ಒಳಹರಿವು ಸ್ವಲ್ಪ ಕುಸಿತ: 183 ಅಡಿ ತಲುಪಿದ ಭದ್ರಾ ಡ್ಯಾಂ ನೀರಿನ ಮಟ್ಟ

SUDDIKSHANA KANNADA NEWS/ DAVANAGERE/ DATE:31-08-2024

ದಾವಣಗೆರೆ: ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ತುಸು ಕಡಿಮೆಯಾಗಿದ್ದು, ಜಲಾಶಯದ ನೀರಿನ ಮಟ್ಟ 183 ಅಡಿ ತಲುಪಿದೆ.

ಶನಿವಾರ ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 182.9 ಅಡಿ ಇತ್ತು. 11253 ಕ್ಯೂಸೆಕ್ ಒಳಹರಿವಿದ್ದು, ಜಲಾಶಯದ ನೀರಿನ ಮಟ್ಟ 9.45ರ ಸುಮಾರಿಗೆ 183 ಅಡಿ ತಲುಪಿದೆ. ಜಲಾಶಯದಿಂದ ಹೊರ ಹರಿವು 4193 ಕ್ಯೂಸೆಕ್ ಇದೆ.

ಜಲಾಶಯದ ನೀರಿನ ಮಟ್ಟ ಶುಕ್ರವಾರ 182.3 ಅಡಿಗೆ ಏರಿಕೆಯಾಗಿದ್ದು, 12137 ಕ್ಯೂಸೆಕ್ ಒಳಹರಿವಿತ್ತು. ಇದರಿಂದಾಗಿ ಡ್ಯಾಂನ ನೀರಿನ ಮಟ್ಟ ಹೆಚ್ಚಳವಾಗಿದೆ. ಜಲಾಶಯದಿಂದ 3943 ಕ್ಯೂಸೆಕ್ ಹೊರ ಹರಿವಿತ್ತು. ಆದ್ರೆ,
ಇಂದು 4193 ಕ್ಯೂಸೆಕ್ ಇದೆ. ಜಲಾಶಯಕ್ಕೆ 8 ಸಾವಿರ ಕ್ಯೂಸೆಕ್ ನೀರು ಸಂಗ್ರಹವಾಗುತ್ತಿದೆ. ಇದು ರೈತರಲ್ಲಿ ಖುಷಿಗೆ ಕಾರಣವಾಗಿದೆ.

ಭದ್ರಾ ಎಡದಂಡೆ ನಾಲೆಗೆ 380 ಕ್ಯೂಸೆಕ್ ಹಾಗೂ ಭದ್ರಾ ಬಲದಂಡೆ ನಾಲೆಗೆ 2650 ಕ್ಯೂಸೆಕ್ ಹರಿಬಿಡಲಾಗುತ್ತಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 164.2 ಅಡಿ ನೀರು ಸಂಗ್ರಹವಾಗಿತ್ತು.

ಭದ್ರಾ ಹಿನ್ನೀರು ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಭದ್ರಾ ಅಚ್ಚುಕಟ್ಟುದಾರ ರೈತರು ಮತ್ತು ಜನರ ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟಕ್ಕೆ ಹೋಲಿಸಿದರೆ ಈ ವರ್ಷ 19 ಅಡಿ ನೀರು ಹೆಚ್ಚು
ಸಂಗ್ರಹವಾಗಿದೆ.

ಕಳೆದ ವರ್ಷ ತೀವ್ರ ಬರಗಾಲ ಇತ್ತು, ಈ ವರ್ಷ ಸಮೃದ್ಧ ಮಳೆಯಾಗಿದ್ದು, ಜುಲೈ ತಿಂಗಳಿನಲ್ಲಿಯೇ ಜಲಾಶಯವು ಭರ್ತಿಯಾಗಿತ್ತು. ಆದ್ರೆ. ಮತ್ತೆ ಮಳೆ ಶುರುವಾಗಿದ್ದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವುದು ರೈತರ ಸಂತಸ ಇಮ್ಮುಡಿಯಾಗಲು ಕಾರಣವಾಗಿದೆ.

ಭದ್ರಾ ಡ್ಯಾಂ ನೀರಿನ ಮಟ್ಟ

ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ

ದಿನಾಂಕ: 31-08-2024

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 182.9 ಅಡಿ

ಕೆಪಾಸಿಟಿ: 67.498 ಟಿಎಂಸಿ

ಒಳಹರಿವು: 11253 ಕ್ಯೂಸೆಕ್

ಹೊರ ಹರಿವು: 4193 ಕ್ಯೂಸೆಕ್

ಭದ್ರಾ ಎಡದಂಡೆ ನಾಲೆ: 2650 ಕ್ಯೂಸೆಕ್

ಭದ್ರಾ ಬಲದಂಡೆ ನಾಲೆ: 380 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 164.2 ಅಡಿ

ಕಳೆದ ವರ್ಷ ಇದೇ ದಿನ ಒಳಹರಿವು: 3222 ಕ್ಯೂಸೆಕ್

Comments

Leave a Reply

Your email address will not be published. Required fields are marked *