Site icon Kannada News-suddikshana

ಭದ್ರಾ ಜಲಾಶಯದಿಂದ ಪ್ರತಿನಿತ್ಯ 8 ಸಾವಿರ ಕ್ಯೂಸೆಕ್ ನಂತೆ 3 ದಿನ ತುಂಗಭದ್ರಾ ನದಿಗೆ ನೀರು

SUDDIKSHANA KANNADA NEWS/ DAVANAGERE/ DATE:01-04-2025

ದಾವಣಗೆರೆ: ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಬೆಳೆ ರಕ್ಷಣೆಗೆ ಪ್ರತಿನಿತ್ಯ 8000 ಕ್ಯೊಸೆಕ್ಸ್ ನಂತೆ ಏ.1 ರ ಸಂಜೆ 6 ಗಂಟೆಯಿಂದ 3 ದಿನಗಳ ಕಾಲ ಭದ್ರಾ ನದಿಯ ಮೂಲಕ ತುಂಗಾಭದ್ರಾ ಜಲಾಶಯಕ್ಕೆ ನೀರನ್ನು ಹರಿಸಲಾಗುವುದು.

ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ರೈತರುಗಳು ಜಾನುವಾರು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ನದಿಯಿಂದ ಅನಧಿಕೃತವಾಗಿ ವಿದ್ಯುತ್ ಪಂಪ್, ಡೀಸೆಲ್ ಪಂಪ್‍ಸೆಟ್ ಮತ್ತು ಟ್ಯಾಂಕರ್‍ಗಳ ಮೂಲಕ ನೀರು ಕೊಂಡೋಯ್ಯುವುದನ್ನು ನಿಷೇಧಿಸಲಾಗಿದೆ. ನದಿಪಾತ್ರದಿಂದ ಸಾರ್ವಜನಿಕರು ಮತ್ತು ರೈತರು ತೆರಳಬಾರದೆಂದು ಭದ್ರಾ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

Exit mobile version