Site icon Kannada News-suddikshana

ಇಂದಿನ ಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟು..? ಜಲಾಶಯದಲ್ಲಿನ ನೀರು ಕಡಿಮೆಯಾಗಿದೆಯಾ? ಒಳಹರಿವು, ಹೊರಹರಿವು ಎಷ್ಚು…?

SUDDIKSHANA KANNADA NEWS/ DAVANAGERE/ DATE:19-11-2024

ದಾವಣಗೆರೆ: ಈ ವರ್ಷ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಭದ್ರಾ ಜಲಾಶಯವೂ ಭರ್ತಿಯಾಗಿತ್ತು. ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಮಟ್ಟ ತುಸು ಕಡಿಮೆಯಾಗಿದೆ.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಭದ್ರಾ ಜಲಾಶಯದ ನೀರು ಆಧಾರ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯವು ಭರ್ತಿಯಾಗಿತ್ತು. ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಜಲಾಶಯದ ನೀರಿನ ಮಟ್ಟದ ಬಗ್ಗೆ ರೈತರಲ್ಲಿ ಕುತೂಹಲ ಇದ್ದೇ ಇರುತ್ತದೆ.

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 184. 4 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 151.8 ಅಡಿ ಇತ್ತು. ಅಂದರೆ ಈ ವರ್ಷ ಬರೋಬ್ಬರಿ 34 ಅಡಿ ನೀರು ಹೆಚ್ಚು ಸಂಗ್ರಹ ಇದೆ. ಇನ್ನೂ ಮಳೆಯಾಗುವ ಸಾಧ್ಯತೆ ಇರುವ ಕಾರಣ ಮತ್ತಷ್ಟು ನೀರು ಜಲಾಶಯಕ್ಕೆ ಹರಿದು ಬರುವ ಸಾಧ್ಯತೆ ಇದೆ.

ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ಒಳಹರಿವು 1594 ಕ್ಯೂಸೆಕ್ ಇದ್ದರೆ, ಹೊರ ಹರಿವು 3689 ಕ್ಯೂಸೆಕ್ ಇದೆ. ಎಡದಂಡೆ ನಾಲೆಯಿಂದ 380 ಕ್ಯೂಸೆಕ್, ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ:

ಇಂದಿನ ನೀರಿನ ಮಟ್ಟಛ 184.4 ಅಡಿ

ಒಳಹರಿವು: 1594 ಕ್ಯೂಸೆಕ್

ಹೊರ ಹರಿವು: 3689 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 151.8 ಅಡಿ

ಎಡದಂಡೆ ನಾಲೆ: 380 ಕ್ಯೂಸೆಕ್

ಬಲದಂಡೆ ನಾಲೆ: 2650 ಕ್ಯೂಸೆಕ್

Exit mobile version