ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಅತಿರೇಕದ ವರ್ತನೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ ಹೊರಹಾಕಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಉಪಾಧ್ಯಕ್ಷೆ ಹೆಚ್. ಸಿ. ಜಯಮ್ಮ ಅವರು, ಜಯಮ್ಮ ಅವರು, “ಹೆಣ್ಣಿನ ಆತ್ಮಸಮ್ಮಾನಕ್ಕೆ ಧಕ್ಕೆಯಾದರೆ ನಾವು ದುರ್ಗಿ, ಕಾಳಿಯಾಗಿ ರಾಕ್ಷಸ ಸಂಹಾರಕ್ಕೂ ಸಿದ್ಧ” ಎಂದು ತೀಕ್ಷ್ಣವಾಗಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿಗೆ ಎಚ್ಚರಿಕೆ ನೀಡಿದ್ದಾರೆ.
ನೇರ ಎಚ್ಚರಿಕೆ:
“ಬಿಜೆಪಿ ಮಹಿಳಾ ಮೋರ್ಚಾದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಅಧಿಕಾರಿಗಳ ಮತ್ತು ಜನಸಾಮಾನ್ಯರ ಮೇಲೆ ದರ್ಪ ತೋರಿಸುವ ಕಾಂಗ್ರೆಸ್ ಪುಡಾರಿಗಳಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ. ಶಾಮನೂರು ಶಿವಶಂಕರಪ್ಪನವರು ಇಷ್ಟು ದಿನ ನಿಮ್ಮನ್ನು ರಕ್ಷಿಸಿರಬಹುದು, ಆದರೆ ನಿಮ್ಮ ಕರ್ಮಕಾಂಡಗಳು ಬಯಲಾದಾಗ ಯಾರೂ ರಕ್ಷಣೆಗೆ ಬರಲ್ಲ” ಎಂದು ಎಚ್ಚರಿಸಿದ್ದಾರೆ.
ಬ್ಯಾನರ್ ವಿಚಾರವಾಗಿ ದಲಿತ ಮಹಿಳೆಯ ಮೇಲೆ ನಡೆದ ಹಲ್ಲೆ ಮತ್ತು ಕರ್ತವ್ಯನಿರತ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ರೌಡಿಗಳು ನಡೆಸಿದ ದರ್ಪವನ್ನು ಪ್ರಸ್ತಾಪಿಸಿದ ಮಹಿಳಾ ನಾಯಕಿ, “ಈ ಘಟನೆಗಳು ನಡೆದಾಗ ಜಿಲ್ಲೆಯ ಸಂಸದರಾಗಲಿ ಅಥವಾ ಸ್ಥಳೀಯ ನಾಯಕರಾಗಲಿ ಯಾಕೆ ಧ್ವನಿ ಎತ್ತಲಿಲ್ಲ? ಯಾಕೆ ” ಎಂದು ಪ್ರಶ್ನಿಸಿದ್ದಾರೆ.
ಊರಲ್ಲಿ ನಡೆಯೋ ಘಟನೆಗಳಿಗೆ ದೇಶದ ಪ್ರಧಾನಿ ಮಂತ್ರಿಗಳನ್ನೇ ಪ್ರಶ್ನೆ ಮಾಡುವ ಕಾಂಗ್ರೆಸ್ ಸ್ಥಳೀಯ ಮುಖಂಡರಿರೋವಾಗ ಜಿಲ್ಲೆಯಲ್ಲಿ ನಡೆಯುವ ಅಕ್ರಮಗಳು, ಗೂಂಡಾಗಿರಿ, ಅನಾಚಾರಗಳ ವಿರುದ್ಧ ಧ್ವನಿ ಎತ್ತುವುದು ಪ್ರತಿಪಕ್ಷದ
ಜವಾಬ್ದಾರಿ. ಈ ಹಿಂದೆ ನೀವೇ ಹೇಳಿದ್ದೀರಿ ನಾನು ಶಾಮನೂರು ಕುಟುಂಬದ ಸೇವಕ ಅಂತ. ಆದರೆ ನಾವು ಪ್ರಶ್ನೆ ಕೇಳುತ್ತಿರುವುದು ನಿಮ್ಮ ಧಣಿ, ಮಾಲೀಕರಿಗಲ್ಲ. ಮತದಾರರಿಗೆ ಉತ್ತರದಾಯಿಗಳಾಗಿರುವ ಜಿಲ್ಲೆಯ ಉಸ್ತುವಾರಿ ಹೊತ್ತಿರುವ
ಸಚಿವರನ್ನ, ಸಂಸದೆಯವರನ್ನ ಅದಕ್ಕೂ ನೀವೇ ಉತ್ತರ ಕೊಡೊಕೇ ಶಾಮನೂರು ಕುಟುಂಬದವರು ನಿಮಗೆನಾದ್ರೂ ಪವರ್ ಆಫ್ ಅಟಾರ್ನಿ ಕೊಟ್ಟಿದ್ದಾರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶ ಇಲ್ವಲ್ಲ ಎಂದು ವ್ಯಂಗ್ಯವಾಡಿದರು.
