SUDDIKSHANA KANNADA NEWS/ DAVANAGERE/ DATE:16-07-2024
ದಾವಣಗೆರೆ: ಭದ್ರಾ ಜಲಾನಯನ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ ನೀರಿನ ಮಟ್ಟ 144.7 ಅಡಿ ನೀರು ಹೆಚ್ಚಾಗಿದೆ. ಜಲಾಶಯಕ್ಕೆ ಒಂದೇ ದಿನ ಮೂರು ಅಡಿ ನೀರು ಹರಿದು ಬಂದಿರುವುದು ಜಲಾಶಯದ ಅವಲಂಬಿತ ರೈತರು, ಜನರು ಸಂತಸಪಡುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3 ಅಡಿಗೂ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.
ಒಂದೇ ದಿನಕ್ಕೆ ಮೂರು ಅಡಿ ನೀರು ಹೆಚ್ಚು ಬಂದಿರುವುದರಿಂದ ಜಲಾಶಯದ ನೀರಿನ ಮಟ್ಟ 144.7 ಅಡಿ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಂಗಳವಾರವೂ ವರುಣ ಅಬ್ಬರಿಸಿ ಬೊಬ್ಬಿರಿಯುವ ಸಾಧ್ಯತೆ ಇದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಭಾನುವಾರಕ್ಕಿಂತ ಸೋಮವಾರ ಒಂದೂವರೆ ಸಾವಿರ ಕ್ಯೂಸೆಕ್ ಹೆಚ್ಚು ಹರಿದು ಬರುತ್ತಿದ್ದು, ಇದು ರೈತರ ಸಂತಸಕ್ಕೆ ಕಾರಣವಾಗಿತು. ಆದ್ರೆ, ಭದ್ರಾ ಜಲಾಶಯಕ್ಕೆ ಒಂದೇ ದಿನ ಹನ್ನೆರಡು ಸಾವಿರ ಕ್ಯೂಸೆಕ್ ಹೆಚ್ಚಾಗಿರುವುದಿಂದ ಡ್ಯಾಂಗೆ ಹೆಚ್ಚಿನ ನೀರು ಹರಿದು ಬಂದಿದೆ.
ಕಳೆದ ವರ್ಷವೂ 141.3 ಅಡಿ ನೀರು ಸಂಗ್ರಹವಿತ್ತು. ಆದ್ರೆ, ಈ ವರ್ಷವೂ 144.7 ಅಡಿ ನೀರು ಸಂಗ್ರಹ ಆಗಿದೆ. ಒಳಹರಿವು ಹೆಚ್ಚಾಗಿರುವ ಕಾರಣ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.2023ರ ಜುಲೈ 15ರಂದು 141.3 ಅಡಿ ನೀರು ಸಂಗ್ರಹ ಇದ್ದರೆ, ಒಳಹರಿವು 499 ಕ್ಯೂಸೆಕ್ ಇತ್ತು. ಹೊರ ಹರಿವು 164 ಕ್ಯೂಸೆಕ್ ಇತ್ತು.
ಆದ್ರೆ, ಈ ವರ್ಷ 27839 ಕ್ಯೂಸೆಕ್ ಒಳಹರಿವಿದ್ದರೆ, 166 ಕ್ಯೂಸೆಕ್ ಹೊರ ಹರಿವು ಇದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಒಂದೇ ದಿನಕ್ಕೆ ಎರಡು ಅಡಿ ಹೆಚ್ಚು ನೀರು ಬಂದಿದೆ. ಹಾಗಾಗಿ, ಭದ್ರಾ ಅಚ್ಚುಕಟ್ಟುಪ್ರದೇಶದ ರೈತರು, ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಜಲಾಶಯದ ನೀರಿನ ಗರಿಷ್ಠ ಮಟ್ಟ 186 ಅಡಿ. ಭರ್ತಿಯಾಗಲು ಇನ್ನು 43.3 ಅಡಿ ನೀರು ಬರಬೇಕು. ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷ ಡ್ಯಾಂ ಭರ್ತಿಯಾಗಲಿದೆ. ಮಳೆ ಕೈಕೊಟ್ಟರೆ ಕಷ್ಟವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 16- 07-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 144.7 ಅಡಿ
-
ಕೆಪಾಸಿಟಿ: 30.142 ಟಿಎಂಸಿ
-
ಒಳಹರಿವು: 27839 ಕ್ಯೂಸೆಕ್
-
ಒಟ್ಟು ಹೊರಹರಿವು: 166 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ: 141.3 ಅಡಿ
-
ಕೆಪಾಸಿಟಿ: 27.780 ಟಿಎಂಸಿ