Home ದಾವಣಗೆರೆ ಚುನಾವಣಾ ಆಯೋಗ ಹಿಡಿತದಲ್ಲಿಟ್ಟುಕೊಂಡಿರುವ “ಬಿಜೆಪಿಗರ ಯುಪಿ, ಬಿಹಾರದ ಆಟ” ಕರ್ನಾಟಕದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ!
ದಾವಣಗೆರೆನವದೆಹಲಿಬೆಂಗಳೂರು

ಚುನಾವಣಾ ಆಯೋಗ ಹಿಡಿತದಲ್ಲಿಟ್ಟುಕೊಂಡಿರುವ “ಬಿಜೆಪಿಗರ ಯುಪಿ, ಬಿಹಾರದ ಆಟ” ಕರ್ನಾಟಕದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ!

Share
Share

SUDDIKSHANA KANNADA NEWS/DAVANAGERE/DATE:17_12_2025

ಬೆಳಗಾವಿ: ಚುನಾವಣಾ ಆಯೋಗವನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿರುವ ಬಿಜೆಪಿಗರು ಬಿಹಾರ, ಉತ್ತರ ಪ್ರದೇಶಗಳಲ್ಲಿ ಗೆದ್ದಂತೆ ಕರ್ನಾಟಕದಲ್ಲಿಯೂ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಅದಕ್ಕಾಗಿ ಚುನಾವಣೆಗೆ ಬನ್ನಿ ಎಂಬ ಪಂಥಾಹ್ವಾನ ನೀಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಬಿಜೆಪಿಯವರ ಆಟ ಇಲ್ಲಿ ನಡೆಯುವುದಿಲ್ಲ. ಅವರು ಚುನಾವಣೆಗಳಲ್ಲಿ ಗೆದ್ದಿದ್ದು ಹೇಗೆ ಎನ್ನುವುದು ಕರ್ನಾಟಕದ ಜನತೆಗೆ ಗೊತ್ತು. ಜನರ ಆಶೀರ್ವಾದ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹಗರಣಗಳಲ್ಲಿಯೇ ಮುಳುಗಿಹೋಗಿದ್ದರು. ಆಳಂದ ಕ್ಷೇತ್ರದಲ್ಲಿ 70-80 ರೂಪಾಯಿಗೆ ಮತಗಳನ್ನು ಖರೀದಿ ಮಾಡುತ್ತಿದ್ದವರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ದುಡ್ಡನ್ನು ಕೊಳ್ಳೆ ಹೊಡೆದವರು, ಯುವಜನರ ಭವಿಷ್ಯಕ್ಕೆ ಕೊಳ್ಳಿ ಇಟ್ಟವರು, ಉದ್ಯೋಗ ಖಾತ್ರಿ ಯೋಜನೆಯನ್ನು ಹದಗೆಡಿಸಿದವರು, ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನಕ್ಕೆ ಕತ್ತರಿ ಹಾಕಿದವರು ಚುನಾವಣೆಗೆ ಬನ್ನಿ ಎಂದು ಸವಾಲು ಹಾಕುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles