Site icon Kannada News-suddikshana

ಕೇಸರಿ ಕಲಿಗಳ ಮೊದಲ ಪಟ್ಟಿ ರಿಲೀಸ್ ಸಂಜೆಯೋ ನಾಳೆಯೋ..?: 175 -180 ಅಭ್ಯರ್ಥಿಗಳ ಘೋಷಣೆ

SUDDIKSHANA KANNADA NEWS/ DAVANAGERE/ DATEv 10-04-2023

 

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (ELECTION) ಇಂದು ಸಂಜೆ ಅಥವಾ ನಾಳೆ ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ (LIEST) ಬಿಡುಗಡೆ (REALEASE) ಮಾಡಲಿದೆ. ಸಂಜೆ ವೇಳೆಗೆ ಸುಮಾರು 175ರಿಂದ 180 ಅಭ್ಯರ್ಥಿಗಳ ಹೆಸರು (NAME) ಘೋಷಣೆಯಾಗಲು ಸಿದ್ದತೆ ನಡೆದಿತ್ತು. ಆದ್ರೆ, ಸಭೆಗಳ ಮೇಲೆ ಸಭೆ ನವದೆಹಲಿಯಲ್ಲಿ ನಡೆಯುತ್ತಿರುವ ಕಾರಣ ನಾಳೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ನವದೆಹಲಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಭೆಗಳ ಮೇಲೆ ಸಭೆ ನಡೆಸಲಾಗುತ್ತಿದೆ. ಹೊಸ ಮುಖಗಳಿಗೆ ಆದ್ಯತೆ ನೀಡುವ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ. ಯಾವುದೇ ಗೊಂದಲಗಳು ಇಲ್ಲ. ನನ್ನ ಪ್ರಕಾರ ನಾಳೆ ಅಥವಾ ನಾಡಿದ್ದು ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷವು (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ತೀವ್ರ ಕಸರತ್ತು ನಡೆಸಿದೆ. ಐವರು ಸಚಿವರು ಹಾಗೂ 20ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ (TICKET) ಕೈ ತಪ್ಪುವ ಸಾಧ್ಯತೆ ಇದೆ.

ಪಕ್ಷದ ಕೇಂದ್ರ ಚುನಾವಣಾ ಸಮಿತಿಯು (CEC) ಭಾನುವಾರ ಮತ್ತು ಇಂದು ಮೂರು ಗಂಟೆಗಳ ಕಾಲ ಸಭೆ (MEETING) ನಡೆಸಿ ಹೆಸರುಗಳನ್ನು ಅಂತಿಮಗೊಳಿಸಿತು. ಸಂಭಾವ್ಯ ಅಭ್ಯರ್ಥಿಗಳು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಧಾನಿ ಮೋದಿ (MODI) ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಬಹಿರಂಗಪಡಿಸಿದ್ದಾರೆ.

ಶಿಗ್ಗಾಂವ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿಎಂ ಬೊಮ್ಮಾಯಿ (BOMMAI) ಖಚಿತಪಡಿಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ (BJP) ಅಧಿಕಾರದಲ್ಲಿದ್ದು, ಬಿಜೆಪಿ ಮತ್ತು ವಿರೋಧ ಪಕ್ಷಗಳಿಗೆ ಈ ಚುನಾವಣೆ ನಿರ್ಣಾಯಕ ಎಂದು ಪರಿಗಣಿಸಲಾಗಿದೆ.

ಯಡಿಯೂರಪ್ಪ ಕೊಟ್ಟ ಸೂಚನೆ ಏನು…?

ಈಗಾಗಲೇ ಸುಮಾರು 175 ರಿಂದ 180 ಸ್ಥಾನಗಳಿಗೆ ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಪಟ್ಟಿ ತಯಾರಿಸಿದೆ. ಪ್ರಧಾನಿ ನರೇಂದ್ರ ಮೋದಿ (MODI) , ಕೇಂದ್ರ ಗೃಹ ಸಚಿವ ಅಮಿತ್ ಶಾ (AMITH SHA), ಬಿಜೆಪಿ ರಾ(BJP) ಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ (J. P. NADDA) ಅಧ್ಯಕ್ಷತೆಯಲ್ಲಿ ಚರ್ಚೆಯಾಗಿದೆ. ಸಂಜೆ ವೇಳೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಲಿದೆ. ಜೊತೆಗೆ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪಗೆ ಡವ.. ಡವ..!

ಇನ್ನು ಮಾಜಿ ಸಚಿವ ಹಾಗೂ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ. ಎಸ್. ಈಶ್ವರಪ್ಪರಿಗೆ ಡವ ಡವ ಶುರುವಾಗಿದೆ. ಕ್ಷೇತ್ರದಲ್ಲಿನ ವಿರೋಧ, ಆಯನೂರು ಮಂಜುನಾಥ್ ಬಂಡಾಯ, ಯಡಿಯೂರಪ್ಪ ವಿರುದ್ಧದ ಬಣದಲ್ಲಿ ಗುರುತಿಸಿಕೊಂಡಿದ್ದ
ಈಶ್ವರಪ್ಪರಿಗೆ ಕ್ಷೇತ್ರದಲ್ಲಿ ಸಾಕಷ್ಟು ತೀವ್ರ ವಿರೋಧ ವ್ಯಕ್ತವಾಗಿದೆ. ಸಂಘ ಪರಿವಾರದ ನಿಷ್ಠರಾಗಿರುವ ಈಶ್ವರಪ್ಪರ ಆರ್ ಎಸ್ ಎಸ್ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಈಶ್ವರಪ್ಪರಿಗೆ ಟಿಕೆಟ್ (TICKET) ಕೈತಪ್ಪುತ್ತೆ ಎನ್ನಲಾಗುತ್ತಿದ್ದರೂ,ಕೊನೆ ಕ್ಷಣದಲ್ಲಿ ಈಶ್ವರಪ್ಪರಿಗೆ ಮಣೆ ಹಾಕಿದರೆ ಅಚ್ಚರಿ ಏನಿಲ್ಲ.

Exit mobile version