SUDDIKSHANA KANNADA NEWS/ DAVANAGERE/ DATE:22-06-2024
ದಾವಣಗೆರೆ: ದಾವಣಗೆರೆ ಬಿಜೆಪಿ ಈಗ ಒಡೆದ ಮನೆ. ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಭಿನ್ನಮತದ ಜ್ವಾಲೆ ಧಗಧಗಿಸುತ್ತಿದೆ. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಲಗಾನ್ ಟೀಂ ವಿರುದ್ಧ ಮಾಜಿ ಶಾಸಕರು, ದೂಡಾ ಮಾಜಿ ಅಧ್ಯಕ್ಷರು, ಮುಖಂಡರು ಬೆಂಕಿಯುಗುಳಿದ್ದರು. ಇಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ.
ಸದ್ಯದಲ್ಲಿಯೇ ಬಿಜೆಪಿ ರಾಜ್ಯ. ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ರಾಷ್ಟ್ರ ನಾಯಕರಿಗೆ ದೂರು ನೀಡುತ್ತೇವೆ. ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಿ ದೂರು ನೀಡಲು ನಿಯೋಗ ತೆರಳುತ್ತೇವೆ. ಸದ್ಯಕ್ಕೆ ದಿನಾಂಕ ನಿಗದಿ ಮಾಡಿಲ್ಲ. ಮುಂದಿನ
ತಿಂಗಳ ಬಳಿಕ ದೂರು ನೀಡುತ್ತೇವೆ ಎಂದು ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಚರ್ಚಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಡಿ. ಕೆ. ಸುರೇಶ್, ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಕಾರ್ಯಕರ್ತರಾಗಲೀ, ಮುಖಂಡರಾಗಲೀ ಕಾರಣರಲ್ಲ. ಸಿದ್ದೇಶ್ವರರ ಸ್ವಯಂಕೃತ ಅಪರಾಧ,
ಹಿಂದೆ ಮುಂದೆ ಇದ್ದ ದಾವಣಗೆರೆ ಬಾಯ್ಸ್ ಗಳ ಹೊಗಳಿಕೆ ಮಾತುಗಳು, ಅತಿಯಾದ ಆತ್ಮವಿಶ್ವಾಸ, ಸರಿಯಾಗಿ ಕೆಲಸ ಮಾಡದಿದ್ದದ್ದೇ ಕಾರಣ. ವಿನಾಕಾರಣ ರೇಣುಕಾಚಾರ್ಯ, ಎಸ್. ಎ. ರವೀಂದ್ರನಾಥ್, ಶಿವಯೋಗಿಸ್ವಾಮಿ ಸೇರಿದಂತೆ
ಹಲವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಚಿತ್ರದುರ್ಗ – ದಾವಣಗೆರೆ ಅವಿಜಭಿತ ಜಿಲ್ಲೆಯಾದಾಗ ಎಸ್. ಎ. ರವೀಂದ್ರನಾಥ್ ಅವರು ಜಿಲ್ಲಾಧ್ಯಕ್ಷರಾಗಿದ್ದರು. ಜಿಲ್ಲೆಯಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡಿದವರು. ಈಗ ಮಾತನಾಡುತ್ತಿರುವವರು ಆಗ ಎಲ್ಲಿದ್ದರು? ಈಗ ರವೀಂದ್ರನಾಥ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ರೇಣುಕಾಚಾರ್ಯ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಂತ ಹೆಚ್ಚು ಮತಗಳು ಲೋಕಸಭೆ ಚುನಾವಣೆಯಲ್ಲಿ ಬಂದವೆ. ನಾವೆಲ್ಲರೂ ರೇಣುಕಾಚಾರ್ಯರ ನೇತೃತ್ವದಲ್ಲಿ ಕೆಲಸ ಮಾಡಿದ ಕಾರಣ ಇಷ್ಟು ಮತಗಳು ಬಂದಿವೆಯೇ ಹೊರತು ಸಿದ್ದೇಶ್ವರ ಅವರಿಂದಲ್ಲ, ದಾವಣಗೆರೆ ಬಾಯ್ಸ್ ರಿಂದ ಅಲ್ಲ ಎಂದು ಗುಡುಗಿದರು.
