Site icon Kannada News-suddikshana

ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆ: ಹೊರಹರಿವು ಕಡಿಮೆ, ಒಳಹರಿವಿನಲ್ಲಿ ಹೆಚ್ಚಳ

SUDDIKSHANA KANNADA NEWS/ DAVANAGERE/ DATE:28-08-2024

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ ಕ್ರಸ್ಟ್ ಗೇಟ್ ಗಳಿಂದ ನೀರು ಹೊರಬಿಡುತ್ತಿರುವುದನ್ನು ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗುತ್ತಿದ್ದು, ಡ್ಯಾಂ ನೀರಿನ ಮಟ್ಟ 181.2 ಅಡಿಗೆ ಏರಿಕೆಯಾಗಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಆಗಿದ್ದು, ಜಲಾಶಯ ಭರ್ತಿಗೆ ಇನ್ನೂ ಕೇವಲ 4.8 ಅಡಿ ನೀರು ಮಾತ್ರ ಬರಬೇಕು. ಜಲಾಶಯಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಸಂಗ್ರಹವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗತೊಡಗಿದೆ. ಜುಲೈ ತಿಂಗಳಿನಲ್ಲಿ ಡ್ಯಾಂ ಗರಿಷ್ಠ ಮಟ್ಟ ತಲುಪಿದ್ದರೂ ಹೆಚ್ಚಿನ ನೀರು ಹೊರ ಹರಿಸಿದ ಪರಿಣಾಮ ನೀರಿನ ಮಟ್ಟ ಕುಸಿಯುತ್ತಾ ತೊಡಗಿತ್ತು. ಭದ್ರಾ ಅಚ್ಚುಕಟ್ಟು ರೈತರು ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಒಳಹರಿವು 8571 ಕ್ಯೂಸೆಕ್ ಇದ್ದರೆ ಹೊರ ಹರಿವು: 3942 ಕ್ಯೂಸೆಕ್ ಇದೆ. ಭದ್ರಾ ಎಡದಂಡೆ ನಾಲೆಗೆ 380 ಕ್ಯೂಸೆಕ್ ಹಾಗೂ ಭದ್ರಾ ಬಲದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 164.11 ಅಡಿ ಇತ್ತು. ಒಳಹರಿವು 3223 ಕ್ಯೂಸೆಕ್ ಇತ್ತು.

ಆಗಸ್ಟ್ ತಿಂಗಳಿನಲ್ಲಿ ಮಳೆ ಸುರಿಯುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಡ್ಯಾಂಗೆ ಬಂದಿಲ್ಲ. ನಿತ್ಯವೂ ಐದು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಹರಿಸುತ್ತಿದ್ದ ಪರಿಣಾಮ ನೀರಿನ ಮಟ್ಟ ಕುಸಿದಿತ್ತು. ಈಗ ಡ್ಯಾಂನಲ್ಲಿ 181 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿರುವುದು ರೈತರಿಗೆ ಸಂತಸ ತಂದಿದೆ. ನಾಲ್ಕು ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಸಂಗ್ರಹವಾಗುತ್ತಿರುವುದರಿಂದ ಜಲಾಶಯ ತುಂಬಿ ತುಳುಕಲಿದೆ.

ಭದ್ರಾ ಡ್ಯಾಂ ನೀರಿನ ಮಟ್ಟ

ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ

ದಿನಾಂಕ: 28-08-2024

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 181.2 ಅಡಿ

ಕೆಪಾಸಿಟಿ: 65.576 ಟಿಎಂಸಿ

ಒಳಹರಿವು: 8571 ಕ್ಯೂಸೆಕ್

ಹೊರ ಹರಿವು: 3942 ಕ್ಯೂಸೆಕ್

ಭದ್ರಾ ಎಡದಂಡೆ ನಾಲೆ: 2650 ಕ್ಯೂಸೆಕ್

ಭದ್ರಾ ಬಲದಂಡೆ ನಾಲೆ: 380 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 164.11 ಅಡಿ

ಕಳೆದ ವರ್ಷ ಇದೇ ದಿನ ಒಳಹರಿವು: 3223 ಕ್ಯೂಸೆಕ್

Exit mobile version