Site icon Kannada News-suddikshana

ಸಿ.ಟಿ‌.ರವಿಗೆ ಬಿಗ್ ರಿಲೀಫ್; ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡಿ ಎಂದ ಹೈಕೋರ್ಟ್

ಲಕ್ಷ್ಮೀ ಹೆಬ್ಬಳ್ಕರ್ ವಿರುದ್ಧ ಅಪಮಾನದ ಪದ ಬಳಕೆ ಮಾಡಿದ್ದ ಅರೋಪದಡಿ ಪೋಲಿಸರ ವಶಕ್ಕೆ ಸೇರಿದ್ದ ಸಿ.ಟಿ.ರವಿಯವರನ್ನು ಎಲ್ಲಿದ್ದಾರೋ‌ ಅಲ್ಲಿಂದಲೇ ಬಿಡುಗಡೆ ಮಾಡಿ ಎಂದು ಹೈಕೋರ್ಟ್ ಆದೇಶಿಸಿತು.

ಇದೀಗ ಹೈಕೋರ್ಟ್ ಪ್ರತಿ ಪೋಲಿಸರ ಕೈ ಸೇರಿದ್ದು ದಾವಣಗೆರೆಯಲ್ಲಿ ಸಿ.ಟಿ.ರವಿ ಅವರ ಬಿಡುಗಡೆಯಾಗಿದೆ. ಸರ್ಕಾರದ ಕ್ರಮಗಳನ್ನು ಧಿಕ್ಕರಿಸಿದ ರವಿ ರವರು ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಆರೋಪಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಪಮಾನದ ಪದ ಬಳಕೆ ಮಾಡಿದ್ದ ಆರೋಪದಡಿ, ಸಚಿವೆ ಕೊಟ್ಟ ದೂರಿನ ಅನ್ವಯ ಯಾವುದೇ ನೋಟಿಸ್ ನೀಡದೆ ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ.ರವಿಯವರನ್ನು ಬಂಧಿಸಿರುತ್ತಾರೆ, ಈ ಪ್ರಕ್ರಿಯೇ ಸರಿಯಲ್ಲಾ ಎಂದು ನಿರ್ಧರಿಸಿ ಹೈಕೋರ್ಟ್ ನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಈ ವೇಳೆ ಮಾತನಾಡಿದ ಸಿ.ಟಿ.ರವಿ ಅವರು ನಾನು ಮಾಡದ ತಪ್ಪಿಗೆ ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ನಾನು ಅಪೇಕ್ಷಾರ್ಹ ಪದ ಬಳಕೆ ಮಾಡಿಲ್ಲ ಅದಕ್ಕೆ ಯಾವ ಸಾಕ್ಷಿಯು ಇಲ್ಲ ನೋಟಿಸ್ ನೀಡದೇ ನನ್ನನ್ನು ಬಂಧಿಸಿದ್ದಾರೆ.

ಸುವರ್ಣ ಸೌಧದಲ್ಲಿ ನನ್ನ ಮೇಲೆ ಹಲ್ಲೆಯಾಗಿದ್ದು, ನಾನು ಈ ಬಗ್ಗೆ ಪೋಲಿಸರಿಗೆ ದೂರು ಸಹ ಕೊಟ್ಟಿದ್ದೇನೆ ಆದರೆ ನಾನು ಕೊಟ್ಟ ದೂರನ್ನು ಪೋಲಿಸರು ಇನ್ನು ಎಫ್ ಐ ಆರ್ ಸಹ ಮಾಡಿಲ್ಲ, ನಾನು ದೂರು ಕೊಟ್ಟರು ಸರ್ಕಾರ ಅದನ್ನು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಹೋರಾಟ ಮಾಡಬೇಕೆಂಬುದನ್ನು ತೀರ್ಮಾನ ಮಾಡುತ್ತೇನೆ ಎಂದರು.

ರಾಜ್ಯಾದ್ಯಂತ ನನ್ನ ಬಂಧನವಾದ ನಂತರ ಪಕ್ಷದ ಕಾರ್ಯಕರ್ತರು, ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ.ಅವರೆಲ್ಲಾರಿಗೂ ನನ್ನ ಧನ್ಯವಾದಗಳನ್ನು ತಿಳಿಸಿದರು

Exit mobile version