Site icon Kannada News-suddikshana

BIG BREAKING: ಸಿಲಿಂಡರ್ ಸ್ಫೋಟ, ಐವರ ಸ್ಥಿತಿ ಚಿಂತಾಜನಕ: ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ…!

SUDDIKSHANA KANNADA NEWS/ DAVANAGERE/ DATE:02-07-2024

ದಾವಣಗೆರೆ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಎಸ್ ಒ ಜಿ ಕಾಲೋನಿಯಲ್ಲಿ ನಡೆದಿದೆ.

ಎಸ್ ಒ ಜಿ ಕಾಲೋನಿ ನಿವಾಸಿಗಳಾದ ಲಲಿತಮ್ಮ(50), ಮಲ್ಲೇಶಪ್ಪ(60), ಪಾರ್ವತಮ್ಮ(45), ಸೌಭಾಗ್ಯ(36) ಪ್ರವೀಣ್(35) ಗಂಭೀರವಾಗಿ ಗಾಯಗೊಂಡವರು ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಆನ್ ಮಾಡಲು ಹೋಗಿದ್ದಾಗ ಸಿಲಿಂಡರ್ ಗೆ ಬೆಂಕಿಯ ಕಿಡಿ ತಗುಲಿ ಸ್ಪೋಟ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಮಾತ್ರವಲ್ಲ, ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಮನೆಯ ಮೇಲ್ಛಾವಣಿಯೇ ಕಿತ್ತು ಹೋಗಿದೆ.

ಅಡುಗೆ ಮಾಡುವಾಗ ಸಿಲಿಂಡರ್ ಸೋರಿಕೆ ಆಗಿದ್ದು, ಈ ವೇಳೆ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ. ಈ ವೇಳೆ ಸ್ಫೋಟಗೊಂಡ ತೀವ್ರತೆಗೆ ಮನೆಯಲ್ಲಿದ್ದ ಲಲಿತಮ್ಮ, ಮಲ್ಲೇಶಪ್ಪ, ಪಾರ್ವತಮ್ಮ, ಸೌಭಾಗ್ಯ, ಪ್ರವೀಣ್ ಅವರು ಮನೆಯಲ್ಲಿದ್ದರು. ಸ್ಫೋಟದ ಬೆಂಕಿಯ ಕೆನ್ನಾಲಗಿಗೆ ಐವರು ಶೇಕಡಾ 50ರಿಂದ 60ರಷ್ಟು ಸುಟ್ಟ ಗಾಯಗಳಾಗಿವೆ. ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ನಗರದ ಹೈಟೆಕ್ ಆಸ್ಪತ್ರೆ ಗೆ ಗಾಯಾಳುಗಳ ರವಾನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸಿಲಿಂಡರ್ ಸ್ಫೋಟದ ಸದ್ದು ಅಕ್ಕಪಕ್ಕದ ಮನೆಯವರಿಗೆ ಆತಂಕ ತಂದಿತ್ತು. ಮನೆಯಿಂದ ಹೊರಗಡೆ ಓಡೋಡಿ ಬಂದಾಗ ಮನೆಯು ಹೊತ್ತಿ ಉರಿಯುತಿತ್ತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಈ ವೇಳೆ ತೀವ್ರ ಗಾಯಗಳಿಂದ ಬಳಲುತ್ತಿದ್ದವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಾಯಿತು.

Exit mobile version