Site icon Kannada News-suddikshana

Bhadra Dam:ಭದ್ರಾ ಜಲಾಶಯದ ಒಳಹರಿವು ಕಡಿಮೆ, ಅರೆನೀರಾವರಿ ಬೆಳೆಗೆ ಮಾತ್ರ ನೀರು: ನೀರಾವರಿ ಇಲಾಖೆ ಅಧಿಕಾರಿಗಳು ಕೊಟ್ಟ ಎಚ್ಚರಿಕೆ ಏನು…?

Bhadra dam Today Water Level

Bhadra dam Today Water Level

SUDDIKSHANA KANNADA NEWS/ DAVANAGERE/ DATE:18-08-2023

 

ದಾವಣಗೆರೆ: ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ಮತ್ತು 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ದ್ರಾ ಜಲಾಶಯ(Bhadra Dam)ದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅರೆನೀರಾವರಿ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲಾಗುವುದು.

ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ, ಬೇಸಿಗೆ ಬೆಳೆಗೆ ನೀರು ಉಳಿಸುವ ಸಲುವಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಿದ್ದಾಗ ಮಳೆಯ ಪ್ರಮಾಣಕ್ಕನುಗುಣವಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚು ನೀರುಣಿಸುವ ಭತ್ತದ ಬೆಳೆಯನ್ನು ಹೊರತುಪಡಿಸಿ ಅರೆನೀರಾವರಿ ಬೆಳೆಗಳನ್ನು ಬೆಳೆಯಬೇಕು.

ಈ ಸುದ್ದಿಯನ್ನೂ ಓದಿ: 

Ambulance: ಸಾವಿರಾರು ಜನರ ಜೀವ ರಕ್ಷಿಸಿದ್ದ ಆಂಬ್ಯುಲೆನ್ಸ್ ಆಪದ್ಬಾಂಧವ: ಜೀವರಕ್ಷಕನ ಸಾವು, ಮನಮಿಡಿಯುವ ಸ್ಟೋರಿ… ವಿಧಿಯ ಘೋರ ನರ್ತನಕ್ಕೆ ಕುಟುಂಬಕ್ಕೆ ಬರಸಿಡಿಲು

ದಾವಣಗೆರೆ ಶಾಖಾ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ, ಕಬ್ಬು 4000 ಹೆಕ್ಟೇರ್ ಕಬ್ಬು, ತೋಟಗಾರಿಕೆ 888 ಹೆಕ್ಟೇರ್, ಅರೆ ನೀರಾವರಿ 40,735 ಹೆಕ್ಟೇರ್ ಒಳಗೊಂಡಂತೆ ಒಟ್ಟು 45,623 ಹೆಕ್ಟೇರ್ ಮಾದರಿ ಬೆಳೆ ಬೆಳೆಯಲು ಹಾಗೂ ಈ ಬೆಳೆಗಳನ್ನು ಬೆಳೆಯದೆ ಇನ್ನಿತರೆ ಬೆಳೆಗಳನ್ನು ಬೆಳೆದರೆ ಜಲ ಸಂಪನ್ಮೂಲ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ.

ಬೆಳೆ ಪದ್ಧತಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಪಂಪ್ ಮಾಡಿ ಅನಧಿಕೃತವಾಗಿ ನೀರನ್ನು ಬಳಸಿಕೊಂಡು ನೀರಾವರಿ ಬೆಳೆಗಳನ್ನು ಬೆಳೆದು ನಿಯಮ ಉಲ್ಲಂಘನೆ ಮಾಡಿದಲ್ಲಿ ಪರಿಶೀಲಿಸಿ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಂ.5 ಭದ್ರಾ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್ಚರಿಕೆ ನೀಡಿದ್ದಾರೆ.

Exit mobile version