ಪ್ರತಿಪಕ್ಷದ ಜವಾಬ್ದಾರಿ:
ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳು, ಗೂಂಡಾಗಿರಿ ಮತ್ತು ಅನಾಚಾರಗಳ ವಿರುದ್ಧ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ. ದೇಶದ ಪ್ರಧಾನಿಯನ್ನು ಪ್ರಶ್ನಿಸುವ ಕಾಂಗ್ರೆಸ್ಸಿಗರು ತಮ್ಮ ಜಿಲ್ಲೆಯಲ್ಲೇ ನಡೆಯುತ್ತಿರುವ ದೌರ್ಜನ್ಯಗಳ
ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಕೇಳಿದರು.
ಪವರ್ ಆಫ್ ಅಟಾರ್ನಿ ಪ್ರಶ್ನೆ:
“ನಾನು ಶಾಮನೂರು ಕುಟುಂಬದ ಸೇವಕ” ಎಂದು ಹೇಳಿಕೊಳ್ಳುವ ನಾಯಕರಿಗೆ, ಜನರ ಪರವಾಗಿ ಮಾತನಾಡಲು ಆ ಕುಟುಂಬದವರು ಪವರ್ ಆಫ್ ಅಟಾರ್ನಿ ಕೊಟ್ಟಿದ್ದಾರೆಯೇ? ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಉತ್ತರದಾಯಿಗಳಾಗಿರಬೇಕಾದ
ಸಚಿವರು ಮತ್ತು ಸಂಸದರು ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.
ಪಕ್ಷದ ಸಿದ್ಧಾಂತ:
ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ರಾಷ್ಟ್ರೀಯ ಅಧ್ಯಕ್ಷರಾಗಬಹುದು, ಬುಡಕಟ್ಟು ಮಹಿಳೆ ರಾಷ್ಟ್ರಪತಿಯಾಗಬಹುದು. ಆದರೆ ಕಾಂಗ್ರೆಸ್ ನಿಂತ ನೀರಾಗಿದ್ದು, ಅಲ್ಲಿ ಕೇವಲ ಗುಲಾಮಗಿರಿಗೆ ಮಾತ್ರ ಅವಕಾಶವಿದೆ ಎಂದು ವಾಗ್ದಾಳಿ
ನಡೆಸಿದರು.
ಮಹಿಳಾ ಸುರಕ್ಷತೆ ಮತ್ತು ಆತ್ಮಗೌರವ:
ದಲಿತ ಮಹಿಳೆಯ ಮೇಲಿನ ಹಲ್ಲೆ ಮತ್ತು ಪೊಲೀಸ್ ಅಧಿಕಾರಿಯ ಮೇಲಿನ ದರ್ಪದ ವಿಚಾರದಲ್ಲಿ ನೀವು ತೋರಿರುವ ಆಕ್ರೋಶವು ಸ್ತ್ರೀ ಶಕ್ತಿಯ ಸಂಕೇತವಾಗಿದೆ. “ದುರ್ಗಿ, ಕಾಳಿ, ಚಾಮುಂಡಿ”ಯ ಉದಾಹರಣೆ ನೀಡಿರುವುದು ನಿಮ್ಮ ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಚುನಾಯಿತ ಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು ಎಂಬುದು ಪ್ರಜಾಪ್ರಭುತ್ವದ ಮೂಲತತ್ವ. “ಪವರ್ ಆಫ್ ಅಟಾರ್ನಿ” ಕುರಿತ ನಿಮ್ಮ ವ್ಯಂಗ್ಯವು ರಾಜಕೀಯ ವಾರಸುದಾರಿಕೆ ಮತ್ತು ಅಧಿಕಾರದ ಹಂಚಿಕೆಯ ಬಗ್ಗೆ ಇರುವ ಜನಾಭಿಪ್ರಾಯವನ್ನು ಸೂಚಿಸುತ್ತದೆ ಎಂದು ಕಿಡಿಕಾರಿದರು.
