SUDDIKSHANA KANNADA NEWS/ DAVANAGERE/ DATE_08-07_2025
ದಾವಣಗೆರೆ: ಭದ್ರಾ ಡ್ಯಾಂ (Bhadra dam) ಒಳಹರಿವಿನಲ್ಲಿ ಇಂದು ಸ್ವಲ್ಪ ಕಡಿಮೆಯಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 171.10 ಅಡಿ ಆಗಿದ್ದು, ಭರ್ತಿಗೆ ಇನ್ನು ಕೇವಲ 14.90 ಅಡಿ ಮಾತ್ರ ಬರಬೇಕಿದೆ. ಈ ತಿಂಗಳಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಜಲಾಶಯಕ್ಕೆ 19,043 ಕ್ಯೂಸೆಕ್ ಒಳಹರಿವಿದ್ದು, 5201 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 133. ಅಡಿ ಇತ್ತು. 38 ಅಡಿ ಹೆಚ್ಚು ನೀರು ಈ ವರ್ಷ ಸಂಗ್ರಹವಾಗಿದ್ದು, ಜಲಾಶಯ
ಭರ್ತಿಗೆ ಕ್ಷಣಗಣನೆ ಶುರುವಾಗಿದೆ.
READ ALSO THIS STORY: ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ: ಅವಧಿ ವಿಸ್ತರಣೆ
ಭದ್ರಾ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜುಲೈ ತಿಂಗಳ ಆರಂಭದಲ್ಲೇ ಅತಿ ಹೆಚ್ಚು ನೀರು ಹರಿದು ಬಂದಿದೆ. ಜಲಾಶಯ ಭರ್ತಿಗೆ ಕೇವಲ 14.90 ಅಡಿ ನೀರು ಬರಬೇಕಷ್ಟೇ. ಸೋಮವಾರ ಭದ್ರಾ ಡ್ಯಾಂಗೆ 20626 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಹೊರ ಹರಿವು 5198 ಕ್ಯೂಸೆಕ್ ಇತ್ತು. ಜಲಾಶಯದ ಗರಿಷ್ಠ ಮಟ್ಟ 186 ಅಡಿ.
ಭದ್ರಾ ನದಿಪಾತ್ರದ ತಗ್ಗುಪ್ರದೇಶದ ಜನರಿಗೆ ಎಚ್ಚರಿಕೆ:
ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಸಾಕಷ್ಟು ಒಳಹರಿವು ಬರುತ್ತಿದೆ.
ನೀರಿನ ಸಂಗ್ರಹ ಮಟ್ಟವು ಹೆಚ್ಚಾಗತೊಡಗಿದೆ. ಹರಿದು ಬರುವ ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ಸ್ ಇದ್ದು, ಅಣಿಕಟ್ಟು ಸುರಕ್ಷತೆ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಸ್ಪಿಲ್ ವೇ ಗೇಟ್ ಮುಖಾಂತರ ಬೀಡಲಾಗುವುದು.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಭದ್ರಾ ಜಲಾಶಯದ ನೀರಿನ ಮಟ್ಟ
Date:08_07_2025
ಇಂದಿನ ನೀರಿನ ಮಟ್ಟ: 171.10 ಅಡಿ
ಒಳ ಹರಿವು: 19043 ಕ್ಯೂಸೆಕ್
ಹೊರ ಹರಿವು: 5201 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 133.1 ಅಡಿ
ಕೆಪಾಸಿಟಿ: 22.436 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