇರುವ ಸ್ಥಳದಲ್ಲಿಯೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆಧಾರ್ ಪ್ರತಿಯೊಂದಿಗೆ ಬೆರಳಚ್ಚು ನೀಡಿ ಇ-ಕೆವೈಸಿ ನವೀಕರಿಸಿಕೊಳ್ಳಬೇಕು ಮತ್ತು ಜಾತಿವಾರು ಮ್ಯಾಪಿಂಗ್ ಮಾಡಿಸಬೇಕು.

ಇ-ಕೆವೈಸಿ ನವೀಕರಿಸಿಕೊಳ್ಳದ ಪಡಿತರ ಚೀಟಿದಾರರಿಗೆ/ಸದಸ್ಯರಿಗೆ ಮುಂದಿನ ತಿಂಗಳು ಆಹಾರ ಧಾನ್ಯಗಳ ಹಂಚಿಕೆ ಸ್ಥಗಿತಗೊಳಿಸಲಾಗುವುದು. ಹಾಗಾಗಿ ಕೂಡಲೇ ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಲು ಜ.31 ರ ವರೆಗೆ ಕೊನೆಯ ಕಾಲಾವಕಾಶ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Exit mobile version