ಕರ್ತವ್ಯನಿರತ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ರೌಡಿಗಳನ್ನು ಗಡಿಪಾರು ಮಾಡಿ ಅಂತ ಹೇಳೋದನ್ನ ಬಿಟ್ಟು ಮಹಿಳಾ ಮೋರ್ಚಾದವರು ಎಲ್ಲಿದ್ದರು ಅಂತ ಕೇಳೀರಾ? ಈ ಮಣ್ಣಿನಲ್ಲಿ ಹೆಣ್ಣಿನ ಆತ್ಮ ಸಮ್ಮಾನಕ್ಕೆ ಧಕ್ಕೆಯಾದರೆ
ದುರ್ಗಿಯಾಗಿ, ಕಾಳಿಯಾಗಿ, ಚಾಮುಂಡಿಯಾಗಿ ರಾಕ್ಷಸರ ಸಂಹಾರ ಮಾಡಿದ್ದಾರೆ. ಇದು ಮರುಕಳಿಸಲಿದೆ ಎಂದು ಹೇಳಿದರು.
ಬಿಜೆಪಿ ಹುಳುಕು ಹುಡುಕುವ ಮೊದಲು ನಿಮ್ಮ ತಟ್ಟೆಯಲ್ಲಿ ಇರೋ ಹೆಗ್ಗಣ ನೋಡ್ಕೊಳ್ಳಿ. ನಿಮ್ಮಿಂದ ಹೋರಾಟಗಳು ಬಗ್ಗೆ ಹೇಳಿಸಿಕೊಳ್ಳುವ ಅವಶ್ಯಕತೆ, ಅನಿವಾರ್ಯತೆ ಎರಡೂ ಬಿಜೆಪಿ ಮಹಿಳೆಯರಿಂತೂ ಇಲ್ಲ. ಶಾಮನೂರು ಶಿವಶಂಕರಪ್ಪನವರು ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷದ ಹಿತವನ್ನ ಪಕ್ಕಕ್ಕಿಟ್ಟು ವಿರೋಧ ಪಕ್ಷದವರಿಗೂ ಬೆಂಬಲವಾಗಿ ನಿಂತು ಸಮಾಜದ ಒಗ್ಗಟ್ಟನ್ನು ಎತ್ತಿ ಹಿಡಿದರು ಅಂಥವರ ಸೊಸೆ, ಜಿಲ್ಲೆಯ ಸಂಸದರಾಗಿರುವವರು ಪಕ್ಷದ ಹಿತ ಕಾಪಾಡೋದಕ್ಕೆ
ಹೋಗಿ ಬಹು ಸಂಖ್ಯಾತ ಹಿಂದೂಗಳ ಭಾವನೆಗಳನ್ನ ನೋವು ಮಾಡ್ತಾರೆ ಅಂದ್ರೆ, ನಿಜಕ್ಕೂ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ನಾಯಕಿಯರಾದ ಚೇತನಾ ಶಿವಕುಮಾರ್, ದೇವಿರಮ್ಮ, ರೇಣುಕಾ ಕೃಷ್ಣ, ನೀತಾ ಮತ್ತಿತರರು ಹಾಜರಿದ್ದರು.
- BJP Mahila Morcha
- Congress Rowdyism
- Dalit Woman Attack
- Davanagere Politics
- Karnataka BJP News
- Political Protest
- Shamanur Shivashankarappa
- South Assembly Constituency
- Women Safety
- ಕರ್ನಾಟಕ ಬಿಜೆಪಿ
- ಕಾಂಗ್ರೆಸ್ ಗೂಂಡಾಗಿರಿ
- ದಕ್ಷಿಣ ವಿಧಾನಸಭಾ ಕ್ಷೇತ್ರ
- ದಲಿತ ಮಹಿಳೆ ಹಲ್ಲೆ
- ದಾವಣಗೆರೆ ರಾಜಕೀಯ
- ಬಿಜೆಪಿ ಮಹಿಳಾ ಮೋರ್ಚಾ
- ಮಹಿಳಾ ಸುರಕ್ಷತೆ
- ರಾಜಕೀಯ ಹೋರಾಟ
- ಶಾಮನೂರು ಶಿವಶಂಕರಪ್ಪ






Leave a comment