ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಟೀಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿ, ಕರುನಾಡ ರಾಜಧಾನಿ ಬೆಂಗಳೂರನ್ನು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಾಳು ಮಾಡಿದೆ. ನಗರದ ಕುರಿತಂತೆ ಇಲ್ಲಿನ ಜನರ ಹಾಗೂ ವಿಪಕ್ಷಗಳ ಟೀಕೆಗಳನ್ನು ತಮ್ಮ ಕೀಳು ರಾಜಕೀಯದ ಕಾಮಾಲೆ ಕಣ್ಣಿನಿಂದಲೇ ನೋಡುತ್ತಾ, ಸದಾ ಧಿಮಾಕಿನಿಂದ ಮಾತನಾಡುವ ಬೆಂಗಳೂರು ಉಸ್ತುವಾರಿಗಳು ಈ ವಿಷಯದಲ್ಲಿ ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿ ಮುಖ್ಯಾಂಶಗಳು
ಬೆಂಗಳೂರು ಟ್ರಾಫಿಕ್ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಟೀಕೆ: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ.
“ಬ್ರ್ಯಾಂಡ್ ಬೆಂಗಳೂರು” ಕೇವಲ ಘೋಷಣೆಯೇ?: ಡಿಸಿಎಂ ಡಿ.ಕೆ. ಶಿವಕುಮಾರ್ ಮೌನಕ್ಕೆ ಪ್ರಶ್ನೆ.
ವಿಶ್ವದ 2ನೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆಯ ನಗರ: ಬೆಂಗಳೂರು ಮೂಲಸೌಕರ್ಯ ವಿಳಂಬದ ಬಗ್ಗೆ ಆಕ್ರೋಶ.
ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳ ವಿಳಂಬ: ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾದ ಸವಾಲು.
ನಿಮ್ಮದೇ ಪಕ್ಷದ ನೆರೆ ರಾಜ್ಯದ ಮುಖ್ಯಮಂತ್ರಿಗಳೇ ಬೆಂಗಳೂರಿನ ದುಸ್ಥಿತಿಯನ್ನು ನೋಡಿ ನಗೆಯಾಡುತ್ತಿರುವುದು “ಬ್ರ್ಯಾಂಡ್ ಬೆಂಗಳೂರು” ಎಂಬ ಘೋಷಣೆ ಬರೀ ಬೂಟಾಟಿಕೆ ಎನ್ನುವುದಕ್ಕೆ ಸಾಕ್ಷಿ ನುಡಿದಿದ್ದಾರೆ ಎಂದು ಇಬ್ಬಂದಿತನವೇ ಮಾನ್ಯ ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದ್ದಾರೆ.
ಕೆಲವು ವರದಿಗಳಂತೆ ಇಂದು ಬೆಂಗಳೂರು ಜಗತ್ತಿನ 2ನೇ ಅತಿ ಹೆಚ್ಚು ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ. ವಾಹನ ಸವಾರರು ವರ್ಷಕ್ಕೆ ಸರಾಸರಿ 168 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ವ್ಯರ್ಥ ಮಾಡುತ್ತಿದ್ದಾರೆ.
ಕಳೆದ 3 ವರ್ಷಗಳಲ್ಲಿ ಅಭಿವೃದ್ಧಿ ಹೆಸರಲ್ಲಿ, ಲೂಟಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ, ಮೆಟ್ರೋ, ಉಪನಗರ ರೈಲು ಹಾಗೂ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳ ವಿಳಂಬಕ್ಕೆ ಉತ್ತರಿಸಬೇಕಿದೆ. ನೆರೆಯ ರಾಜ್ಯದ ಸಿಎಂ ನಿಮ್ಮನ್ನು ಹಂಗಿಸುತ್ತಿದ್ದರೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ನಿಮ್ಮ ಮೌನಕ್ಕೆ ಕಾರಣವೇನು? ಈಗಲಾದರೂ ವ್ಯರ್ಥ ಪ್ರಚಾರದ ಮೋಹ ಬಿಟ್ಟು, ನೈಜ ಆಡಳಿತದ ಕಡೆ ಗಮನಹರಿಸಿ. ವಿಪಕ್ಷಗಳಿರಲಿ, ನಿಮ್ಮದೇ ಪಕ್ಷದ ನಾಯಕರು ನಿಮ್ಮನ್ನು ಟೀಕಿಸುವ ಅವಕಾಶ ಇನ್ನಾದರೂ ಕೊಡದೆ, ಬೆಂಗಳೂರಿನ ಸಮಸ್ಯೆಗಳತ್ತ ಗಮನ ಹರಿಸಿ! ಎಂದು ಸಲಹೆ ನೀಡಿದ್ದಾರೆ.
- Bengaluru Infrastructure
- Bengaluru Traffic
- Brand Bengaluru
- DK Shivakumar
- Karnataka Politics
- Metro Rail Delay
- Revanth Reddy on Bengaluru
- Siddaramaiah Govt
- Suburban Rail Project
- Traffic Congestion Report
- ಉಪನಗರ ರೈಲು ಯೋಜನೆ
- ಕರ್ನಾಟಕ ರಾಜಕೀಯ
- ಟ್ರಾಫಿಕ್ ದಟ್ಟಣೆ ವರದಿ
- ಡಿ. ಕೆ. ಶಿವಕುಮಾರ್
- ಬೆಂಗಳೂರು ಟ್ರಾಫಿಕ್
- ಬೆಂಗಳೂರು ಮೂಲಸೌಕರ್ಯ
- ಬ್ರ್ಯಾಂಡ್ ಬೆಂಗಳೂರು
- ಮೆಟ್ರೋ ವಿಳಂಬ
- ರೇವಂತ್ ರೆಡ್ಡಿ ಟೀಕೆ
- ಸಿದ್ದರಾಮಯ್ಯ ಸರ್ಕಾರ






Leave a comment