Home ಕ್ರೈಂ ನ್ಯೂಸ್ ಕಲಬುರ್ಗಿ ಜಿಲ್ಲೆಗೆ ಶಾಪಗ್ರಸ್ತ ದೆವ್ವದಂತೆ ಕಾಡ್ತಿರುವ ಪ್ರಿಯಾಂಕ್ ಖರ್ಗೆ ಹಳದಿಕಣ್ಣಿಗೆ ಆರ್ ಎಸ್ ಎಸ್ ಸೇವೆ ಕಾಣದು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಲಬುರ್ಗಿ ಜಿಲ್ಲೆಗೆ ಶಾಪಗ್ರಸ್ತ ದೆವ್ವದಂತೆ ಕಾಡ್ತಿರುವ ಪ್ರಿಯಾಂಕ್ ಖರ್ಗೆ ಹಳದಿಕಣ್ಣಿಗೆ ಆರ್ ಎಸ್ ಎಸ್ ಸೇವೆ ಕಾಣದು!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಅಭಿವೃದ್ಧಿಗೆ ಶಾಪಗ್ರಸ್ತ ದೆವ್ವದಂತೆ ಕಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಮೊದಲು ಸರಿಯಾದ ಕಣ್ಣಿನ ಆಸ್ಪತ್ರೆಗೆ ಭೇಟಿ‌ ನೀಡಿ ನಿಮ್ಮ ಕಣ್ಣಿನ ದೋಷವನ್ನು ಪರೀಕ್ಷಿಸಿಕೊಳ್ಳಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸಂಘ ಕಾರ್ಯ ಸಂಘಕ್ಕೋಸ್ಕರ ಅಲ್ಲ. ; ಸಮಾಜಕ್ಕಾಗಿ, ದೇಶಕ್ಕಾಗಿ ನಡೆಯುತ್ತಿರುವುದು. ರಾಷ್ಟ್ರ ನಿರ್ಮಾಣ, ಸಾಮಾಜಿಕ ಸೇವೆ ಮತ್ತು ಏಕತೆಗೆ ಆರೆಸ್ಸೆಸ್ ಕೊಡುಗೆಗಳು ಅಪಾರ ಎಂದು ಹೇಳಿದೆ.

ಬಿಜೆಪಿ ಟೀಕೆಯ ಪ್ರಮುಖ ಅಂಶಗಳು

  • ಆರೆಸ್ಸೆಸ್ ಸೇವೆಯ ಸಮರ್ಥನೆ: ಆರೆಸ್ಸೆಸ್ ಕೇವಲ ಸಂಘಟನೆಗಾಗಿ ಅಲ್ಲ, ದೇಶದ ನಿರ್ಮಾಣ ಮತ್ತು ಸಾಮಾಜಿಕ ಸೇವೆಗಾಗಿ ಶ್ರಮಿಸುತ್ತಿದೆ. ವಿಪತ್ತುಗಳ ಸಮಯದಲ್ಲಿ ಸ್ವಯಂಸೇವಕರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ ಎಂದು ಬಿಜೆಪಿ ಹೇಳಿದೆ.

  • ಅಭಿವೃದ್ಧಿಯ ಪ್ರಶ್ನೆ: ಸುಮಾರು 40 ವರ್ಷಗಳಿಂದ ಖರ್ಗೆ ಕುಟುಂಬ ಕಲಬುರಗಿಯನ್ನು ಆಳುತ್ತಿದ್ದರೂ, ಜಿಲ್ಲೆ ಇನ್ನೂ ಹಿಂದುಳಿದಿರುವುದಕ್ಕೆ ಕಾರಣವೇನು? ಎಂದು ಪ್ರಶ್ನಿಸಲಾಗಿದೆ.

  • ವರದಿಗಳ ಉಲ್ಲೇಖ: ನಂಜುಂಡಪ್ಪ ವರದಿಯ ಪ್ರಕಾರವೂ ಕಲಬುರಗಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿ ಉಳಿದಿರುವುದನ್ನು ಬಿಜೆಪಿ ಎತ್ತಿ ತೋರಿಸಿದೆ.

  • ಶಿಕ್ಷಣದ ಗುಣಮಟ್ಟ: SSLC ಮತ್ತು PUC ಫಲಿತಾಂಶಗಳಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಕಿಡಿಕಾರಿದೆ.

  • ವೈಯಕ್ತಿಕ ಟೀಕೆ: ಪ್ರಿಯಾಂಕ್ ಖರ್ಗೆ ಅವರನ್ನು ‘ಟ್ರೋಲ್ ಮಿನಿಸ್ಟರ್’ ಎಂದು ಲೇವಡಿ ಮಾಡಲಾಗಿದ್ದು, ಅವರು ವಾಸ್ತವವನ್ನು ನೋಡಲು “ಕಣ್ಣಿನ ಆಸ್ಪತ್ರೆಗೆ” ಹೋಗಬೇಕು ಎಂದು ವ್ಯಂಗ್ಯವಾಡಲಾಗಿದೆ.