ರವೀಂದ್ರನಾಥ್ ಅವರು ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಕೇವಲ 500 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಬಂದಿದೆ. ಇದುವರೆಗೆ ಬಿಜೆಪಿ ಯಾಕೆ ಲೀಡ್ ಬಂದಿಲ್ಲ, ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಬಾರಿ ಸ್ಪರ್ಧಿಸಿದರೂ ಗೆಲ್ಲಲು ಆಗಿಲ್ಲ. ಮೊದಲು ತನ್ನ ಕ್ಷೇತ್ರದಲ್ಲಿ ಲೀಡ್ ಕೊಡಿಸಿ ಮಾತನಾಡಬೇಕು. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ
ತಟ್ಟೆಯಲ್ಲಿ ಯಾಕೆ ಇಣುಕಿ ನೋಡುತ್ತಾರೆ ಎಂದು ಕಿಡಿಕಾರಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 21 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಂಗ್ರೆಸ್ ಗೆ ಬಂದಿದೆ. ಅಭೂತಪೂರ್ವವಾಗಿ ಕಾರ್ಯಕರ್ತರು, ಮುಖಂಡರೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದ ಪರಿಣಾಮ ಹೆಚ್ಚಿನ ಮತಗಳು ಬಿಜೆಪಿಗೆ ಬಂದಿವೆ. ಸಿದ್ದೇಶ್ವರ ಅವರಿಗೆ ಕಾರ್ಯಕರ್ತರಾಗಲೀ, ಮುಖಂಡರಾಗಲೀ, ಅವರ ಹಿಂಬಾಲಕರು ಹೇಳಿದಂತೆ ಶಕ್ತಿ ಕೇಂದ್ರ, ಮಂಡಲ ಸೇರಿದಂತೆ ಯಾವ ನಾಯಕರು, ಕಾರ್ಯಕರ್ತರ ವಿಶ್ವಾಸಕ್ಕೆ ಪಡೆಯಲಿಲ್ಲ. ಸ್ವಲ್ಪ ಮಟ್ಟಿಗೆ ಹಿನ್ನೆಡೆ ಉಂಟಾಗಲು ಇದೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ಯಾರನ್ನೂ ನಂಬಲಿಲ್ಲ, ಸಿದ್ದೇಶ್ವರ ಪ್ರಚಾರಕ್ಕೆ ಬರಲಿಲ್ಲ. ದಾವಣಗೆರೆ ಬಾಯ್ಸ್ ಮಾತು ಕೇಳಿ ಸುಮ್ಮನಾದರು. ರೇಣುಕಾಚಾರ್ಯರ ಬಗ್ಗೆ ಅಪಪ್ರಚಾರ ನಡೆಸಿದರು. ರೇಣುಕಾಚಾರ್ಯ ಶಕ್ತಿ ಬಳಸಿಕೊಳ್ಳಲಿಲ್ಲ. ಸೋಲಿಗೆ ಇದೂ ಸಹ ಕಾರಣಗಳಲ್ಲಿ ಒಂದು. ಇನ್ನೊಬ್ಬರ ಬಗ್ಗೆ ಅಪಪ್ರಚಾರ ಬಿಡಿ. ಬಿಜೆಪಿ ಸೋಲಲು ದಾವಣಗೆರೆ ಬಾಯ್ಸ್ ಕಾರಣ ಎಂದು ಪುನರುಚ್ಚರಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಅವರು ಲೋಕಸಭೆ ಚುನಾವಣೆಯ ಟಿಕೆಟ್ ಘೋಷಣೆಗೆ ಮುನ್ನ ರೇಣುಕಾಚಾರ್ಯರ ವಿರುದ್ದ ಹೊನ್ನಾಳಿಯಲ್ಲಿ ಸಭೆ ನಡೆಸಿ ಕೇವಲವಾಗಿ ಮಾತನಾಡಿದ್ದರು. ಸಭೆ ಹಾಗೂ ಸಭೆ ಮುಗಿದ ಬಳಿಕ ನಾವೆಲ್ಲರೂ ಸರಿಯಾಗಿ ಉತ್ತರ ನೀಡಿದ್ದೆವು. ಹಾಗಾಗಿ ಬರಲಿಲ್ಲ. ಹರಿಹರದಲ್ಲಿ ಹಾಲಿ ಬಿಜೆಪಿ ಶಾಸಕ, ಮಾಜಿ ಶಾಸಕ, ಸಂಚಾಲಕ ವೀರೇಶ್ ಹನಗವಾಡಿ ಅವರಿದ್ದು ಯಾಕೆ ಕಾಂಗ್ರೆಸ್ ಮುನ್ನಡೆ ಬಂತು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ರೇಣುಕಾಚಾರ್ಯರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನೆ ಇರಲು ಆಗದು. ನಮಗೂ ಮಾತನಾಡಲು ಬರುತ್ತೆ. ನಮಗೂ ಆಕ್ರೋಶ ಇದೆ. ಒಂದು ವೇಳೆ ವೀರೇಶ್ ಹನಗವಾಡಿ ಹೊನ್ನಾಳಿಗೆ ಬಂದಿದ್ದೆರ ಒಂದು ನೊಣವೂ ಅವರ ಜೊತೆ ಬರುತ್ತಿರಲಿಲ್ಲ. ಹಾಗಾಗಿ ಬರಲಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಾಗ ವಿಧಾನಸಭೆ ಚುನಾವಣೆ ನಡೆಯಿತು. ಆಗ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿದ್ದಾರೆ ಎಂದು ಪ್ರಶ್ನಿಸಿದರು.