Site icon Kannada News-suddikshana

Bhadra Damಗೆ 21,139 ಕ್ಯೂಸೆಕ್ ಒಳಹರಿವು: ಇಂದು ಜಲಾಶಯದ ನೀರಿನ ಮಟ್ಟ ಎಷ್ಟಿದೆ?

BHADRA DAM

SUDDIKSHANA KANNADA NEWS/ DAVANAGERE/ DATE-28-06-2025

ದಾವಣಗೆರೆ: ಭದ್ರಾ ಜಲಾಶಯ (Bhadra Dam) ದ ನೀರಿನ ಮಟ್ಟವು ಜೂನ್ ತಿಂಗಳಿನಲ್ಲಿ ಭಾರೀ ಏರಿಕೆಯಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 161.4 ಅಡಿ ಇದೆ. ಜಲಾಶಯ ಭರ್ತಿಗೆ ಇನ್ನು ಕೇವಲ 24.6 ಅಡಿ ನೀರು ಮಾತ್ರ ಬರಬೇಕು.

READ ALSO THIS STORY: ಚನ್ನಗಿರಿಯ ಮುದ್ದೇನಹಳ್ಳಿಯಲ್ಲೊಂದು ವಿಲಕ್ಷಣ ಕೇಸ್: ಪುತ್ರಿ ಜೊತೆ ಮದುವೆ ಮಾಡಿಸಿದ್ದ ಅತ್ತೆ ಜೊತೆ ಅಳಿಯ ಜೂಟ್!

ಕಳೆದೊಂದು ವಾರದಿಂದ ಡ್ಯಾಂ ನೀರಿನ ಮಟ್ಟದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 39 ಅಡಿಗೂ ಹೆಚ್ಚು ನೀರು ಸಂಗ್ರಹ ಆಗಿದೆ. ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 122.3 ಅಡಿ ಇತ್ತು. ಈ ವರ್ಷ 161.4 ಅಡಿಗೆ ಏರಿಕೆ ಆಗಿದೆ. ಜಲಾಶಯಕ್ಕೆ 21,139 ಕ್ಯೂಸೆಕ್ ಒಳಹರಿವಿದ್ದರೆ, ಹೊರ ಹರಿವು 1290 ಕ್ಯೂಸೆಕ್ ಇದೆ. ಇತರೆ 1200 ಕ್ಯೂಸೆಕ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಶುಕ್ರವಾರ ಜಲಾಶಯಕ್ಕೆ 26,646 ಕ್ಯೂಸೆಕ್ ಒಳಹರಿವಿತ್ತು. ಆದ್ರೆ, ಇಂದು ಸುಮಾರು 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಕಡಿಮೆಯಾಗಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ. ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ

Date:28_06_2025

ಇಂದಿನ ನೀರಿನ ಮಟ್ಟ: 161.4 ಅಡಿ

ಒಳ ಹರಿವು: 21,139ಕ್ಯೂಸೆಕ್

ಹೊರ ಹರಿವು: 1290 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 122.3 ಅಡಿ

ಕೆಪಾಸಿಟಿ: 16.5897 ಟಿಎಂಸಿ

ಜಲಾಶಯದ ಗರಿಷ್ಠ ಮಟ್ಟ: 186 ಅಡಿ

Exit mobile version