Home ದಾವಣಗೆರೆ ಇಳಿಕೆಯಾಯ್ತು ಭದ್ರಾ ಡ್ಯಾಂ ಒಳಹರಿವು: 146.1 ಅಡಿ ತಲುಪಿದ ಜಲಾಶಯದ ನೀರಿನ ಮಟ್ಟ
ದಾವಣಗೆರೆನವದೆಹಲಿಬೆಂಗಳೂರು

ಇಳಿಕೆಯಾಯ್ತು ಭದ್ರಾ ಡ್ಯಾಂ ಒಳಹರಿವು: 146.1 ಅಡಿ ತಲುಪಿದ ಜಲಾಶಯದ ನೀರಿನ ಮಟ್ಟ

Share
ಭದ್ರಾ ಡ್ಯಾಂ
Share

ಶಿವಮೊಗ್ಗ ದಾವಣಗೆರೆ: ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಭದ್ರಾ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. 17 ಸಾವಿರಕ್ಕೂ ಹೆಚ್ಚು ನೀರು ಕ್ಯೂಸೆಕ್ ಹರಿದು ಬಂದಿತ್ತು. ನಿನ್ನೆ 13 ಸಾವಿರಕ್ಕೆ ಕಡಿಮೆಯಾಗಿತ್ತು. ಆದರೆ ಇದು ಆರು ಸಾವಿರದ ಎಂಟು ನೂರ ಐದು ಕ್ಯೂಸೆಕ್ ನಷ್ಟು ಒಳಹರಿವಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗಿದೆ.

ಮಲೆನಾಡು ಹಾಗೂ ಅಚ್ಚುಕಟ್ಟು ಪ್ರದೇಶದ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ (Bhadra Reservoir) ಜುಲೈ 11ರ ಬೆಳಿಗ್ಗೆಯ ವೇಳೆಗೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಜುಲೈ ತಿಂಗಳು ಆರಂಭವಾದ ಬೆನ್ನಲ್ಲೇ ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಜಲಾಶಯಗಳಂತೆ ಭದ್ರಾ ಡ್ಯಾಂಗೂ ಸಹ ಉತ್ತಮ ನೀರು ಹರಿದುಬರುತ್ತಿದೆ.

ಇಂದಿನ ನೀರಿನ ಮಟ್ಟದ ಸಂಪೂರ್ಣ ವಿವರ:

ಜಲಾಶಯದ ಒಟ್ಟು ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಇಂದಿನ ನೀರಿನ ಮಟ್ಟ 146 ಅಡಿ 10 ಇಂಚು ತಲುಪಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದ್ದು, ಸದ್ಯ ಡ್ಯಾಂನಲ್ಲಿ 31.826 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯಕ್ಕೆ 6,805 ಕ್ಯೂಸೆಕ್ಸ್ ಒಳಹರಿವು (Inflow) ದಾಖಲಾಗಿದೆ.

ಹೊರಹರಿವಿನ ವಿವರ: ವಿವಿಧ ನಾಲೆ ಹಾಗೂ ನದಿಯ ಮೂಲಕ ಒಟ್ಟು ಹೊರಹರಿವು (Outflow) 219 ಕ್ಯೂಸೆಕ್ಸ್ ಇದೆ. ಇದರಲ್ಲಿ ಎಡದಂಡೆ ನಾಲೆಗೆ (LBC) 50 ಕ್ಯೂಸೆಕ್ಸ್, ನದಿಯ ತೂಬಿನ (River Sluice) ಮೂಲಕ 100 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಇನ್ನುಳಿದಂತೆ 69 ಕ್ಯೂಸೆಕ್ಸ್ ನಷ್ಟು ನೀರು ಬಾಷ್ಪೀಕರಣದ (Evaporation) ಮೂಲಕ ವ್ಯಯವಾಗುತ್ತಿದೆ. ಸದ್ಯ ಬಲದಂಡೆ ನಾಲೆಗೆ (RBC) ಯಾವುದೇ ನೀರನ್ನು ಹರಿಸಲಾಗುತ್ತಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಮ್ಮಿ: ಕಳೆದ ವರ್ಷ ಇದೇ ದಿನ (ಜುಲೈ 11, 2025) ಭದ್ರಾ ಜಲಾಶಯದ ನೀರಿನ ಮಟ್ಟ 174 ಅಡಿ 4 ಇಂಚು ಇತ್ತು. ಜಲಸಂಗ್ರಹ 57.631 ಟಿಎಂಸಿ ಇತ್ತು ಹಾಗೂ ಭರ್ಜರಿ 11,991 ಕ್ಯೂಸೆಕ್ಸ್ ಒಳಹರಿವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಮಟ್ಟ ಹಾಗೂ ಹರಿವು ಕೊಂಚ ಕಡಿಮೆಯಿದೆ. ಆದರೂ ಮುಂಗಾರು ಚುರುಕಾಗಿರುವುದರಿಂದ ಮುಂಬರುವ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಭದ್ರಾ ಜಲಾಶಯದ ಇಂದಿನ ಸ್ಥಿತಿಗತಿ (Bhadra Dam Update)

