Home ಕ್ರೈಂ ನ್ಯೂಸ್ ಅತ್ಯಾಚಾರಿ, ಕಳ್ಳರನ್ನು ಸೃಷ್ಟಿಸುವಲ್ಲಿ ನಕಲಿ ಗಾಂಧಿಗಳ ಪಾತ್ರವೇನು? ಮಾಜಿ ರೌಡಿಗಳು ಉತ್ತರಿಸಲಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅತ್ಯಾಚಾರಿ, ಕಳ್ಳರನ್ನು ಸೃಷ್ಟಿಸುವಲ್ಲಿ ನಕಲಿ ಗಾಂಧಿಗಳ ಪಾತ್ರವೇನು? ಮಾಜಿ ರೌಡಿಗಳು ಉತ್ತರಿಸಲಿ!

Share
ಗಾಂಧಿ
Share

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ ಪ್ರಯೋಗಿಸಿದೆ.

ಹರಿಪ್ರಸಾದ್‌ ಅವರೇ, ನಿಮ್ಮದೇ ಅಭಿಪ್ರಾಯದ ಪ್ರಕಾರ ಹೀಗೊಂದು ಬರಹ ಎಂದು ಹೇಳುವ ಮೂಲಕ ಕಾಲೆಳೆದಿದೆ. ಮಾತ್ರವಲ್ಲ, ಅತ್ಯಾಚಾರಿ, ಕಳ್ಳರನ್ನು ಸೃಷ್ಟಿಸುವಲ್ಲಿ ನಕಲಿ ಗಾಂಧಿಗಳ ಪಾತ್ರವೇನು ಎಂದು ಪ್ರಶ್ನಿಸಿದೆ.

ಕೇರಳದ ಕಾಂಗ್ರೆಸ್‌ ಸಂಸದ ರಾಹುಲ್‌ ಎಂಬಾತ ಅತ್ಯಾಚಾರ ನಡೆಸುವಲ್ಲಿ ರಾಹುಲ್‌ ಗಾಂಧಿ ಪಾತ್ರವಿದೆ. ಆತನನ್ನು ಅತ್ಯಾಚಾರಿ ಆಗಿಸುವಲ್ಲಿ ರಾಹುಲ್‌ ಗಾಂಧಿಯ ಪ್ರಭಾವವಿದೆಯೇ ಎಂದು ಪ್ರಶ್ನಿಸಿದೆ.

ವೈಯಕ್ತಿಕ ದಾಳಿ ಮತ್ತು ಪ್ರಶ್ನೆಗಳು

ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಅವರನ್ನು ಕಳ್ಳನಾಗಿಸುವಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪಾತ್ರವಿದೆಯೇ ಎಂದು ಕೇಳಿದೆ.

“ನಕಲಿ ಗಾಂಧಿ” ಮತ್ತು “ರೌಡಿ ಪಿಸಿಸಿ” ವ್ಯಂಗ್ಯ

ಒಬ್ಬ ಅತ್ಯಾಚಾರಿಯಾಗಲು, ಮತ್ತೊಬ್ಬ ಕಳ್ಳನಾಗಲು ನಕಲಿ ಗಾಂಧಿ ಕುಟುಂಬದ ಹಿನ್ನಲೆಯಿಂದ ಬಂದ ಸೋನಿಯಾ, ರಾಹುಲ್‌ ಅವರ ಪಾತ್ರ ಕೂಡಾ ಇದೆ. ರಾಹುಲ್‌, ಪೊಟ್ಟಿ ಅವರಂತಹ ಅತ್ಯಾಚಾರಿ-ಕಳ್ಳರನ್ನು ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಹಾಲಿ ಸಂಸದರೀರ್ವರಿಗೆ ಇಷ್ಟೂ ಅರಿವಿಲ್ಲದಿರುವುದು ಈ ದೇಶದ ದುರಂತವಲ್ಲವೇ? ಎಂದು ಪ್ರಶ್ನೆ ಮಾಡಿದೆ.

ಭಾರತ ಸಂವಿಧಾನದ 51A(h) ಆರ್ಟಿಕಲ್ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವೆಂದರೆ : “ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಗತಿಪರ ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು”. ಈ ವಿಧಿಯ ಉದ್ದೇಶವು ಅಂಧಶ್ರದ್ಧೆ, ಪೂರ್ವಗ್ರಹಗಳನ್ನು ಅವಲಂಬಿಸದೆ, ತಾರ್ಕಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಗತಿಶೀಲ ದೃಷ್ಟಿಕೋನವನ್ನು ಉತ್ತೇಜಿಸುವುದಾಗಿದೆ. ಸೋನಿಯಾ, ರಾಹುಲ್‌ ಅಂತವರು ಸಂವಿಧಾನದ ಈ ಆರ್ಟಿಕಲ್ ಅನ್ನು ಉಲ್ಲಂಘಿಸಿ ಅಪರಾಧ ಮಾಡಿದ್ದೇ ರಾಹುಲ್‌, ಪೊಟ್ಟಿ ಅವರಂತವರು ಅತ್ಯಾಚಾರಿಗಳಾಗಲು ಕಾರಣವಾಗಿದೆ‌. ಹಾಗಾಗಿಯೇ ನಕಲಿ ಗಾಂಧಿಗಳಾದ ಸೋನಿಯಾ, ರಾಹುಲ್‌ ಅವರೂ ಕೂಡಾ ಅತ್ಯಾಚಾರ, ಕಳ್ಳತನದ ನೈತಿಕ ಹೊಣೆ ಹೊತ್ತುಕೊಳ್ಳಬೇಕು
ಎಂದು ಹೇಳಿದೆ.

ನಕಲಿ ಗಾಂಧಿ “ಜೀ” ಗಳು ದೇಶಸೇವೆಯ ಹೆಸರಿನಲ್ಲಿ ದೇಶವನ್ನೇ ಯಾಮಾರಿಸುತ್ತಿದ್ದಾರೆ ಎನ್ನುವುದನ್ನು ಸಮಾಜ ನೆನಪಿಟ್ಟುಕೊಳ್ಳಬೇಕು. ಅಂದ ಹಾಗೆ ಹರಿಪ್ರಸಾದರೇ ರೌಡಿಗಳಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಪ್ರತ್ಯೇಕವಾದ ಪಿಸಿಸಿ ಇದೆಯೇ? ಎಂದು ವ್ಯಂಗ್ಯವಾಡಿದೆ.

Share

Leave a comment

Leave a Reply

Your email address will not be published. Required fields are marked *

Related Articles