Site icon Kannada News-suddikshana

ಹೊಸ BPL ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಸರ್ಕಾರದಿಂದ ಬಿಗ್‌ ಶಾಕ್‌: ಸದ್ಯಕ್ಕಿಲ್ಲ ವಿತರಣೆ

ಹೊಸ ಬಿಪಿಲ್‌ ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಸರ್ಕಾರದಿಂದ ಬಿಗ್‌ ಶಾಕ್‌ ಸಿಕ್ಕಿದೆ. ಹೌದು, ಹೊಸದಾಗಿ ಕಾರ್ಡ್‌ಗಳನ್ನು ವಿತರಿಸಿದರೆ ಅಂತಹವರಿಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಹಣವನ್ನೂ ಕೂಡ ನೀಡಬೇಕಾಗುತ್ತದೆ, ಇದು ರಾಜ್ಯ ಸರ್ಕಾರಕ್ಕೆ ಹೊರೆಯಾಗುವ ನಿಟ್ಟಿನಲ್ಲಿ ಸದ್ಯಕ್ಕೆ ಹೊಸ ಕಾರ್ಡ್‌ಗಳನ್ನು ನೀಡದೇ ಇರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವ ಬಹುದು ಎನ್ನಲಾಗಿದೆ.

2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನಲೆಯಲ್ಲಿ ಹೊಸ ಪಡಿತರ ಚೀಟಿಯನ್ನು ನೀಡುವುದಕ್ಕೆ ತಡೆ ಇತ್ತು, ಆದಾದ ಬಳಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೂಡ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತಿರಲಿಲ್ಲ. ಸದ್ಯ ಹೊಸದಾಗಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಸಾಕಷ್ಟು ಮಂದಿ ಕಾಯುತ್ತಿದ್ದು, ಅಂತಹವರಿಗೆ ಹೊಸ ಕಾರ್ಡ್ ಸಿಗುವುದು ಸದ್ಯಕ್ಕೆ ಅನುಮಾನ ಮೂಡಿಸಿದೆ. ಸರ್ಕಾರ ಕೂಡ ಈ ಬಗ್ಗೆ ಸೂಕ್ತ ಕಾಲದಲ್ಲಿ ನಿರ್ಧಾರವನ್ನು ಅರ್ಹರಿಗೆ ನೀಡುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಿದೆ.

Exit mobile version