ದಿನಾಂಕ: 11.07.2026 | ಸಮಯ: ಬೆಳಿಗ್ಗೆ 6:00

ನೀರಿನ ಮಟ್ಟ ಮತ್ತು ಸಾಮರ್ಥ್ಯ (Water Level & Capacity)

  • ಗರಿಷ್ಠ ಮಟ್ಟ (F.R.L): 186.00 ಅಡಿ (2158.00 ಅಡಿ MSL)

  • ಇಂದಿನ ಮಟ್ಟ: 146 ಅಡಿ 10 ಇಂಚು (2118.83 ಅಡಿ MSL)

  • ಗರಿಷ್ಠ ಸಂಗ್ರಹ ಸಾಮರ್ಥ್ಯ: 71.535 tmc (ಟಿ.ಎಂ.ಸಿ)

  • ಇಂದಿನ ಜಲಸಂಗ್ರಹ: 31.826 tmc

ಒಳಹರಿವು ಮತ್ತು ಹೊರಹರಿವು (Inflow & Outflow)

  • ಇಂದಿನ ಒಳಹರಿವು (Inflow): 6,805 Cusecs (ಕ್ಯೂಸೆಕ್ಸ್)

  • ಒಟ್ಟು ಹೊರಹರಿವು (Outflow): 219 Cusecs

    • ಎಡದಂಡೆ ನಾಲೆ (LBC): 50 ಕ್ಯೂಸೆಕ್ಸ್

    • ನದಿಯ ತೂಬು (River Sluice): 100 ಕ್ಯೂಸೆಕ್ಸ್

    • ಬಾಷ್ಪೀಕರಣ (Evaporation Loss): 69 ಕ್ಯೂಸೆಕ್ಸ್

    • ಬಲದಂಡೆ ನಾಲೆ (RBC): 0 ಕ್ಯೂಸೆಕ್ಸ್

ಕಳೆದ ವರ್ಷದ ಹೋಲಿಕೆ (Last Year Comparison)

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಕೊಂಚ ಕಡಿಮೆಯಿದೆ.

ವಿವರ (Particulars)ಕಳೆದ ವರ್ಷ (11.07.2025)ಈ ವರ್ಷ (11.07.2026)
ನೀರಿನ ಮಟ್ಟ (Dam Level)174 ಅಡಿ 4 ಇಂಚು146 ಅಡಿ 10 ಇಂಚು
ನೀರಿನ ಸಂಗ್ರಹ (Storage)57.631 tmc31.826 tmc
ಒಳಹರಿವು (Inflow)11,991 ಕ್ಯೂಸೆಕ್ಸ್6,805 ಕ್ಯೂಸೆಕ್ಸ್
ಹೊರಹರಿವು (Outflow)2,303 ಕ್ಯೂಸೆಕ್ಸ್219 ಕ್ಯೂಸೆಕ್ಸ್
Share

Leave a comment

Leave a Reply

Your email address will not be published. Required fields are marked *