Home ಕ್ರೈಂ ನ್ಯೂಸ್ ಹುಡುಗ, ಹುಡುಗಿ ಕೈಮುಗಿದು ಬೇಡಿಕೊಂಡರೂ ಬಿಡದ ಪುಂಡರಿಂದ ರಕ್ಷಿಸಲು ಬಂದವರ ಮೇಲೂ ದಾಳಿ: ಆತಂಕಕಾರಿ ವಿಡಿಯೋ ವೈರಲ್ ಬೆನ್ನಲ್ಲೇ ಎಸ್‌ಪಿ ವಿಶ್ವಜಿತ್ ದಯಾಳ್ ಹೇಳಿದ್ದೇನು? 
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಹುಡುಗ, ಹುಡುಗಿ ಕೈಮುಗಿದು ಬೇಡಿಕೊಂಡರೂ ಬಿಡದ ಪುಂಡರಿಂದ ರಕ್ಷಿಸಲು ಬಂದವರ ಮೇಲೂ ದಾಳಿ: ಆತಂಕಕಾರಿ ವಿಡಿಯೋ ವೈರಲ್ ಬೆನ್ನಲ್ಲೇ ಎಸ್‌ಪಿ ವಿಶ್ವಜಿತ್ ದಯಾಳ್ ಹೇಳಿದ್ದೇನು? 

Share
ವಿಡಿಯೋ
Share

ಜಮುಯಿ / ಪಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಯುವಕ ಮತ್ತು ಯುವತಿಯೊಬ್ಬರ ಮೇಲೆ ಕಿಡಿಗೇಡಿಗಳ ಗುಂಪೊಂದು ಹಿಂಸಾತ್ಮಕವಾಗಿ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂಭವಿಸಿದ್ದೇನು?

ವೈರಲ್ ಆಗಿರುವ ವಿಡಿಯೋದಲ್ಲಿ, ದ್ವಿಚಕ್ರ ವಾಹನದ ಬಳಿ ನಿಂತಿದ್ದ ಜೋಡಿಯನ್ನು ಕೆಲವು ಕಿಡಿಗೇಡಿಗಳು ಸುತ್ತುವರೆದು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಒಬ್ಬ ವ್ಯಕ್ತಿ ಯುವಕನ ಶರ್ಟ್ ಕಾಲರ್ ಹಿಡಿದು ಎಳೆದಾಡಿದರೆ, ಮುಖ ಮುಚ್ಚಿಕೊಂಡಿದ್ದ ಇನ್ನೊಬ್ಬ ಕಿಡಿಗೇಡಿ ಯುವತಿಯನ್ನು ಹಿಂಬದಿಯಿಂದ ಬಲವಂತವಾಗಿ ಹಿಡಿದು ಎಳೆದೊಯ್ಯಲು ಯತ್ನಿಸಿದ್ದಾನೆ. ಯುವತಿ ಸಹಾಯಕ್ಕಾಗಿ ಚೀರಾಡುತ್ತಾ ಪ್ರತಿರೋಧ ಒಡ್ಡಿದ್ದಾಳೆ.

ಅವರಲ್ಲಿದ್ದ ಯುವಕ ಕಿಡಿಗೇಡಿಗಳ ಹಿಡಿತದಿಂದ ತಪ್ಪಿಸಿಕೊಂಡು ಯುವತಿಯ ರಕ್ಷಣೆಗೆ ಧಾವಿಸಿ, ಇಬ್ಬರೂ ಹತ್ತಿರದಲ್ಲಿದ್ದ ಬೈಕ್‌ನತ್ತ ಓಡಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ದುಷ್ಟರ ಗುಂಪು ಅವರನ್ನು ಬಿಡದೆ ಬೆನ್ನಟ್ಟಿ, ಮತ್ತೆ ಅವರ ಕೈಹಿಡಿದು ಎಳೆದಾಡಿ ತಡೆದಿದೆ. ಈ ವೇಳೆ ಸಂತ್ರಸ್ತರು ಕೈಮುಗಿದು ಬೇಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಪೋಲಿಸ್ ತನಿಖೆ:

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಬಿಹಾರ ಪೊಲೀಸರನ್ನು ಟ್ಯಾಗ್ ಮಾಡಿ ತಪ್ಪಿತಸ್ಥರ ವಿರುದ್ಧ ತಕ್ಷಣದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮುಯಿ ಎಸ್‌ಪಿ ವಿಶ್ವಜಿತ್ ದಯಾಳ್, ಪೊಲೀಸರು ಈಗಾಗಲೇ ಸಂತ್ರಸ್ತರನ್ನು ಸಂಪರ್ಕಿಸಿದ್ದು, ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.