Site icon Kannada News-suddikshana

ಭದ್ರಾ ಜಲಾಶಯ(Bhadra Dam)ದಿಂದ ಭದ್ರಾ ಬಲದಂಡೆ ನಾಲೆ ನೀರು ಬಂದ್: ಅಂತೂ ಇಂತೂ ಆನ್ ಅಂಡ್ ಆಫ್ ಜಾರಿ, ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶ

BHADRA DAM

BHADRA DAM

SUDDIKSHANA KANNADA NEWS/ DAVANAGERE/ DATE:16-09-2023

ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಲ್ಲಿ ನೀರು ಸಂಗ್ರಹ ಕಡಿಮೆ ಆದ ಕಾರಣಕ್ಕೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ.

ಈ ಸುದ್ದಿಯನ್ನೂ ಓದಿ: 

50 ಸಾವಿರ ದಾಟಿದ ಅಡಿಕೆ: ಚನ್ನಗಿರಿ(Channagiri)ಯಲ್ಲಿ 15 ಕ್ವಿಂಟಾಲ್ ಅಡಿಕೆ ಕಳ್ಳತನ ಮಾಡಿದ್ದ ಆರೋಪಿ ಸೆರೆ, ಅಡಿಕೆ ಕಾಯೋದೇ ದೊಡ್ಡ ಸಮಸ್ಯೆ…!

ಶಿವಮೊಗ್ಗದಲ್ಲಿ ನಡೆದ ಕಾಡಾ ಸಭೆಯಲ್ಲಿ ಸೆ. 7ರಿಂದಲೇ ಎಡದಂಡೆ ನಾಲೆಯಲ್ಲಿ ನೀರು ಹೊರಬಿಡುವಿಕೆ ಸ್ಥಗಿತಗೊಂಡಿತ್ತು. ಈಗ ಬಲದಂಡೆ ನಾಲೆಯಲ್ಲಿ ನೀರು ನಿಲುಗಡೆ ಮಾಡಿರುವುದಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರಾ ಡ್ಯಾಂ (Bhadra Dam)ನ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ ಈ ಹಂಗಾಮಿನಲ್ಲಿ ನೂರು ದಿನ ಹರಿಸಲು ನಿರ್ಧರಿಸಲಾಗಿತ್ತು. ಆದ್ರೆ, ಈಗ ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೊಳಿಸಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಭದ್ರಾ ಅಚ್ಚುಕಟ್ಟು ಪ್ರದೇಶದಾಭಿವೃದ್ಧಿ ಪ್ರಾಧಿಕಾರವೂ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ದಾವಣಗೆರೆ ಭಾಗದಲ್ಲಿ ಭತ್ತ ಬಿತ್ತನೆ ಮಾಡಿದ್ದ ರೈತರು ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಲದಂಡೆ ನಾಲೆಯಲ್ಲಿ ನೀರು ನಿಲ್ಲಿಸುವುದು ಯಾವಾಗ?

ಬಲದಂಡೆಯಲ್ಲಿ ನೀರು ಯಾವಾಗ ಹರಿಸಲಾಗುತ್ತೆ?

ಎಡದಂಡೆ ನಾಲೆಯಲ್ಲಿ ನೀರು ಸ್ಥಗಿತ ಯಾವಾಗ..?

ಎಡದಂಡೆ ನಾಲೆಯಲ್ಲಿ ನೀರು ಹರಿಸುವುದು ಯಾವಾಗ…?

ಪ್ರತಿನಿತ್ಯ ಬಲದಂಡೆ ನಾಲೆಯಲ್ಲಿ 2300 ಕ್ಯೂಸೆಕ್ ನೀರನ್ನು ಹರಿಬಿಡಲಾಗುತಿತ್ತು. ಅದನ್ನು ಈಗ ಇಂದಿನಿಂದ ನಿಲ್ಲಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕುಗಳಲ್ಲಿನ
ಅಚ್ಚುಕಟ್ಟು ಪ್ರದೇಶ ಭದ್ರಾ ಎಡದಂಡೆ ನಾಲೆಯಲ್ಲಿ ಬರುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಬಲದಂಡೆ ನಾಲೆ ಇದೆ. 161 ಅಡಿಗೆ ಭದ್ರಾ ಜಲಾಶಯ (Bhadra Dam)ದ ನೀರಿನ ಮಟ್ಟ ಕುಸಿದಿದೆ. ಡ್ಯಾಂನ ಗರಿಷ್ಠ ಮಟ್ಟ 186 ಅಡಿ ಇದ್ದು, ಕಳೆದ ವರ್ಷ
ಇದೇ ಅವಧಿಯಲ್ಲಿ 184.1 ಅಡಿ ನೀರು ಸಂಗ್ರಹ ಇತ್ತು.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಕಾರಣ ಭದ್ರಾಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ತುಂಬಾನೇ ಕಡಿಮೆ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬರ ಪರಿಸ್ಥಿತಿ ಎದುರಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಜಲಾಶಯದಲ್ಲಿ ಸದ್ಯ 43.86 ಟಿಎಂಸಿ ನೀರಿದ್ದು, ಕುಡಿಯುವ ನೀರಿಗೋಸ್ಕರ 7 ಟಿಎಂಸಿ ನೀರಿಗೆ ಕಾಯ್ದಿರಿಸಲಾಗಿದೆ. ಹೂಳು, ಡೆಡ್ ಸ್ಟೋರೇಜ್ 13.83 ಟಿಎಂಸಿ ಹೊರತಾಗಿ ಕೃಷಿಗೆ 18 ಟಿಎಂಸಿ ನೀರು ಉಳಿಯುತ್ತದೆ. ಈ ನೀರನ್ನು ನವೆಂಬರ್ ವರೆಗೆ ನಾಲೆಗಳಿಗೆ ಹರಿಸಿದರೆ, ನಂತರ ಮೇ ಅಂತ್ಯದವರೆಗೆ ತೋಟದ ಬೆಳೆಗಳಿಗೆ ನೀರು ಇಲ್ಲದಂತಾಗುತ್ತದೆ.

ನೀರು ಉಳಿಸುವಂತೆ ಎಡದಂಡೆ ನಾಲೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ನೂರು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೆ ಉಲ್ಟಾ ಹೊಡೆದಿದೆ.
ಮಾತ್ರವಲ್ಲ, ಆನ್ ಅಂಡ್ ಆಪ್ ವ್ಯವಸ್ಥೆ ಜಾರಿಗೊಳಿಸಲು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರ ಹೆಗಲಿಗೆ ವಹಿಸಲಾಗಿತ್ತು. ಈಗ ಭದ್ರಾ ಡ್ಯಾಂ ನೀರಿನ ಸಂಗ್ರಹದ ಲೆಕ್ಕಾಚಾರ ಇಟ್ಟುಕೊಂಡು ನೂರು ದಿನಗಳ ಕಾಲ ಸತತವಾಗಿ ನೀರು ಹರಿಸುವ ವಿಚಾರವನ್ನು ಸರ್ಕಾರ ಕೈ ಬಿಟ್ಟಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಈ ನೀರು ನಂಬಿ ಭತ್ತ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರದ ದ್ವಂದ್ವ ನಿರ್ಧಾರದಿಂದ ರೈತರು ಆತಂಕಕ್ಕೆ ಒಳಗಾಗುವಂತೆ
ಮಾಡಿದೆ.

 

Exit mobile version