ಪ್ರವಾಹ, ಭೂಕಂಪ ಅಥವಾ ಯಾವುದೇ ಇತರ ವಿಪತ್ತುಗಳನ್ನು ಎದುರಿಸಿದರೂ ಮುಂಚೂಣಿಯಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಕಾಣುತ್ತಾರೆ. ಆರ್‌ಎಸ್‌ಎಸ್‌ನ ಶತಮಾನಗಳ ಸೇವೆ ಮತ್ತು ಸಮರ್ಪಣಾ ಪ್ರಯಾಣಕ್ಕೆ ನಾವೆಲ್ಲರೂ ಹೆಮ್ಮೆಪಡಬೇಕು. ದಶಕಗಳ ಕಾಲ ಅಧಿಕಾರ ಅನುಭವಿಸುತ್ತಾ ಬಂದಿರುವ ಖರ್ಗೆ ಕುಟುಂಬಕ್ಕೆ ಹಾಗೂ ಮರಿ ಖರ್ಗೆಯ ಹಳದಿಗಣ್ಣಿಗೆ ಇದು ಎಂದಿಗೂ ಕಾಣದು‌ ಎಂದು ಲೇವಡಿ ಮಾಡಿದೆ.

ಕರಾವಳಿಯಲ್ಲಿ ಕೋಮುವಾದ ಇರುವುದರಿಂದ ಐಟಿ-ಬಿಟಿ ಕಂಪನಿಗಳು ಬಂಡವಾಳ ಹೂಡಲು ಹೆದರುತ್ತಿವೆ ಎಂದರೆ, What about your ಕಲಬುರಗಿ..??!! ಎಂದು ಪ್ರಶ್ನಿಸಿದೆ.

ಅಪ್ಪ-ಮಗ ಸೇರಿ ಸರಿ ಸುಮಾರು 40 ವರ್ಷಗಳಿಂದ ಕಲಬುರಗಿಯನ್ನು ಜಹಗೀರಿನಂತೆ ಆಳುತ್ತಿದ್ದೀರಿ. ಗೆದ್ದಾಗ ಪ್ರಮುಖ ಖಾತೆಯ ಸಚಿವ, ಸೋತಾಗ ವಿರೋಧ ಪಕ್ಷದ ನಾಯಕ ಅಥವಾ ತತ್ಸಮಾನ ಹುದ್ದೆ!! ಕಲಬುರಗಿ ಇಷ್ಟೆಲ್ಲಾ ನಿಮಗೆ ಕೊಟ್ಟರೂ ನೀವು ಕಲಬುರಗಿಗೆ ಕೊಟ್ಟಿದ್ದು ಏನು..?? ಇವತ್ತಿಗೂ ಕಲಬುರಗಿ ಅಂದರೆ ಅತೀ ಹಿಂದುಳಿದ ಜಿಲ್ಲೆ ಎಂದು ನಂಜುಂಡಪ್ಪ ವರದಿಯಿಂದ ಹಿಡಿದು ಎಲ್ಲಾ ವರದಿಗಳು ಹೇಳುತ್ತಿವೆ ಎಂದು ತಿಳಿಸಿದೆ.

ಹಾಗಾದರೆ ನೀವು ಮತ್ತು ನಿಮ್ಮ ತಂದೆಯವರು ಅಧಿಕಾರದಲ್ಲಿದ್ದಾಗ ಮಾಡಿದ್ದಾದರೂ ಏನು..?? ಕಲಬುರಗಿಯನ್ನು ನೀವು ಅಭಿವೃದ್ಧಿ ಮಾಡಿದ್ದರೆ, ಈಗಲೂ ಅದು ಏಕೆ ಅತೀ ಹಿಂದುಳಿದ ಜಿಲ್ಲೆಯಾಗಿದೆ..?? ಈಗಲೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕಲಬುರಗಿ ಏಕೆ ಕೊನೆಯ ಸ್ಥಾನದಲ್ಲಿದೆ..?? ಎಂದು ಪ್ರಶ್ನೆ ಮಾಡಿದೆ.

ಮಾತನಾಡಲು ಮೈಕ್ ಇದೆ ಎಂದು ಹೀಗೆ ಬೇಕಾಬಿಟ್ಟಿಯಾಗಿ ಮಾತನಾಡಿದರೆ ಟ್ರೋಲ್‌ ಮಿನಿಸ್ಟರ್‌ ಸೆಲ್ಫ್‌ ಟ್ರೋಲ್‌ ಆಗುವುದು ಖಚಿತ-ನಿಶ್ಚಿತ-ಖಂಡಿತ!! ಎಂದು ವ್ಯಂಗ್ಯವಾಡಿದೆ.

Share

Leave a comment

Leave a Reply

Your email address will not be published. Required fields are marked *