Site icon Kannada News-suddikshana

BESCOM: ವಿದ್ಯುತ್ ನಿಲುಗಡೆ ಮಾಡಿದ್ದ ಬೆಸ್ಕಾಂಗೆ ಗ್ರಾಹಕರ ಪರಿಹಾರ ಆಯೋಗವು ವಿಧಿಸಿದ ದಂಡವೆಷ್ಟು..? 

BESCOM

BESCOM

SUDDIKSHANA KANNADA NEWS/ DAVANAGERE/ DATE:23-06-2023

ದಾವಣಗೆರೆ: ಬೆಸ್ಕಾಂ (BESCOM) ಅಧಿಕಾರಿಗಳು ಕಾನೂನು ಬಾಹಿರವಾಗಿ ನಗರದ ಪ್ರವೀಣ್ ಉಲ್ಲಾಸ್ ರೇವಣ್‍ಕರ್ ಮನೆಯ ವಿದ್ಯುತ್ ಸರಬರಾಜನ್ನು ತಡೆಹಿಡಿದಿದ್ದು, ದೂರಿನ ಮೇರೆಗೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು ಬೆಸ್ಕಾಂ ಕಂಪನಿಯವರ ಮೇಲೆ ರೂ.25000 ದಂಡ ವಿಧಿಸಿದೆ.

ಈ ಸುದ್ದಿಯನ್ನೂ ಓದಿ: 

Bangalore: ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ: ಭರ್ಜರಿ ವೇತನ ತಿಂಗಳಿಗೆ ರೂ.52650-97,100, ತಡಮಾಡ್ಬೇಡಿ ಕೂಡ್ಲೇ ಅರ್ಜಿ ಸಲ್ಲಿಸಿ

ಮೂರು ತಿಂಗಳಿಂದ ಬಿಲ್ ಪಾವತಿಸಿರುವುದಿಲ್ಲ ಎಂದು ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಆದರೆ ಗ್ರಾಹಕರು ಬೆಸ್ಕಾಂ ತನ್ನ ಸೇವೆಯನ್ನು ನೀಡುವಾಗ ಕೆಇಆರ್‍ಸಿ ಕೋಡ್ 2004 ರ ನಿಯಮ-9 ರ ಅಡಿಯಲ್ಲಿನ ಪ್ರಕ್ರಿಯೆಗಳನ್ನು ಪಾಲಿಸದೇ ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಇದಕ್ಕೆ ಗ್ರಾಹಕರಿಗೆ ನೀಡುವ ಸೇವಾ ನ್ಯೂನ್ಯತೆ ಎಂದು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು ಆದೇಶಿಸಿ ದೂರುದಾರನಿಗೆ ಉಂಟಾದ ಮಾನಸಿಕ ಹಿಂಸೆ ಮತ್ತು ಪ್ರಕರಣದ ನಡವಳಿಕೆಗೆ ರೂ.20,000 ಮತ್ತು ಪ್ರಕರಣದ ಖರ್ಚಿಗಾಗಿ ರೂ.5,000 ಗಳಂತೆ ಬೆಸ್ಕಾಂ (BESCOM) ಕಂಪನಿಯವರು ದೂರುದಾರರಿಗೆ ಆದೇಶವಾದ 30 ದಿನಗಳ ಒಳಗಾಗಿ ನೀಡಬೇಕು.

ತಪ್ಪಿದ್ದಲ್ಲಿ ಪ್ರತಿಶತ ಶೇ.6 ರಂತೆ ಬಡ್ಡಿಸಹಿತ ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ ಮತ್ತು ಮಹಿಳಾ ಸದಸ್ಯರಾದ ಗೀತಾ ಬಿ.ಯು ಅವರು ತೀರ್ಪು ನೀಡಿದ್ದಾರೆ.

BESCOM YADAVATTU, BESCOM MISTAKE, BESCOMGE FINE, BESCOM CURRENT CUT, ಬೆಸ್ಕಾಂ ಯಡವಟ್ಟು, ವಿದ್ಯುತ್ ಕಟ್ ಮಾಡಿದ್ದಕ್ಕೆ ಬೆಸ್ಕಾಂಗೆ ಬಿತ್ತು ಫೈನ್, ಬೆಸ್ಕಾಂಗೆ 25 ಸಾವಿರ ದಂಡ, ಬೆಸ್ಕಾಂ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಗೆದ್ದ ವ್ಯಕ್ತಿ

Exit mobile version