Site icon Kannada News-suddikshana

Bhadra Dam:ಈ ವಾರದಲ್ಲಿ ಭದ್ರಾ ನಾಲೆಗಳಿಗೆ ಹರಿಯುವುದೇ ನೀರು…? ಭದ್ರಾ ಡ್ಯಾಂ ನೀರಿನ ಮಟ್ಟ 163.9: ಒಳಹರಿವು 5850 ಕ್ಯೂಸೆಕ್

Bhadra Dam Today Water Level

Bhadra Dam Today Water Level

SUDDIKSHANA KANNADA NEWS/ DAVANAGERE/ DATE:03-08-2023

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತೆ ಕುಂಠಿತಗೊಂಡಿದೆ. ಭದ್ರಾ ಡ್ಯಾಂ (Bhadra Dam)ಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಸ್ವಲ್ಪ ಕಡಿಮೆಯಾಗಿದೆ. ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 163.9ಕ್ಕೇರಿದೆ. ಒಳಹರಿವು 5850 ಕ್ಯೂಸೆಕ್ ಇದೆ.

ಕಳೆದ ವರ್ಷ ಇದೇ ದಿನ 184.4 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಡ್ಯಾಂ ತುಂಬಲು 22.1 ಅಡಿ ನೀರು ಬರಬೇಕಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆ ತುಂಬಾನೇ ಕಡಿಮೆಯಾಗಿತ್ತು. ಆದ್ರೆ, ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ಮಳೆ ಜಾಸ್ತಿಯಾಗಿದ್ದು, ಮತ್ತೆ ಮಳೆ ಕಡಿಮೆಯಾಗಿದೆ. 1 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಕಡಿಮೆಯಾಗಿದೆ.

ಈ ಸುದ್ದಿಯನ್ನೂ ಓದಿ: 

Siddaramaiah: 5 ಗ್ಯಾರಂಟಿ ಜಾರಿಗೆ ಕೈ ಹೈಕಮಾಂಡ್ ಸಿದ್ದರಾಮಯ್ಯಗೆ ಬಹುಪರಾಕ್: ಲೋಕಸಭೆ ಚುನಾವಣೆಗೆ 20-24 ಸ್ಥಾನ ಗೆಲ್ಲುವ ಟಾಸ್ಕ್

 

163 ಅಡಿ ದಾಟುತ್ತೆ ಎಂದುಕೊಂಡಿದ್ದ ರೈತರಿಗೆ ಖುಷಿ ಕೊಟ್ಟಿದೆ. ಗುರುವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯ ನೀರಿನ ಮಟ್ಟ 163.9 ಆಗಿದ್ದು, ಜಿಲ್ಲಾಡಳಿತವು ಸಹ 163 ಅಡಿ ದಾಟಿದ ಬಳಿಕ ಭದ್ರಾ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿತ್ತು. ಈಗ ನೀರು ಹರಿಸಲು ದಿನಗಣನೆ ಶುರುವಾಗಿದೆ. ಇನ್ನು ವಾರದೊಳಗೆ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆ ಇದೆ. ಇನ್ನು ಶುಕ್ರವಾರದ ಹೊತ್ತಿಗೆ 164 ಅಡಿ ಗಡಿ ದಾಟಲಿದೆ.

ಇನ್ನೆರಡು ತಿಂಗಳು ಮಳೆ ಇದ್ದು, ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಭದ್ರಾ ಡ್ಯಾಂ (Bhadra Dam)ಅಥಾರಿಟಿ ಅಧಿಕಾರಿಗಳು ಇದ್ದಾರೆ. ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕೊಂಚ ಕಡಿಮೆಯಾದರೂ, ನೀರು ಹರಿಸಲು ಭದ್ರಾ ಡ್ಯಾಂ ಅಥಾರಿಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು,ಕಾಡಾ ಸಭೆ ಬಳಿಕ ನೀರು ಹರಿಯಲಿದೆ.

ಜಲಾಶಯಕ್ಕೆ 5850 ಕ್ಯೂಸೆಕ್ ಹರಿದು ಬರುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಸುಮಾರು ಒಂದು ಸಾವಿರ ಕ್ಯೂಸೆಕ್ ನೀರು ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 184.4 ಅಡಿ ಇತ್ತು.

ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ

ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ

ದಿನಾಂಕ:03- 08 -2023

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 163.9 ಅಡಿ

ಎಂಎಸ್ ಎಲ್ : 2135.75 Ft

ಕೆಪಾಸಿಟಿ: 46.495= 42.315 Tmc

ಒಳಹರಿವು: 5850 ಕ್ಯೂಸೆಕ್

ಒಟ್ಟು ಹೊರಹರಿವು: 191 ಕ್ಯೂಸೆಕ್

ಕಳೆದ ವರ್ಷ ಇದೇ ದಿನ: 184.4 ಅಡಿ

ಕೆಪಾಸಿಟಿ: 69.450 Tmc

Bhadra Dam, Bhadra Dam InFlow, Bhadra Dam Outflow, Bhadra Dam Today Water Level, Bhadra Dam News, Bhadra Dam News Update

Exit mobile version