ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಹಣದ ಹಪಾಹಪಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು, ತನ್ನದೇ ಸಹಪಾಠಿಯನ್ನು ನಕಲಿ ಗನ್ ತೋರಿಸಿ ಅಪಹರಿಸಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಿಹಾರ, ಜಾರ್ಖಂಡ್, ಕೇರಳ ಮತ್ತು ಬೆಂಗಳೂರು ಮೂಲದ ನಾಲ್ವರು ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ. ಇವರು ಒಡಿಶಾ ಮೂಲದ ಮೋಹಂತಿ ಎಂಬ ವಿದ್ಯಾರ್ಥಿಯನ್ನು ಹಾಸ್ಟೆಲ್‌ನಿಂದ ಹೊರಗೆ ಕರೆಸಿಕೊಂಡು, ನಕಲಿ ಲೋಹದ ಗನ್ ತೋರಿಸಿ ಬೆದರಿಸಿ ಕಾರಿನಲ್ಲಿ ಅಪಹರಿಸಿದ್ದಾರೆ.
ನಂತರ ಆರೋಪಿಗಳು ಮೋಹಂತಿ ಸ್ನೇಹಿತರಿಗೆ ಕರೆ ಮಾಡಿ 50,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸ್ನೇಹಿತರು ಆರಂಭದಲ್ಲಿ 10,000 ರೂಪಾಯಿ ವರ್ಗಾಯಿಸಿದರಾದರೂ, ಸಂಶಯಗೊಂಡು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು, ಸಂತ್ರಸ್ತನನ್ನು ರಕ್ಷಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ನಕಲಿ ಗನ್, ಚಾಕು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.





Leave a comment